ಸರಗೂರು: ತಾಲ್ಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ನೂರಳಾಸ್ವಾಮಿ ಮೀನಗಾರರ ಸಂಘದ ಅಧ್ಯಕ್ಷ ಮಣಿಕಂಠ ಎಂಬುವನು ಏಕಾಏಕಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಗಾಯಗೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯ ಕರಿಗೌಡ ಹಾಗೂ ರವಿಕುಮಾರ್ ಅವರು ಬೈಕ್ ನಲ್ಲಿ ಹೋಗುತ್ತಿರುವಾಗ ನೂರಳಾಸ್ವಾಮಿ ಮೀನಗಾರರ ಸಂಘದ ಅಧ್ಯಕ್ಷ ಮಣಿಕಂಠ ಎಂಬುವನು ಏಕಾಏಕಿ ಬಂದು ಬೈಕ್ ಯನ್ನು ಕೆಡೆದು ಹಾಕಿ ಕರಿಗೌಡ ರವರನ್ನು ತುಳಿದಿದ್ದಾನೆ ಎಂದು ತಿಳಿಸಿದರು.
ಘಟನೆ ವಿವರ:
ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಯೂರು ಗ್ರಾಮದ ಎಂಬುವನು ಎಂದು ಕಂದಾಯ ಇಲಾಖೆಯ ನಾಡಕಚೇರಿಯಲ್ಲಿ ವಾಸಸ್ಥಳ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಅದರಂತೆ ಕಂದಾಯ ಇಲಾಖೆ ಗ್ರಾಮಲೆಕ್ಕಿಗರು ಅರಿಯೂರು ಗ್ರಾಮಕ್ಕೆ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ಹುಸ್ಕೂರು ಗ್ರಾಮದ ಸದಸ್ಯನಾದ ಕರಿಗೌಡ ಹಾಗೂ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ.
ಮಣಿಕಂಠ ಎಂಬುವನು ಪಟ್ಟಣದ ಎರಡನೇ ವಾರ್ಡಿನ ನಿವಾಸಿ, ಅವನ ಕುಟುಂಬ ಹಾಗೂ ದಾಖಲೆಗಳು ಸರಗೂರು ಪಟ್ಟಣದಲ್ಲಿ ಇದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ವಾಸಸ್ಥಳ ಪ್ರಮಾಣ ಪತ್ರ ಪಡೆಯಲು ಮುಂದಾಗಿದ್ದು, ಅದನ್ನು ಕಂದಾಯ ಇಲಾಖೆ ಗ್ರಾಮಲೆಕ್ಕಿಗರು ಪರಿಶೀಲನೆ ಮಾಡಲು ಹೋದಾಗ ಗ್ರಾಪಂ ಸದಸ್ಯ ಕರಿಗೌಡ ಹಾಗೂ ರವಿಕುಮಾರ್ ಸ್ಥಳದಲ್ಲೇ ಬೈಕ್ ಮೇಲೆ ಇರುವುದರಿಂದ ಕಂಡು ಮಣಿಕಂಠ ಎಂಬುವನು ಬಾಯಿಗೆ ಬಂದಂತೆ ಬೈದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯ ಮುಖಂಡರು ತಿಳಿಸಿದರು.
ಸಂಘದ ಹೆಸರಿನಲ್ಲಿ ಇದ್ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದು, ಸಂಘದಲ್ಲಿ ಇದ್ದ ಸದಸ್ಯರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಸ್ಥಳೀಯ ಮುಖಂಡರು ಮಣಿಕಂಠ ಎಂಬುವರಿಗೆ ಬುದ್ದಿ ಮಾತು ಹೇಳಿದರೂ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ನನ್ನ ಇಷ್ಟ ಬಂದಂತೆ ನಾನು ಮಾಡಿಕೊಳ್ಳುತ್ತೇನೆ ಎಂದು ಉಡಾಫೆ ಹೇಳಿಕೆ ನೀಡಿ, ಇವನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ವಾಸಸ್ಥಳ ಪ್ರಮಾಣ ಪತ್ರ ಪಡೆಯಲು ಮುಂದಾಗಿದ್ದು, ಅದನ್ನು ರದ್ದುಗೊಳಿಸಿ ಅವನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


