ತಿಪಟೂರು: ಗ್ರಾಮಾಂತರ ಧರ್ಮಸ್ಥಳ ಯೋಜನಾ ಕಚೇರಿಯಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಪೂಜೆಯಲ್ಲಿ ಗಣ ಹೋಮ, ವಾಹನಗಳ ಪೂಜೆ, ಲಕ್ಷ್ಮಿ ಪೂಜೆಯನ್ನು ನೆರವೇರಿಸಲಾಯಿತು. ಈ ಪೂಜೆಗೆ ಗುರುಕುಲ ಮಠದ ಇಮ್ಮಡಿ ಬಸವ ದೇಶೀ ಕೇಂದ್ರ ಸ್ವಾಮೀಜಿ ರವರು ಆಗಮಿಸಿ ಶುಭ ಹಾರೈಸಿದರು.
ಶಾಸಕರಾದ ಕೆ. ಷಡಕ್ಷರಿ, ತಹಶೀಲ್ದಾರ್ ಮೋಹನ್, ನಿವೃತ್ತ ACP ಲೋಕೇಶ್ವರ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರು, ಒಕ್ಕೂಟ ಪದಾಧಿಕಾರಿಗಳು, ತಾಲೂಕಿನ ಗಣ್ಯರು, ತಾಲೂಕಿನ ಪತ್ರಕರ್ತರು, ಹಾಗೂ ಯೋಜನೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC