ತಿಪಟೂರು: ರಾಜ್ಯಮಟ್ಟದ ಹೊನಲು ಬೆಳಕಿನ ಕೋಕೋ ಪಂದ್ಯಾವಳಿ ಡಿಸೆಂಬರ್ 18ರಿಂದ ಡಿಸೆಂಬರ್ 21ರವರೆಗೆ ತುಮಕೂರು ಜಿಲ್ಲೆಯ ತಿಪಟೂರು ಕಲ್ಪತರು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಭಾರತೀಯ ಕೋಕೋ ಫೆಡರೇಶನ್ ಉಪಾಧ್ಯಕ್ಷ ಲೋಕೇಶ್ವರ್ ತಿಳಿಸಿದರು.
ಈ ಸಂಬಂಧ ನಡೆಸಿದ ಸಭೆಯಲ್ಇ ಮಾತನಾಡಿದ ಅವರು, 83 ಪುರುಷರು ಹಾಗೂ 47 ಮಹಿಳಾ ತಂಡಗಳು ಸೇರಿ ದಾಖಲೆಯ 130 ತಂಡಗಳು ಭಾಗವಹಿಸಲಿವೆ. ಈ ಪಂದ್ಯಾವಳಿಗಾಗಿ ನಾಲ್ಕು ಅಂಕಣಗಳನ್ನು ಸಿದ್ಧಪಡಿಸಲಾಗಿದೆ, ಒಂದು ಅಂಕಣ ಸಂಪೂರ್ಣ ಸಿಂಥೆಟಿಕ್ ಮ್ಯಾಟ್ ಬಳಸಿ ಸಿದ್ದಗೊಳಿಸಲಾಗುತ್ತಿದೆ ಹಾಗೂ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನುಭವವಿರುವ ತಿಪಟೂರು ಸ್ಪೋರ್ಟ್ಸ್ ಕ್ಲಬ್ ಪಂದ್ಯಾವಳಿಗಳನ್ನು ನಡೆಸಲು ಸಂಪೂರ್ಣ ತಯಾರಾಗಿದೆ ಎಂದರು.
ಗೆದ್ದ ತಂಡಗಳಿಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ಗಳನ್ನು ಕೋಕೋ ಸಂಸ್ಥೆ ನೀಡುತ್ತದೆ. ಬಹುಮಾನವನ್ನು ತಿಪಟೂರು ಸ್ಪೋರ್ಟ್ಸ್ ಕ್ಲಬ್ ನೀಡುತ್ತಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪು ಗಣೇಶ್, ಮಾಜಿ ಸದಸ್ಯ ಭಾರತಿ ಮತ್ತು ರೇಣು ಹಲವಾರು ಕಾರ್ಯಕರ್ತರು ಇದ್ದರು
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


