ತಿಪಟೂರು: ಕಲಾಕೃತಿ ಸಂಸ್ಥೆ ತಾಲೂಕು ಆಡಳಿತ ಕನ್ನಡ ರಕ್ಷಣಾ ವೇದಿಕೆ ಮತ್ತು ವಿವಿಧ ಸಂಘ ಸಂಸ್ಥೆಯ ಸಹಯೋಗದೊಂದಿಗೆ ಕಲ್ಪತರು ಕ್ರೀಡಾಂಗಣದಲ್ಲಿ ನವೆಂಬರ್ 19 ರಿಂದ ಆರಂಭಗೊಂಡ ಕಲ್ಪೋತ್ಸವ ಕಾರ್ಯಕ್ರಮ 21 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಖ್ಯಾತ ನಟಿ ಉಮಾಶ್ರೀಗೆ ಕಲ್ಪತರು ರತ್ನ ಪ್ರಶಸ್ತಿಸಮಾಜಸೇವಕರಿಗೆ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಶಾಸಕರು ಕೆ.ಷಡಕ್ಷರಿ ತಿಳಿಸಿದರು.
ಕಲಾ ತಿ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ಕಳೆದ ಮೂರು ವರ್ಷದಿಂದ ಒಂದು ದಿನದ ಕಾರ್ಯಕ್ರಮ ಮಾಡುತ್ತಿದ್ದು, ಈ ಸಾರಿ ತಿಪಟೂರು ತಾಲೂಕಿನಲ್ಲಿ ತುಮಕೂರು ದಸರಾ ರೀತಿಯ ಮೂರು ದಿನ ಕಲ್ಪೋತ್ಸವ ಹಮ್ಮಿಕೊಳ್ಳಲಾಗಿದೆ, ಪ್ರತಿನಿತ್ಯ ಅನೇಕ ಕಲಾವಿದರಿಂದ ಮಿಮಿಕ್ರಿ ನಾಯಕರಾದ ರಾಜೇಶ್ ಕೃಷ್ಣನ್, ಅನುಶ್ರೀ, ಸರಿಗಮಪ ತಂಡದಿಂದ ಸಂಗೀತ ಮನರಂಜನ ಕಾರ್ಯಕ್ರಮ ದೃಶ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ವಿಶೇಷ ಆಕರ್ಷಣೆಯಾಗಿ ಸಾರ್ವಜನಿಕರಿಗೆ ನವೆಂಬರ್ 22 ರಿಂದ 23ರವರೆಗೆ ಹೆಲಿಕಾಫ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


