nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯದ ಮುಂದಿನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಬಹುತೇಕ ಖಚಿತ? 

    May 28, 2026

    ವಿಶ್ವ ಪರಿಸರ ದಿನಾಚರಣೆ ಬಗ್ಗೆ ರೀಲ್ಸ್ ಸ್ಪರ್ಧೆ: ನೀವೂ ಭಾಗವಹಿಸಬಹುದು

    May 27, 2026

    ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    May 27, 2026
    Facebook Twitter Instagram
    ಟ್ರೆಂಡಿಂಗ್
    • ರಾಜ್ಯದ ಮುಂದಿನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಬಹುತೇಕ ಖಚಿತ? 
    • ವಿಶ್ವ ಪರಿಸರ ದಿನಾಚರಣೆ ಬಗ್ಗೆ ರೀಲ್ಸ್ ಸ್ಪರ್ಧೆ: ನೀವೂ ಭಾಗವಹಿಸಬಹುದು
    • ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ
    • ತುಮಕೂರು: ನಿರುದ್ಯೋಗಿ ಯುವಕ/ಯುವತಿಯರಿಗೆ ರುಡ್‌ ಸೆಟ್‌ ನಿಂದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ; ಅರ್ಜಿ ಆಹ್ವಾನ
    • ಕಾರ್ಮಿಕರು ಇಲಾಖೆಯ ಸೌಲಭ್ಯ ಬಳಸಿಕೊಳ್ಳಬೇಕು: ಶ್ಯಾಮಣ್ಣರೆಡ್ಡಿ
    • ಮುಂಗಾರು ಹಿನ್ನೆಲೆ ರಸಗೊಬ್ಬರ ಅಂಗಡಿಗಳಿಗೆ ತಹಶೀಲ್ದಾರ್ ಅನಿರೀಕ್ಷಿತ ಭೇಟಿ: ರೈತರಿಗೆ ಕೊರತೆಯಾಗದಂತೆ ಸ್ಟಾಕ್ ಪರಿಶೀಲನೆ
    • ಕೊರಟಗೆರೆಯಲ್ಲಿ ಮಯೂರ ಬೇಕರಿಗೆ ಅಧಿಕಾರಿಗಳ ದಿಢೀರ್ ದಾಳಿ:  ಗೃಹ ಬಳಕೆ ಸಿಲಿಂಡರ್ ಬಳಕೆ, ಅವಧಿ ಮೀರಿದ ಚಾಕಲೇಟ್ ಪತ್ತೆ
    • ಬೀದರ್: ಪಶು ವೈದ್ಯಕೀಯ ವಿವಿಯಲ್ಲಿ ₹45 ಕೋಟಿ ಹಗರಣ; ವಿಶ್ರಾಂತ ಕುಲಪತಿ ಸೇರಿ ಆರು ಜನರ ಬಂಧನ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಸ್ತೆ ಅಗಲಿಕರಣ: ಮುಲಾಜಿಲ್ಲದೆ ಅಕ್ರಮ ಕಟ್ಟಡ ತೆರವುಗೊಳಿಸಿ: ಸಿಇಓ ಪ್ರಭು ಜಿ. ಸೂಚನೆ
    ಕೊರಟಗೆರೆ December 3, 2025

    ರಸ್ತೆ ಅಗಲಿಕರಣ: ಮುಲಾಜಿಲ್ಲದೆ ಅಕ್ರಮ ಕಟ್ಟಡ ತೆರವುಗೊಳಿಸಿ: ಸಿಇಓ ಪ್ರಭು ಜಿ. ಸೂಚನೆ

    By adminDecember 3, 2025No Comments2 Mins Read

    ಕೊರಟಗೆರೆ: ರಾಜ್ಯದ ಗೃಹ ಸಚಿವರ ಆದೇಶದಂತೆ ತಾಲೂಕಿನ 6 ಹೋಬಳಿಯ ಕೇಂದ್ರಗಳನ್ನ ಸಮಗ್ರ ಅಭಿವೃದ್ಧಿಗಾಗಿ ತಲಾ ಎರಡುವರೆ ಕೋಟಿ ಅನುದಾನ ನೀಡಿದ್ದು, ರಸ್ತೆ ಅಗಲಿಕರಣ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತುಮಕೂರು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು ಜಿ. ತಿಳಿಸಿದರು.

    ತಾಲೂಕಿನ ಹೊಳವನಹಳ್ಳಿ ಕೋಳಾಲ ಹೋಬಳಿ ಕೇಂದ್ರದ ಗ್ರಾ.ಪಂ.ಯಲ್ಲಿ ಸದಸ್ಯರ ಸಭೆ ಮಾಡಿ ನಂತರ ಕಾಮಗಾರಿ ನಡೆಯುವ ಸ್ಥಳವನ್ನ ಪರಿಶೀಲಿಸಿ ಮಾತನಾಡಿದರು.


    Provided by
    Provided by

    ಈಗಾಗಲೇ ಶಾಸಕರ ನಿಧಿಯಾಗಿ ಮುಖ್ಯಮಂತ್ರಿಗಳು 50 ಕೋಟಿ ರೂ ಅನುದಾನವನ್ನ ಬಿಡುಗಡೆ ಮಾಡಿದ್ದು, ಗೃಹ ಸಚಿವರ ಮಾರ್ಗದರ್ಶನ ಹಾಗೂ ಅವರ ಆದೇಶದಂತೆ ತಾಲೂಕಿನ ಹೊಳವನಹಳ್ಳಿ, ಕೋಳಾಲ, ಕಸಬಾ, ಪುರವಾರ, ತೋವಿನಕೆರೆ, ಚಿಕ್ಕತೊಟ್ಲುಕೆರೆ ಹೋಬಳಿ ಕೇಂದ್ರಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಪುಟ್ಪಾತ್, ರಸ್ತೆ ಮಧ್ಯ ವಿನ್ಯಾಸವಾದ ವಿದ್ಯುತ್ ದೀಪ ಅಳವಡಿಸಿ ಪಟ್ಟಣದ ಮಾದರಿಯಂತೆ ಮಾಡಲು ಈಗಾಗಲೇ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

    50 ಕೋಟಿ ಅನುದಾನದಲ್ಲಿ ರಸ್ತೆ, ಆಸ್ಪತ್ರೆ, ಅಂಗನವಾಡಿ, ಶಾಲಾ ಕಾಲೇಜು ಸೇರಿದಂತೆ ಗೃಹ ಸಚಿವರ ಆಪೇಕ್ಷೆಯಂತೆ ಒಂದು ಆಸ್ಪತ್ರೆಗೆ 65 ಲಕ್ಷದಂತೆ ನಮ್ಮ ಜಿಲ್ಲೆಗೆ 135 ಹೊಸ ಆಸ್ಪತ್ರೆಗಳು ಮಂಜೂರು ಮಾಡಿದ್ದಾರೆ. ಗ್ರಾಪಂ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಯ ಕಟ್ಟಡಗಳನ್ನ ನವೀಕರಣ ಮಾಡುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಕ್ರಿಯಾ ಯೋಜನೆಯನ್ನ ರೂಪಿಸಲಾಗಿದ್ದು ಇನ್ನೂ 6 ತಿಂಗಳಲ್ಲಿ ಎಲ್ಲಾ ಕಾಮಗಾರಿಗಳನ್ನ ಮುಗಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಪಣ ತೊಟ್ಟಿದ್ದು, ಗ್ರಾ.ಪಂ. ಸದಸ್ಯರು ಹಾಗೂ ಸಹಕರಿಸಿ ಎಂದರು.

    ಮುಲಾಜಿಲ್ಲದೇ ಅಕ್ರಮ ಕಟ್ಟಡ ತೆರವು:

    ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಬರುವ 6 ಹೋಬಳಿ ಕೇಂದ್ರದಲ್ಲಿ ಚರಂಡಿ, ರಸ್ತೆ, ಹಾಗೂ ಬೀದಿ ದೀಪ ಅಳವಡಿಸಲು ಸಾರ್ವಜನಿಕರು ಹಾಗೂ ಗ್ರಾಪಂ ಸರ್ವ ಸದಸ್ಯರು ಸಹಕರಿಸಬೇಕು. ಹೋಬಳಿ ಕೇಂದ್ರದಲ್ಲಿ ಒಂದು ಬದಿಯಲ್ಲಿ ಎಂಟೂವರೆ ಮೀಟರ್ ಮತ್ತು ಇನ್ನೊಂದು ಬದಿಯಲ್ಲಿ ಎಂಟೂವರೆ ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡಲಿದ್ದು, ರಸ್ತೆ ಅಗಲಿಕರಣ ಮಾಡುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಸಾರ್ವಜನಿಕರ ಅಗಲಿಕರಣ ಮಾಡಲು ಸಹಕರಿಸಿ. ಒಂದು ವೇಳೆ ಸಹಕಾರ ನೀಡದಿದ್ದರೆ ಮೂಲಾಜಿಲ್ಲದೆ ಅಕ್ರಮ ಕಟ್ಟಡಗಳನ್ನ ತೆರವು ಮಾಡಬೇಕಾಗುತ್ತದೆ ಇನ್ನೂ ಎರಡು ಮೂರು ದಿನಗಳಲ್ಲಿ ಮಾರ್ಕಿಂಗ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಜಿಪಂ ಸಿಇಓ ಪ್ರಭು ಜಿ. ಅವರ ಜೊತೆ ಕೊರಟಗೆರೆ ಇಓ ಅಪೂರ್ವ, ಜಿ.ಪಂ. ಎಇಇ ದಯಾನಂದ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕಾಂತರಾಜು, ನರೇಗಾ ಎಇಇ ಗುರುಮೂರ್ತಿ, ಪಿಡಬ್ಲೂಡಿ ಎಇಇ ದೀಪಕ್, ತಂಡ ಹೊಳವನಹಳ್ಳಿಯಲ್ಲಿ ನಡೆಯುವ ಕಾಮಗಾರಿ ಸ್ಥಳವನ್ನ ಪರಿಶೀಲನೆ ಮಾಡಿದರು.

    ಇದೆ ಸಂದರ್ಭದಲ್ಲಿ ಪಿಡಿಒ ರಂಗನಾಥ್, ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಉಮೇಶ್ ಸದಸ್ಯರಾದ ರವಿಕುಮಾರ್, ಶಂಶಾದ್, ನಜೀರ್, ಮುಖಂಡರಾದ ರಾಮಾಂಜನಯ್ಯ, ಕುಮಾರ್, ಉಮೇಶ್, ಶಿವಣ್ಣ, ಸುರೇಶ್, ಹನುಮಂತರಾಜು ಸೇರಿದಂತೆ ಇತರರು ಇದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕಾರ್ಮಿಕರು ಇಲಾಖೆಯ ಸೌಲಭ್ಯ ಬಳಸಿಕೊಳ್ಳಬೇಕು: ಶ್ಯಾಮಣ್ಣರೆಡ್ಡಿ

    May 27, 2026

    ಮುಂಗಾರು ಹಿನ್ನೆಲೆ ರಸಗೊಬ್ಬರ ಅಂಗಡಿಗಳಿಗೆ ತಹಶೀಲ್ದಾರ್ ಅನಿರೀಕ್ಷಿತ ಭೇಟಿ: ರೈತರಿಗೆ ಕೊರತೆಯಾಗದಂತೆ ಸ್ಟಾಕ್ ಪರಿಶೀಲನೆ

    May 27, 2026

    ಕೊರಟಗೆರೆಯಲ್ಲಿ ಮಯೂರ ಬೇಕರಿಗೆ ಅಧಿಕಾರಿಗಳ ದಿಢೀರ್ ದಾಳಿ:  ಗೃಹ ಬಳಕೆ ಸಿಲಿಂಡರ್ ಬಳಕೆ, ಅವಧಿ ಮೀರಿದ ಚಾಕಲೇಟ್ ಪತ್ತೆ

    May 27, 2026

    Leave A Reply Cancel Reply

    Our Picks

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯದ ಮುಂದಿನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಬಹುತೇಕ ಖಚಿತ? 

    May 28, 2026

    ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ನಾಯಕತ್ವ ಬದಲಾವಣೆಯ ಹೈಡ್ರಾಮಾ ಇದೀಗ ಕ್ಲೈಮ್ಯಾಕ್ಸ್ ಹಂತ…

    ವಿಶ್ವ ಪರಿಸರ ದಿನಾಚರಣೆ ಬಗ್ಗೆ ರೀಲ್ಸ್ ಸ್ಪರ್ಧೆ: ನೀವೂ ಭಾಗವಹಿಸಬಹುದು

    May 27, 2026

    ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    May 27, 2026

    ತುಮಕೂರು: ನಿರುದ್ಯೋಗಿ ಯುವಕ/ಯುವತಿಯರಿಗೆ ರುಡ್‌ ಸೆಟ್‌ ನಿಂದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ; ಅರ್ಜಿ ಆಹ್ವಾನ

    May 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.