ತುರುವೇಕೆರೆ: ಇಂದು ತುರುವೇಕೆರೆಯ ಪ್ರವಾಸಿಮಂದಿರದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಸಲುವಾಗಿ (ವ್ಯಾಪ್ತಿ — ತುಮಕೂರುˌ ಚಿತ್ರದುರ್ಗˌ ಚಿಕ್ಕಬಳ್ಳಾಪುರˌ ದಾವಣಗೆರೆˌ ಕೋಲಾರ) ಈ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಸ್ವಯಂಪ್ರೇರಿತರಾಗಿ ಬಂದು ತಮ್ಮ ತಮ್ಮ ತಾಲ್ಲೂಕು ಕಛೇರಿಯಲ್ಲಿ ನೋಂದಾಯಿಸಬೇಕೆಂದು ಡಿ.ಪಿ. ವೇಣುಗೋಪಾಲ್ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಭಾರತ ಚುನಾವಣಾ ಆಯೋಗವು ದಿನಾಂಕ 30.09.2025 ರಿಂದ ದಿನಾಂಕ 06.11.2025 ರವರೆಗೆ ಕಾಲಾವಕಾಶ ನಿಗದಿಪಡಿಸಿದ್ದು, ಎಲ್ಲಾ ಅರ್ಹ ಪದವೀಧರರು ನಮೂನೆ 18 ರಲ್ಲಿ ಪೂರಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಲು ಕೋರಿದರು.
ಅಕ್ಟೋಬರ್ 30ಕ್ಕೆ ಪದವಿ ಉತ್ತೀರ್ಣರಾಗಿ ಮೂರು ವರ್ಷ ತುಂಬಿರಬೇಕು.
ಈಗಾಗಲೇ ನೋಂದಣಿಯಾಗಿ ಮತದಾನ ಮಾಡಿದ ಪದವೀಧರರು ಮರು ನೋಂದಣಿ ಮಾಡಿಕೊಳ್ಳಬೇಕು.
ಅರ್ಜಿಗಳನ್ನು ಸಲ್ಲಿಸಲು ಬೇಕಾದ ದಾಖಲೆಗಳು:
1) ಪದವಿ ಕಾನ್ವೋಕೇಶನ್ ಸರ್ಟಿಫಿಕೇಟ್
2) ಆಧಾರ್ ಕಾರ್ಡ್
3) ಚುನಾವಣಾ ಗುರುತಿನ ಚೀಟಿ
4) ಪಾಸ್ಪೋರ್ಟ್ ಫೋಟೋ ಎರಡು ಬ್ಯಾಗ್ರೌಂಡ್ ಬಿಳಿ ಬಣ್ಣ ಇರುವ ಫೋಟೋ
ಅಥವಾ ಕನ್ವೊಕೇಶನ್ ಸರ್ಟಿಫಿಕೇಟ್ ಇಲ್ಲದಿದ್ದಲ್ಲಿ ಮೂರು ವರ್ಷದ ಪದವಿಯ ಅಂಕಪಟ್ಟಿಗಳು ನಕಲು ಪ್ರತಿ , ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾವಣೆ ಆಗಿರುವ ತಾಲೂಕಿನಲ್ಲಿ ಚುನಾವಣಾ ಶಾಖೆಯಲ್ಲಿ ಅರ್ಜಿ ಸಲ್ಲಿಸಿ ಪದವೀಧರ ಮತದಾರರ ಪಟ್ಟಿಗೆ ನಿಮ್ಮ ಹೆಸರನ್ನು ಸೇರಿಸಿಕೊಳ್ಳಲು ಪದವಿ ಮೂರು ವರ್ಷ ಪೂರ್ಣಗೊಂಡ ಎಲ್ಲ ಪದವೀಧರರು ನಮೂನೆ 18 ರಲ್ಲಿ ಅರ್ಜಿ ಸಲ್ಲಿಸಿ.ನೋಂದಣಿ ಮಾಡಿಸಿಕೊಳ್ಳಿ, ಸರ್ಕಾರಿ ನೌಕರರು ತಮ್ಮ ಬಟವಾಡೆ ಅಧಿಕಾರಿಗಳಿಂದ ದೃಢೀಕರಣ ಪಡದು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಪಿ.ವೇಣುಗೋಪಾಲ್, ಉಪನ್ಯಾಸಕರಾದ ವಾಸು ಟಿ.ವಿ.ˌ ಹರೀಶ್ ˌ ಶಿವಾನಂದ ಹೆಚ್.ಟಿˌ ಪೃಥ್ವಿರಾಜ್ ಡಿ.ಪಿ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



