nammatumakuru

    Subscribe to Updates

    Get the latest creative news from FooBar about art, design and business.

    What's Hot

    14 ವರ್ಷದ ಬಾಲಕಿ ತಾಯಿಯಾದ ಪ್ರಕರಣ; ಪೋಕ್ಸೋ ಕೇಸ್ ದಾಖಲು: ನಾಲ್ವರು ವೈದ್ಯರ ವಿರುದ್ಧವೂ FIR

    July 13, 2026

    ಸರ್ಕಾರದ ಚಿತಾವಣೆಯಿಂದ ಬಿಡದಿ ಟೌನ್‌ ಶಿಪ್‌ ಗೆ ಸರ್ವೆ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

    July 13, 2026

    ಬಿಡದಿ ಟೌನ್‌ ಶಿಪ್‌ ಜಟಾಪಟಿ: ಸರ್ವೆಗೆ ಬಂದ ಅಧಿಕಾರಿಗಳಿಗೆ ರೈತರಿಂದ ಪೊರಕೆ ಏಟು!

    July 13, 2026
    Facebook Twitter Instagram
    ಟ್ರೆಂಡಿಂಗ್
    • 14 ವರ್ಷದ ಬಾಲಕಿ ತಾಯಿಯಾದ ಪ್ರಕರಣ; ಪೋಕ್ಸೋ ಕೇಸ್ ದಾಖಲು: ನಾಲ್ವರು ವೈದ್ಯರ ವಿರುದ್ಧವೂ FIR
    • ಸರ್ಕಾರದ ಚಿತಾವಣೆಯಿಂದ ಬಿಡದಿ ಟೌನ್‌ ಶಿಪ್‌ ಗೆ ಸರ್ವೆ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ
    • ಬಿಡದಿ ಟೌನ್‌ ಶಿಪ್‌ ಜಟಾಪಟಿ: ಸರ್ವೆಗೆ ಬಂದ ಅಧಿಕಾರಿಗಳಿಗೆ ರೈತರಿಂದ ಪೊರಕೆ ಏಟು!
    • ಸರಗೂರು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ: ಶಂಭುಮೂರ್ತಿ
    • ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ: ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್‌
    • ಮನೆಗೆ ಮರು ಪೇಂಟಿಂಗ್ ಮಾಡಿಸುವಾಗ ಈ ತಪ್ಪುಗಳನ್ನು ಮರೆತೂ ಮಾಡಬೇಡಿ!
    • ತುಮಕೂರು: ಎಸ್ ಐಆರ್ ಗೊಂದಲ, ಹೆಲ್ಪ್ ಲೈನ್ ಗೆ ಚಾಲನೆ ನೀಡಿದ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ
    • ತುಮಕೂರು: ಮಕ್ಕಳ ಜನನ ಪ್ರಮಾಣಪತ್ರ ಲೋಪದೋಷ ನಿವಾರಣೆಗೆ ಸರ್ಕಾರಿ ಆದೇಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತೋವಿನಕೆರೆ ಗ್ರಾ.ಪಂ. ಬಿಲ್‌ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಲೋಕಾಯುಕ್ತ ಬಲೆಗೆ
    ಕೊರಟಗೆರೆ October 16, 2025

    ತೋವಿನಕೆರೆ ಗ್ರಾ.ಪಂ. ಬಿಲ್‌ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಲೋಕಾಯುಕ್ತ ಬಲೆಗೆ

    By adminOctober 16, 2025No Comments2 Mins Read
    thovinakere

    ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ವಾಸಿಯಾದ ಟಿ.ಕೆ.ಮೊಹಮ್ಮದ್ ಅದೇ ಗ್ರಾಮದ ಮಂಜಮ್ಮ ಎಂಬುವವರ ಹೆಸರಿನಲ್ಲಿದ್ದ ಮನೆ ಮತ್ತು ಖಾಲಿ ನಿವೇಶನವನ್ನು ಕ್ರಯಕ್ಕೆ ಖರೀದಿ ಮಾಡಿದ್ದು. ಕೊರಟಗೆರೆ ಸಬ್‌ ರಿಜಿಸ್ಟ್ರಾರ್ ಕಛೇರಿಯಲ್ಲಿ ದಿನಾಂಕ:01/08/2025 ರಂದು ನೋಂದಣಿಯಾಗಿರುತ್ತದೆ. ಕ್ರಯ ಪತ್ರದಂತೆ ಸದರಿ ಮನೆ ಮತ್ತು ಖಾಲಿ ನಿವೇಶನದ ಖಾತೆಯನ್ನು ಮಂಜಮ್ಮ ರವರ ಹೆಸರಿನಿಂದ ತನ್ನ ಹೆಸರಿಗೆ ಬದಲಾವಣೆ ಮಾಡಿಕೊಡುವಂತೆ ತೋವಿನಕೆರೆ ಗ್ರಾಮ ಪಂಚಾಯಿತಿಗೆ ದಿನಾಂಕ:12/08/2025 ರಂದು ಟಿ.ಕೆ.ಮೊಹಮ್ಮದ್ ರವರು ಅರ್ಜಿ ಸಲ್ಲಿಸಿರುತ್ತಾರೆ.

    ಅರ್ಜಿ ಸಲ್ಲಿಸಿ ಸುಮಾರು ಎರಡು ತಿಂಗಳು ಕಳೆಯುತ್ತಾ ಬಂದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಖಾತೆ ಬದಲಾವಣೆ ಮಾಡಿಕೊಡದ ಕಾರಣ ದೂರುದಾರ ಟಿ.ಕೆ. ಮೊಹಮ್ಮದ್ ರವರು ದಿನಾಂಕ: 09/10/2025 ರಂದು ತೋವಿನಕರೆ ಗ್ರಾಮ ಪಂಚಾಯಿತಿ ಕಛೇರಿಗೆ ಭೇಟಿ ನೀಡಿ, ಬಿಲ್‌ ಕಲೆಕ್ಟ‌ರ್ ಮಾರುತಿ ರವರನ್ನ ಸಂಪರ್ಕಿಸಿದಾಗ, ಮಾರುತಿರವರು ಖಾತೆ ಬದಲಾವಣೆ ಮಾಡಿಕೊಡಲು 10,800 ರೂ. ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.

    ತದನಂತರ ದಿನಾಂಕ:14/10/2025 ರಂದು ದೂರುದಾರ ಟಿ.ಕೆ.ಮೊಹಮ್ಮದ್ ಮತ್ತೊಮ್ಮೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಹಣ ಕಡಿಮೆ ಮಾಡಿಕೊಳ್ಳುವಂತೆ ಕೇಳಿದಾಗ ಬಿಲ್‌ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾರವರು 8,000 ರೂ. ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ.

    ದೂರುದಾರ ಟಿ.ಕೆ.ಮೊಹಮ್ಮದ್ ರವರಿಗೆ ಲಂಚ ನೀಡಲು ಇಷ್ಟವಿಲ್ಲದೇ, ದಿನಾಂಕ: 15/10/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿರುತ್ತಾರೆ.

    ಪೊಲೀಸ್ ನಿರೀಕ್ಷಕರಾದ ರಾಜು ಟಿ.ರವರು ಮೊ.ನಂ:08/2025 ಕಲಂ–7(a) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ–2018) ರಂತೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.

    ದಿನಾಂಕ:16/10/2025 ರಂದು ಟ್ರ್ಯಾಪ್ ಕಾರ್ಯಾಚರಣೆ ವೇಳೆ ತೋವಿನಕೆರೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಬೆಳ್ಳಿಗ್ಗೆ 10.45 ಗಂಟೆಗೆ 8,000 ರೂ. ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮ ರವರನ್ನು ತನಿಖಾಧಿಕಾರಿ  ರಾಜು.ಟಿ, ಪೊಲೀಸ್ ನಿರೀಕ್ಷಕರು ರವರ ನೇತೃತ್ವದ ತಂಡ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ.

    ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್ ಕೆ.ಎಂ.ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ರಾಜು.ಟಿ, ಬಿ.ಮೊಮ್ಮದ್ ಸಲೀಂ, ಕೆ.ಸುರೇಶ ಮತ್ತು ಶಿವರುದ್ರಪ್ಪ ಮೇಟಿ ಮತ್ತು ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಲಂಚ ಸ್ವೀಕರಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತದೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು

    July 11, 2026

    ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ

    July 9, 2026

    ತೋವಿನಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಸೈಟ್ ಹಂಚಿಕೆಯಲ್ಲಿ ಅಕ್ರಮ: ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ

    July 8, 2026

    Leave A Reply Cancel Reply

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    14 ವರ್ಷದ ಬಾಲಕಿ ತಾಯಿಯಾದ ಪ್ರಕರಣ; ಪೋಕ್ಸೋ ಕೇಸ್ ದಾಖಲು: ನಾಲ್ವರು ವೈದ್ಯರ ವಿರುದ್ಧವೂ FIR

    July 13, 2026

    ಹುಬ್ಬಳ್ಳಿ: 14 ವರ್ಷದ ಅಪ್ರಾಪ್ತ ಬಾಲಕಿಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಬೆರಗುಗೊಳಿಸುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಈ…

    ಸರ್ಕಾರದ ಚಿತಾವಣೆಯಿಂದ ಬಿಡದಿ ಟೌನ್‌ ಶಿಪ್‌ ಗೆ ಸರ್ವೆ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

    July 13, 2026

    ಬಿಡದಿ ಟೌನ್‌ ಶಿಪ್‌ ಜಟಾಪಟಿ: ಸರ್ವೆಗೆ ಬಂದ ಅಧಿಕಾರಿಗಳಿಗೆ ರೈತರಿಂದ ಪೊರಕೆ ಏಟು!

    July 13, 2026

    ಸರಗೂರು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ: ಶಂಭುಮೂರ್ತಿ

    July 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.