ಸರಗೂರು: ಪಟ್ಟಣದ 4ನೇ ವಾರ್ಡಿನಲ್ಲಿ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಿಂಗಕ್ಕೆ ಕೊಳಗ ಪ್ರತಿಷ್ಠಾಪನೆ ಭಾನುವಾರದಂದು ವಾರ್ಡಿನ ಮುಖಂಡ ಸಮ್ಮುಖದಲ್ಲಿ ನೆರವೇರಿತು.
ಸರಗೂರು ನಾಡದೇಶ ಯಜಮಾನರು ಗಣೇಶ ಅವರು ಲಿಂಗಕ್ಕೆ ಕೊಳಗವನ್ನು ಬಳುವಳಿಯಾಗಿ ನೀಡಿ ಸಾಂಪ್ರದಾಯಕವಾಗಿ ಪೂಜಾ ಕಾರ್ಯ ನೆರವೇರಿಸಿ ಕೊಳಗವನ್ನು ಪ್ರತಿಷ್ಠಾಪನೆ ಮಾಡಿಕೊಟ್ಟರು.
ಬಳಿಕ ಮಾತನಾಡಿದ ಅವರು, ದೇವಸ್ಥಾನದ ಉದ್ಘಾಟನೆ ಸಂದರ್ಭದಲ್ಲಿ ನಾನು ಸಮಾಜಕ್ಕೆ ಕೊಳಗವನ್ನು ಬೆಳವಳಿಯಾಗಿ ನೀಡುವುದಾಗಿ ತಿಳಿಸಿದ್ದೆ, ಅದರಂತೆ ನಾನು ನಿಮಗೆ ನೀಡಿದ್ದೇನೆ, ಸರಗೂರು ಪಟ್ಟಣದಲ್ಲಿ ಎಲ್ಲ ಸಮಾಜವು ಸೇರಿ ಚಂದ್ರಮೌಳೇಶ್ವರ ಗರಡಿ ಬಸಪ್ಪ ಹಾಗೂ ನಾಡ ದೇವತೆಯ ಮಾರಮ್ಮನ ದೊಡ್ಡ ಹಬ್ಬವನ್ನು ಮಾಡುತ್ತಿದ್ದೆವು. ಆದರೆ ಬದಲಾವಣೆಯನ್ನು ಬಯಸಿ ಹೊಂದಾಣಿಕೆಯಾಗದೆ ಇದ್ದದ್ದರಿಂದ ಸರಗೂರಿನಲ್ಲಿ ನಡೆಯುತ್ತಿದ್ದ ವಿಶೇಷವಾದ ಹಬ್ಬ ಸುಮಾರು ವರ್ಷಗಳಿಂದ ನಿಂತು ಹೋಗಿದೆ ಈ ಹಬ್ಬವನ್ನು ನಾವೆಲ್ಲರೂ ಸೇರಿ ಮುಂದುವರಿಸಿಕೊಂಡು ಹೋಗಬೇಕೆಂಬುದು ನನ್ನ ಮನವಿ ಎಂದ ಅವರು, ಇಲ್ಲಿ ವಿಚಾರವನ್ನು ನಿಮ್ಮ ಸಮುದಾಯದ ಮುಖಂಡರು ಮಾತುಕತೆ ನಡೆಸಿ ನಮಗೆ ತಿಳಿಸಿದ ನಂತರ ನಾವು ಎಲ್ಲಾ ಸಮುದಾಯ ಒಂದು ದಿನ ಸಭೆ ನಡೆಸಲಾಗುವುದು ಎಂದು ಹೇಳಿದರು.
ಮುಖಂಡರಾದ ಇದಿಯಪ್ಪನವರು ಮಾತನಾಡಿ, ನಮ್ಮದು ಯಾವುದೇ ತಕರಾರ್ ಇಲ್ಲ ಆದರೆ ಬದಲಾವಣೆ ಬಯಸಿರುವ ರೀತಿ ಮಾಡಿದರೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು. ಹೀಗೆ ಹಲವಾರು ಮುಖಂಡರು ಮಾತನಾಡಿ ತಿಳಿಸುತ್ತೇವೆ ಎಂದು ಹೇಳಿದರು.
ಅಂಬೇಡ್ಕರ್ ಟ್ರಸ್ಟ್ ನ ಅಧ್ಯಕ್ಷ ಸಣ್ಣಸ್ವಾಮಿ ಎಸ್.ಡಿ. ಅವರು ಮಾತನಾಡಿ, ನೀವು ವಿಚಾರವನ್ನು ಮಂಡನೆ ಮಾಡಿದ್ದೀರಿ, ಈ ವಿಚಾರದ ಬಗ್ಗೆ ನಾಯಕ ಸಮುದಾಯವನ್ನು ಕೇಳಿ ನಂತರ ಎಲ್ಲರೂ ಕೂತು ಚರ್ಚೆ ಮಾಡಿ ಒಂದು ಒಳ್ಳೆಯ ನಿರ್ಧಾರಕ್ಕೆ ಬರೋಣ ಎಂದರು.
ಈ ಸಂದರ್ಭದಲ್ಲಿ ಎಲ್ಲಾ ಜನಾಂಗದ ಮುಖಂಡರಿಗೆ ದಲಿತ ಸಮುದಾಯದವರು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಯಜಮಾನರು ಭೋಗಪ್ಪ, ಗಡಿಗೆ ಯಜಮಾನರು ಮಹಾದೇವಯ್ಯ, ನಾಡು ದೇಶದ ಯಜಮಾನ ಗಣೇಶ್, ತೊಗಟವೀರ ಸಮಾಜದ ಅಧ್ಯಕ್ಷ ರವಿ, ಈಡಿಗ ಸಮಾಜದ ಮುಖಂಡ ಕರಿಯಪ್ಪ, ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಶಿವಕುಮಾರ್, ಲಿಂಗಾಯತ ಸಮಾಜದ ಶ್ರೀಕಂಠ ಸ್ವಾಮಿ, ಮಹೇಶ್, ಟ್ರಸ್ಟ್ ಖಜಾಂಚಿ ಕಾರಯ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ, ಕೃಷ್ಣ,ಹಾಗೂ ಗ್ರಾಮದ ಮುಖಂಡರು ಇದಿಯಪ್ಪ, ಸುಬ್ರಮಣ್ಯ, ಹನುಮಂತಯ್ಯ, ಜವರಯ್ಯ, , ಸಿದ್ದಯ್ಯ ,ಹನುಮಂತಯ್ಯ, ಗ್ರಾಮಸ್ಥರು ಮಹಿಳೆಯರು ಭಾಗವಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC