nammatumakuru

    Subscribe to Updates

    Get the latest creative news from FooBar about art, design and business.

    What's Hot

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು: ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ಜುನ್

    October 12, 2026

    ಅಖಿಲ ಭಾರತ ಪ್ರತಿಭಟನಾ ದಿನ : AIDSO

    October 12, 2026
    Facebook Twitter Instagram
    ಟ್ರೆಂಡಿಂಗ್
    • ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ
    • ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು: ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ಜುನ್
    • ಅಖಿಲ ಭಾರತ ಪ್ರತಿಭಟನಾ ದಿನ : AIDSO
    • ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ
    • ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?
    • ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?
    • ಬ್ಯಾಂಕ್ ಸೇವೆಯಲ್ಲಿ ಲೋಪವಾದರೆ ನಿಮಗೂ ಪರಿಹಾರ ಸಿಗುತ್ತೆ!  ಯಾವಾಗ ಎಷ್ಟು ? 
    • ಕಾನ್ಸಿರಾಂ ದೇಶ ಕಂಡ ಅತ್ಯುನ್ನತ ರಾಜಕಾರಣಿ: ರಾಹುಲ್ ಖಂದಾರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ  ಸಂಕಲ್ಪ ಯಾತ್ರೆ
    ಕೊರಟಗೆರೆ December 26, 2025

    ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ  ಸಂಕಲ್ಪ ಯಾತ್ರೆ

    By adminDecember 26, 2025No Comments2 Mins Read
    manthralaya

    ಕೊರಟಗೆರೆ : ದೇವರ ದರ್ಶನ ಎಂದರೆ ಕಾಲುನಡಿಗೆಯಲ್ಲೇ ಆಗಬೇಕು ಎಂಬ ದೃಢ ನಂಬಿಕೆ, ಶ್ರಮ—ಭಕ್ತಿ–ಸಂಕಲ್ಪದೊಂದಿಗೆ ರಾಮನಗರ ಜಿಲ್ಲೆಯ ಮಾಗಡಿಯಿಂದ ಮಂತ್ರಾಲಯದವರೆಗೆ ಕಾಲುನಡಿಗೆಯಲ್ಲಿ ಸಾಗುತ್ತಿರುವ ಶ್ರೀ ಗುರುರಾಜ ಪಾದಯಾತ್ರೆ ಸೇವಾ ಸಮಿತಿಯ ಯಾತ್ರೆ ಇಡೀ ರಾಜ್ಯದ ಗಮನ ಸೆಳೆದಿದೆ.

    ಲೋಕ ಕಲ್ಯಾಣಾರ್ಥವಾಗಿ ಕಳೆದ 14 ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಗಳನ್ನು ಆಯೋಜಿಸುತ್ತಿರುವ ಈ ಸಮಿತಿ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

    ಆರ್ಥಿಕ ಸ್ಥಿತಿ, ಆರೋಗ್ಯ ಸಮಸ್ಯೆ, ಊಟ–ವಾಸ್ತವ್ಯದ ಚಿಂತೆಗಳ ಕಾರಣದಿಂದ ಯಾತ್ರೆ ಕೈಗೊಳ್ಳಲಾಗದವರನ್ನೂ ಒಳಗೊಂಡು, ಪೂರ್ವನಿಯೋಜಿತ ಚಲಿಸುವ ನಕ್ಷೆ, ತಂಗುವ ಸ್ಥಳಗಳ ವ್ಯವಸ್ಥೆಯೊಂದಿಗೆ ಪಾದಯಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸುವುದು ಈ ಸಮಿತಿಯ ವಿಶೇಷತೆ.

    ಹಿರಿಯ ಮುತ್ಸದ್ದಿ ಸದಾಶಿವ ಶೆಟ್ಟರ್ ಅವರ ಮಾರ್ಗದರ್ಶನದಲ್ಲಿ, ಸಮಿತಿಯ ಗೌರವಾಧ್ಯಕ್ಷ ಸೀಬಣ್ಣಾಚಾರ್, ಅಧ್ಯಕ್ಷ ಗುರುಸಿದ್ದಪ್ಪ ನೇತೃತ್ವದಲ್ಲಿ ಈಗಾಗಲೇ ಕಾಶಿ, ತಿರುಪತಿ, ಧರ್ಮಸ್ಥಳ, ಮಲೆ ಮಹದೇಶ್ವರ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಕಾಲುನಡಿಗೆಯಲ್ಲಿ ಪಾದಯಾತ್ರೆ ಪೂರ್ಣಗೊಳಿಸಲಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಾತ್ರೆಗಳನ್ನು ಕೈಗೊಳ್ಳುವ ಉದ್ದೇಶವನ್ನು ಸಮಿತಿ ಹೊಂದಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ವಿಜಯಪುರದ ವಿಶ್ವ ವಿಜೇತ ಸ್ವಾಮಿ ವಿವೇಕಾನಂದ ಯುವ ಬಳಗದವರಿಂದ ರಾಯರ ಭಜನಾ ಕಾರ್ಯಕ್ರಮ ನಡೆಯಿತು.

    ಯಾತ್ರೆಯ ಪಥವಿವರ: ಡಿ.23 ರಂದು ಮಾಗಡಿಯಿಂದ ಹೊರಟ ಸುಮಾರು 40 ಯಾತ್ರಾರ್ಥಿಗಳು ಮೊದಲ ದಿನ ಶಿವಗಂಗೆ ಕ್ಷೇತ್ರದಲ್ಲಿ ತಂಗಿದರು. ಡಿ.24ರಂದು ಪಟ್ಟಣದ ಹಿಂಧೂ ಸಾದರ ಸಮುದಾಯ ಭವನದಲ್ಲಿ ರಾತ್ರಿ ವಾಸ್ತವ್ಯ ಹೂಡಿದರು. ಮತ್ತೆ ಯಾತ್ರೆ ಆರಂಭಿಸಿ ಪಾವಗಡ ತಾಲೂಕಿನ ಚಂದ್ರಗಿರಿ, ದೊಡ್ಡಹಳ್ಳಿ, ಕಲ್ಯಾಣದುರ್ಗ, ಕಸಾಪುರ ಮಾರ್ಗವಾಗಿ ಆಂಧ್ರಪ್ರದೇಶದ ಗುಂತಕಲ್ಲು, ಡಿಬ್ಬಗಲ್ಲು, ಕೈರುಪಲಿ ಹಾದು ಹೊಸ ವರ್ಷದ ದಿನ ಮಂತ್ರಾಲಯದಲ್ಲಿ ಪೂಜೆ ಸಲ್ಲಿಸುವ ಗುರಿಯೊಂದಿಗೆ ಪಾದಯಾತ್ರೆ ಮುಂದುವರಿಯಲಿದೆ.

    ಕೊರಟಗೆರೆಯ ಭಕ್ತರ ಸಹಕಾರ: ಪಾದಯಾತ್ರಾರ್ಥಿಗಳಿಗೆ  ಪಟ್ಟಣದ ಭಕ್ತರು ಅಪಾರ ಸಹಕಾರ ನೀಡಿದ್ದು ಮಾನವ ಹಕ್ಕುಗಳ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷೆ ಹೇಮಲತಾ, ಅಶ್ವಥ್‌ ನಾರಾಯಣ್, ಹೋಟಲ್ ಬಾಲಸುಬ್ರಹ್ಮಣ್ಯ, ಆಟೋ ಕುಮಾರ್ ಸೇರಿದಂತೆ ಹಲವರು ರಾತ್ರಿಯ ಊಟ  ಮತ್ತು  ವಾಸ್ತವ್ಯದ ವ್ಯವಸ್ಥೆ ಮಾಡಿದರು.

    ಹಿಂದೂ ಸಾಧರ ಸಮುದಾಯ ಭವನದ ಅಧ್ಯಕ್ಷ ಹನುಮಾನ್ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯ ಮತ್ತು ಭಕ್ತಿ ಭಾವದೊಂದಿಗೆ ಯಾತ್ರೆ ನಡೆಸುತ್ತಿರುವ ಈ ಸಂಸ್ಥೆಯ ಉದ್ದೇಶ ಶ್ಲಾಘನೀಯ. ಮುಂದೆ ಇನ್ನೂ ಹೆಚ್ಚಿನ ಯಾತ್ರಾರ್ಥಿಗಳು ಇಂತಹ ಪಾದಯಾತ್ರೆಗಳಲ್ಲಿ ಭಾಗವಹಿಸಲಿ. ನಮ್ಮ ಸಹಕಾರ ಮುಂದುವರಿಯುತ್ತದೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ

    October 4, 2026

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    ಗಾಂಧಿ ಜಯಂತಿ ಪ್ರಯುಕ್ತ ಶ್ರೀಕ್ಷೇತ್ರ ಸಿದ್ದರಬೆಟ್ಟದಲ್ಲಿ ಸ್ವಚ್ಛತಾ ಆಂದೋಲನ

    October 2, 2026

    Leave A Reply Cancel Reply

    Our Picks

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನವದೆಹಲಿ: ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಪೊಲೀಸ್ ವಶದಲ್ಲಿದ್ದಾಗ ಅವರ ಅಜ್ಜಿಯ ನಿಧನದ ದುಃಖಕರ…

    ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು: ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ಜುನ್

    October 12, 2026

    ಅಖಿಲ ಭಾರತ ಪ್ರತಿಭಟನಾ ದಿನ : AIDSO

    October 12, 2026

    ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ

    October 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.