ಮಧುಗಿರಿ: ಬಿಜೆಪಿ ಮಧುಗಿರಿ ಮಂಡಲ ವತಿಯಿಂದ ಇಂದು ದೊಡ್ಡೇರಿ ಹೋಬಳಿ ಬಡವನಹಳ್ಳಿ ಗ್ರಾಮದಲ್ಲಿ ಒಬಿಸಿ ಮೋರ್ಚಾ ಸಭೆಯು ವಿಧಾನ ಪರಿಷತ್ ಶಾಸಕರು ಹಾಗೂ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರಾದ ಚಿದಾನಂದ್ ಎಂ. ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಅಧ್ಯಕ್ಷರಾದ ಚಿದಾನಂದ ಗೌಡ ಮಾತನಾಡಿ, ಬಿಹಾರದ ಚುನಾವಣೆ ನಮಗೆ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ನೀಡಿದೆ, ಹಾಗಾಗಿ ಮುಂದೆ ಬರುವ ಚುನಾವಣೆಗಳಿಗೆ ತಯಾರಾಗಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠ ಪಡಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಹನುಮಂತರೆಡ್ಡಿ, ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್.ಆರ್., ಹಿರಿಯ ಮುಖಂಡರಾದ ನಾಗರಾಜಪ್ಪ, ಮಂಡಲ ಉಪಾಧ್ಯಕ್ಷರಾದ ದೇವರಾಜು, ಜಿಲ್ಲಾ ಪ್ರಕೋಷ್ಟಗಳ ಸಂಯೋಜಕರಾದ ರೆಡ್ಡಿಹಳ್ಳಿ ರಾಜಣ್ಣ, ಒಬಿಸಿ ಮೋರ್ಚಾ ಅಧ್ಯಕ್ಷರಾದ ಮಂಜುನಾಥ್, ಪ್ರದಾನ ಕಾರ್ಯದರ್ಶಿ ಬಂಗಾರಿ ಕೃಷ್ಣ, ಮುಖಂಡರಾದ ಪಾಂಡುರಂಗ ರೆಡ್ಡಿ, ಮುಖಂಡರಾದ ಪದ್ಮಣ್ಣ ವಿ., ಪದಾಧಿಕಾರಿಗಳಾದ ಚೌಡಪ್ಪ, ಕೃಷ್ಣಪ್ಪ, ತೇಜಸ್ ತಿಮ್ಮಣ್ಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


