nammatumakuru

    Subscribe to Updates

    Get the latest creative news from FooBar about art, design and business.

    What's Hot

    ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ವೃದ್ಧಾಶ್ರಮಗಳಿಗೆ ದಿನಸಿ, ಹಣ್ಣು ವಿತರಣೆ

    November 25, 2026

    ಕೈದಾಳದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ | ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಗಣ್ಯರು

    November 25, 2026

    ಹೆಬ್ಬೂರಿನಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ :  ಗ್ರಾಮೀಣ ಜನರಿಗೆ ಸರ್ಕಾರಿ ಸೇವೆಗಳು ತ್ವರಿತವಾಗಿ ದೊರೆಯಲು ಅನುಕೂಲ: ಡಾ.ಜಿ.ಪರಮೇಶ್ವರ್

    November 25, 2026
    Facebook Twitter Instagram
    ಟ್ರೆಂಡಿಂಗ್
    • ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ವೃದ್ಧಾಶ್ರಮಗಳಿಗೆ ದಿನಸಿ, ಹಣ್ಣು ವಿತರಣೆ
    • ಕೈದಾಳದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ | ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಗಣ್ಯರು
    • ಹೆಬ್ಬೂರಿನಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ :  ಗ್ರಾಮೀಣ ಜನರಿಗೆ ಸರ್ಕಾರಿ ಸೇವೆಗಳು ತ್ವರಿತವಾಗಿ ದೊರೆಯಲು ಅನುಕೂಲ: ಡಾ.ಜಿ.ಪರಮೇಶ್ವರ್
    • 300 ಮೊಟ್ಟೆ ಚಾಕಿಯಿಂದ 250 ಕೆ.ಜಿ. ರೇಷ್ಮೆ ಗೂಡು ಉತ್ಪಾದನೆ ಸಾಧ್ಯ: ಮೋಹನ್
    • ಸಂಪಾದಕೀಯ: ಆರ್ಥಿಕ ಪಾರದರ್ಶಕತೆಯ ಕವಚ — ಕಾರ್ಪೊರೇಟ್ ವಲಯದಲ್ಲಿ UDIN ಕಡ್ಡಾಯ ನಿಯಮದ ಮಹತ್ವ
    • ಮನುಷ್ಯನಿಗೆ ಆರೋಗ್ಯವೇ ನಿಜವಾದ ಭಾಗ್ಯ: ಡಾ.ಹನುಮಂತನಾಥ ಸ್ವಾಮೀಜಿ
    • ವಿವಾಹ ಪ್ರಮಾಣಪತ್ರ ಪಡೆಯುವ ವಿಧಾನ ಇಲ್ಲಿದೆ! | ವಿವಾಹ ಪ್ರಮಾಣಪತ್ರ ಇಲ್ಲದಿದ್ದರೆ ಏನೆಲ್ಲ ತೊಂದರೆ?
    • ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?
    ರಾಷ್ಟ್ರೀಯ ಸುದ್ದಿ November 25, 2026

    ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?

    By Ganesh TumkuruNovember 25, 2026No Comments2 Mins Read
    bank protest

    ಬ್ಯಾಂಕ್‌ ಗಳ ಖಾಸಗೀಕರಣ ನೀತಿಯನ್ನು ವಿರೋಧಿಸಿ ಡಿಸೆಂಬರ್ 3ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿವೆ. AIBEA, AIBOA ಮತ್ತು BEFI ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಮುಷ್ಕರದಲ್ಲಿ ವಿವಿಧ ಬ್ಯಾಂಕ್‌ಗಳ ನೌಕರರು ಹಾಗೂ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.

    ಮುಷ್ಕರದ ಹಿನ್ನೆಲೆಯಲ್ಲಿ ಅಂದು ಬ್ಯಾಂಕ್‌ಗಳ ಶಾಖೆಗಳಲ್ಲಿ ನಡೆಯುವ ಸಾಮಾನ್ಯ ಸೇವೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಹಣ ಜಮೆ, ಹಣ ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಕೆಲವು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ವಿಳಂಬವಾಗಬಹುದು. ಹೀಗಾಗಿ ಗ್ರಾಹಕರು ಮುಂಚಿತವಾಗಿಯೇ ತಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.

    ಐಡಿಬಿಐ ಬ್ಯಾಂಕ್‌ನ ಖಾಸಗೀಕರಣ ಪ್ರಕ್ರಿಯೆಯೇ ಈ ಮುಷ್ಕರಕ್ಕೆ ಪ್ರಮುಖ ಕಾರಣ ಎಂದು ಸಂಘಟನೆಗಳು ತಿಳಿಸಿವೆ. ಪ್ರಸ್ತುತ ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (LIC) ಒಟ್ಟಾಗಿ ಐಡಿಬಿಐ ಬ್ಯಾಂಕ್‌ನಲ್ಲಿ ಸುಮಾರು ಶೇ.94ರಷ್ಟು ಪಾಲನ್ನು ಹೊಂದಿವೆ. ಇದರಲ್ಲಿ ಶೇ.60ರಷ್ಟು ಪಾಲನ್ನು ಫೇರ್‌ಫಾಕ್ಸ್ ಸಂಸ್ಥೆಗೆ ಮಾರಾಟ ಮಾಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿರುವುದನ್ನು ಬ್ಯಾಂಕ್ ನೌಕರರ ಸಂಘಟನೆಗಳು ವಿರೋಧಿಸುತ್ತಿವೆ.ಈ ನಿರ್ಧಾರದಿಂದ ಫೇರ್‌ಫಾಕ್ಸ್ ಸಂಸ್ಥೆ ಬ್ಯಾಂಕ್‌ನ ಪ್ರವರ್ತಕ ಸಂಸ್ಥೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಐಡಿಬಿಐ ಬ್ಯಾಂಕ್ ನೌಕರರು ಖಾಸಗೀಕರಣದ ವಿರುದ್ಧ ಪ್ರತಿಭಟನೆ ನಡೆಸಿದ್ದರೂ, ಸರ್ಕಾರದ ನಿರ್ಧಾರದಲ್ಲಿ ಬದಲಾವಣೆ ಆಗಿಲ್ಲ ಎಂದು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಇದೀಗ ಇತರ ಬ್ಯಾಂಕ್‌ಗಳ ನೌಕರರೂ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

    ಐಡಿಬಿಐ ಬ್ಯಾಂಕ್ ಸುಮಾರು 3.50 ಲಕ್ಷ ಕೋಟಿ ರೂ. ಠೇವಣಿ ಹಾಗೂ 2.50 ಲಕ್ಷ ಕೋಟಿ ರೂ. ಮುಂಗಡ ಸಾಲ ಹೊಂದಿದ್ದು, ಒಟ್ಟು ವ್ಯವಹಾರದ ಪ್ರಮಾಣ ಸುಮಾರು 6 ಲಕ್ಷ ಕೋಟಿ ರೂ. ಇದೆ ಎಂದು ಸಂಘಟನೆಗಳು ಹೇಳಿವೆ. ಇಂತಹ ದೊಡ್ಡ ಪ್ರಮಾಣದ ವ್ಯವಹಾರ ಹೊಂದಿರುವ ದೇಶೀಯ ಬ್ಯಾಂಕ್‌ನ ಪಾಲನ್ನು ವಿದೇಶಿ ಸಂಸ್ಥೆಗೆ ಮಾರಾಟ ಮಾಡುವುದರಿಂದ ಬ್ಯಾಂಕಿನ ಸ್ವರೂಪ ಬದಲಾಗುವ ಆತಂಕವಿದೆ ಎಂಬುದು ನೌಕರರ ಒಕ್ಕೂಟಗಳ ವಾದವಾಗಿದೆ.ಹಿಂದೆ ಆಡಳಿತಾತ್ಮಕ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಲವು ಖಾಸಗಿ ಬ್ಯಾಂಕ್‌ಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಿಲೀನಗೊಳಿಸಿಕೊಂಡು ಅಥವಾ ಸ್ವಾಧೀನಪಡಿಸಿಕೊಂಡು ನಿರ್ವಹಿಸಿದ್ದವು. ಹೀಗಿರುವಾಗ ಸರ್ಕಾರಿ ಬ್ಯಾಂಕ್‌ಗಳನ್ನು ಖಾಸಗಿ ಅಥವಾ ವಿದೇಶಿ ಹೂಡಿಕೆದಾರರಿಗೆ ಮಾರಾಟ ಮಾಡುವ ಬದಲು, ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

    ಖಾಸಗೀಕರಣದಿಂದ ಸಾರ್ವಜನಿಕರ ಉಳಿತಾಯಕ್ಕೆ ಅಪಾಯವೇ?

    ಬ್ಯಾಂಕ್‌ಗಳ ಖಾಸಗೀಕರಣವು ಸಾರ್ವಜನಿಕರ ಉಳಿತಾಯದ ಹಣವನ್ನು ಖಾಸಗಿ ಸಂಸ್ಥೆಗಳ ನಿಯಂತ್ರಣಕ್ಕೆ ಒಪ್ಪಿಸಿದಂತಾಗುತ್ತದೆ ಎಂದು ಸಂಘಟನೆಗಳು ಟೀಕಿಸಿವೆ. ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲಗಳಿಗೆ (NPA) ಖಾಸಗಿ ಕಾರ್ಪೊರೇಟ್ ಸಂಸ್ಥೆಗಳೇ ಪ್ರಮುಖ ಕಾರಣ ಎಂದು ಆರೋಪಿಸಿರುವ ಅವು, ಸುಸ್ತಿದಾರರಿಂದ ಸಾಲ ವಸೂಲಿ ಮಾಡುವ ಬದಲು ಸಾಲ ಮನ್ನಾ ಅಥವಾ ರಿಯಾಯಿತಿ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿವೆ.

    ಬ್ಯಾಂಕ್‌ಗಳು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಮತ್ತೆ ಖಾಸಗಿ ಕಾರ್ಪೊರೇಟ್ ವಲಯಕ್ಕೆ ಬ್ಯಾಂಕ್‌ಗಳನ್ನು ಹಸ್ತಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂಬುದು ಸಂಘಟನೆಗಳ ಆರೋಪ. ಈ ನೀತಿಯನ್ನು ವಿರೋಧಿಸಿ ಹಾಗೂ ಐಡಿಬಿಐ ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆಯನ್ನು ತಡೆಯುವ ಉದ್ದೇಶದಿಂದ ಡಿಸೆಂಬರ್ 3ರಂದು ಮುಷ್ಕರಕ್ಕೆ ಕರೆ ನೀಡಿರುವುದಾಗಿ AIBEA, AIBOA ಮತ್ತು BEFI ಸಂಘಟನೆಗಳು ತಿಳಿಸಿವೆ.

    ಮುಷ್ಕರದ ಕುರಿತು AIBEA, AIBOA ಮತ್ತು BEFI ಸಂಘಟನೆಗಳು ನವೆಂಬರ್ 19ರಂದು ಪ್ರಕಟಣೆ ಹೊರಡಿಸಿದ್ದು, ಡಿಸೆಂಬರ್ 3ರಂದು ಐಡಿಬಿಐ ನೌಕರರ ಮುಷ್ಕರಕ್ಕೆ ಬೆಂಬಲವಾಗಿ ಇತರ ಬ್ಯಾಂಕ್‌ಗಳ ನೌಕರರು ಮತ್ತು ಅಧಿಕಾರಿಗಳು ಸಾಂಕೇತಿಕ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿವೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಎಸ್‌ ಬಿಐನಲ್ಲಿ ₹1 ಲಕ್ಷ ವೈಯಕ್ತಿಕ ಸಾಲ ಪಡೆದರೆ EMI ಎಷ್ಟು? ಬಡ್ಡಿದರದ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ!

    November 25, 2026

    ಆಡಿಟ್ ಹೆಸರಿನಲ್ಲಿ ಉದ್ಯಮಿಗಳಿಗೆ ಕಿರುಕುಳ? ₹4 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು CGST ಅಧೀಕ್ಷಕರಿಗೆ ಸಿಬಿಐ ಶಾಕ್!

    November 24, 2026

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    Leave A Reply Cancel Reply

    Our Picks

    ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?

    November 25, 2026

    ಎಸ್‌ ಬಿಐನಲ್ಲಿ ₹1 ಲಕ್ಷ ವೈಯಕ್ತಿಕ ಸಾಲ ಪಡೆದರೆ EMI ಎಷ್ಟು? ಬಡ್ಡಿದರದ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ!

    November 25, 2026

    ಆಡಿಟ್ ಹೆಸರಿನಲ್ಲಿ ಉದ್ಯಮಿಗಳಿಗೆ ಕಿರುಕುಳ? ₹4 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು CGST ಅಧೀಕ್ಷಕರಿಗೆ ಸಿಬಿಐ ಶಾಕ್!

    November 24, 2026

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ವೃದ್ಧಾಶ್ರಮಗಳಿಗೆ ದಿನಸಿ, ಹಣ್ಣು ವಿತರಣೆ

    November 25, 2026

    ಮಧುಗಿರಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ…

    ಕೈದಾಳದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ | ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಗಣ್ಯರು

    November 25, 2026

    ಹೆಬ್ಬೂರಿನಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ :  ಗ್ರಾಮೀಣ ಜನರಿಗೆ ಸರ್ಕಾರಿ ಸೇವೆಗಳು ತ್ವರಿತವಾಗಿ ದೊರೆಯಲು ಅನುಕೂಲ: ಡಾ.ಜಿ.ಪರಮೇಶ್ವರ್

    November 25, 2026

    300 ಮೊಟ್ಟೆ ಚಾಕಿಯಿಂದ 250 ಕೆ.ಜಿ. ರೇಷ್ಮೆ ಗೂಡು ಉತ್ಪಾದನೆ ಸಾಧ್ಯ: ಮೋಹನ್

    November 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.