ತುಮಕೂರು ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಡಿಸೆಂಬರ್ 27 ಮತ್ತು 28ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಡಿಸೆಂಬರ್ 27ರಂದು: ಬಿದರೆ, ದೊಡ್ಡಗುಣಿ, ಕಡಬ, ಕಲ್ಲೂರು, ಕೆ.ಜೆ.ಟೆಂಪಲ್, ಉಂಗ್ರಾ, ಸೋಮಲಾಪುರ, ಹೊನ್ನುಡಿಕೆ, ಹಿರೇಹಳ್ಳಿ ಮತ್ತು ನೈರುತ್ಯ ರೈಲ್ವೆ ಉಪಸ್ಥಾವರ, ನಿಟ್ಟೂರು ಸ್ವೀಕರಣಾ ಕೇಂದ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳು ಮತ್ತು ಕೈಗಾರಿಕಾ ಪ್ರದೇಶಗಳು.
ಡಿಸೆಂಬರ್ 28ರಂದು:
ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದ ವ್ಯಾಪ್ತಿ: ಬೆಳ್ಳಾವಿ, ಹೆಗ್ಗೆರೆ, ಮಲ್ಲಸಂದ್ರ, ದೊಡ್ಡ ಸಾರಂಗಿ, ಕೋರ, ಬೆಳಧರ, ಊರ್ಡಿಗೆರೆ, ಸಿ.ಟಿ.ಕೆರೆ, ಟಿಎಂಟಿಪಿ ಹಾಗೂ ವಿಪ್ರೊ ಮಾರ್ಗ.
ವಸಂತನರಸಾಪುರ ಸ್ವೀಕರಣಾ ಕೇಂದ್ರದ ವ್ಯಾಪ್ತಿ: ತೋವಿನಕೆರೆ, ಚೇಳೂರು, ಹೊಸಕೆರೆ, ಹಾಗಲವಾಡಿ, ಮೆಳೆಕೋಟೆ, ನಂದಿಹಳ್ಳಿ, ಹೆಬ್ಬೂರು, ತಿಮ್ಮಸಂದ್ರ, ಹೊನ್ನೇನಹಳ್ಳಿ, ಬಡ್ಡಿಹಳ್ಳಿ ಉಪಸ್ಥಾವರಗಳಿಗೆ ಒಳಪಡುವ ಗ್ರಾಮಗಳು ಮತ್ತು ಕೈಗಾರಿಕಾ ಪ್ರದೇಶಗಳು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


