ಸರಗೂರು: ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿದವರು ಕನಕದಾಸರು ಎಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಬಿ.ಆನಂದ ನುಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರದಂದು ಹಮ್ಮಿಕೊಂಡಿದ್ದ 538 ನೇ ಕನಕದಾಸರ ಜಯಂತಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಹಾಗೂ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕನಕದಾಸರು ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಕೊಂಡೊಯ್ದಂತಹ ಮಹಾನ್ ದಾಸರಾಗಿದ್ದರು. ದಾಸ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಸುಧಾರಣೆಗೆ ಮುಂದಾಗಿ ತಮ್ಮ ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ಐಕ್ಯತೆ ಮೂಡಿಸುವ ಕಾರ್ಯ ಮಾಡಿದ ಮಹಾನ ಸಂತರಾಗಿದ್ದರು ಎಂದರು.
ಸಮಾಜದ ಮುಖಂಡ ಮಾಲೆಗೌಡ ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದಿಂದ ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ದೊರೆತಿದೆಯೇ ಹೊರತು ಹೋರಾಟದಿಂದ ಅಲ್ಲ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಕನಕದಾಸರು, ಬಸವಣ್ಣನವರು ಕನ್ನಡದಲ್ಲೆ ಬರೆದರೆ ಹೊರತು ಸಂಸ್ಕೃತದಲ್ಲಿ ಸಾಹಿತ್ಯ ರಚಿಸಲಿಲ್ಲ. ಈ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು. ವರ್ಗರಹಿತ ಸಮಾಜವನ್ನು ಕಟ್ಟಲು ಶ್ರಮಿಸಿದವರು ಕನಕದಾಸರು ಎಂದು ವಿವರಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕ ಹಾಲಪ್ಪರವರು ಇಂದು ಕಳ್ಳತನ ಮಾಡಿ, ಸುಳ್ಳು ಹೇಳಿ ತೀರ್ಥ ಮಾಡುತ್ತಾರೆ. ಭೂಮಿ ನುಂಗಿ ಭಗವಂತನಿಗೆ ಆಭರಣಗಳನ್ನು ಹಾಕುತ್ತಾರೆ. ಅಪ್ಪ–ಅಮ್ಮನಿಗೆ ಊಟ ಹಾಕುವುದಿಲ್ಲ. ಆದರೆ, ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮಾಡುವ ಜನರಿದ್ದಾರೆ. ಇಂತವರನ್ನು ನೋಡಿಯೇ ಕನಕದಾಸರು, `ಅಪ್ಪ–ಅಮ್ಮನಿಗೆ ಊಟ ಹಾಕದೆ ತೀರ್ಥ ಯಾತ್ರೆ ಮಾಡಿದರೇನು ಫಲ ಎಂದು ಹೇಳಿದ್ದಾರೆ.
ಸಿರಿವಂತರಾದ ಕಾಲಕ್ಕೆ ಕರೆದು ದಾನ ಮಾಡು ಎಂದು ಹೇಳಿದ್ದಾರೆ. ದ್ವೇಷ, ಅಸೂಯೆ, ಅಹಂಕಾರ ತೊರೆದು ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದ ಮಹಾನ್ ದಾರ್ಶನಿಕ ಕನಕದಾಸರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶೀರಲ್ತಾರ್ ಮನೋಹರ್. ಪಪಂ ಅಧ್ಯಕ್ಷ ಶಿವಕುಮಾರ್, ಶ್ರೀನಿವಾಸ, ಮಾತನಾಡಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಶಿವಕುಮಾರ್, ಸದಸ್ಯ ಶ್ರೀನಿವಾಸ, ಚೆಲುವ ಕೃಷ್ಣ,ಚೈತ್ರ ಸ್ವಾಮಿ, ಸಮಾಜದ ಮುಖಂಡರು ಪುಟ್ಟೇಗೌಡ, ಗಿರೀಶ್, ಚಿಕ್ಕಣ್ಣ, ನಾಗೇಗೌಡ, ದೇವರಾಜು, ಸಂತೋಷ್, ಅಹಿಂದ ಸಂಘದ ಅಧ್ಯಕ್ಷ ರಮೇಶ, ಆನಂದ, ಚಿನ್ನಸ್ವಾಮಿ ದಡದಹಳ್ಳಿ, ತಮ್ಮಣ್ಣ, ದಡದಹಳ್ಳಿ ಶಿವರಾಜು, ರಾಜಣ್ಣ, ಪ್ರಭು ಬರಗಿ, ರಮೇಶ್, ಗಣೇಶ, ಪಾಪಣ್ಣ, ರಾಜಪ್ಪ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ, ಗೋವಿಂದ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಶಿವರಾಜು, ತಾಲೂಕು ಪಂಚಾಯಿತಿ ನೇರಾಗ ಸಂಯೋಜನಾಧಿಕಾರಿ ಮಹದೇವಸ್ವಾಮಿ , ಸಿಬ್ಬಂದಿಗಳು ಮನೊಹರ್, ರವಿಚಂದ್ರನ್, ಮುಜೀಬ್, ಕುಮಾರ್, ಇನ್ನೂ ಮುಖಂಡರು ಸೇರಿದಂತೆ ಮುಖಂಡರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


