ಗುಬ್ಬಿ: ಕಾನೂನಾತ್ಮಕವಾಗಿ ಕ್ರಯಕ್ಕೆ ಪಡೆದ ಜಮೀನನ್ನು ಇದು ಬೇರೆಯವರು ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಕೊಂಡು ಬೇರೆ ವ್ಯಕ್ತಿಗೆ ಮಾರಾಟ ಮಾಡಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ವರಹಸಂದ್ರ ಗ್ರಾಮದ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು.
ವರಹಸಂದ್ರ ಗ್ರಾಮದಲ್ಲಿ ಮಾಧ್ಯಮ ದವರೊಂದಿಗೆ ತಮ್ಮ ಅಳಲನ್ನು ತೊಡಿಕೊಂಡರು. ಗುಬ್ಬಿ ತಾಲೂಕು ಕಡಬ ಹೋಬಳಿಯ ವರಹಸಂದ್ರ ಗ್ರಾಮದ ಸ. ನಂ. 19/1ರಲ್ಲಿ ಒಟ್ಟು 4.31 ಎಕರೆ ಜಮೀನು ತುರುವೇಕೆರೆ ತಾಲೂಕು ದಂಡಿನಶಿವರ ಹೋಬಳಿ ಸಿದ್ದನಹಟ್ಟಿ ಗ್ರಾಮದ ಕೆಂಪಯ್ಯ ಬಿನ್ ಕೆಂಪಯ್ಯ ಇವರ ಹೆಸರಿಗೆ ಖಾತೆ ಇದ್ದು ಇವರ ಮರಣದ ನಂತರ ಇವರ ಹೆಂಡತಿ ಮಾಳಮ್ಮನಿಗೆ 1.08 ಎಕರೆ ಜಮೀನು ವಿಭಾಗದ ಮೂಲಕ ಬಂದು ಇವರು 1978 ರಲ್ಲಿ ಜಮೀನು ಮಾರಾಟ ಮಾಡಿರುತ್ತಾರೆ. ಉಳಿಕೆ ಜಮೀನಿನಲ್ಲಿ ನಮ್ಮ ತಂದೆ ಶ್ಯಾನ್ ಬೋಗ್ ನರಸಿಂಹಯ್ಯ 1979 ರಲ್ಲಿ ಕೆಂಪಯ್ಯ ನವರಿಂದ ನಾವು 19/1ರಲ್ಲಿ 1.23 ಎಕರೆ ನಮಗೆ ಶುದ್ದ ಕ್ರಯಕ್ಕೆ ತೆಗೆದುಕೊಂಡು ಸುಮಾರು 60 ವರ್ಷಗಳಿಂದ ಅನುಭವದಲ್ಲಿ ಇದ್ದರೂ ಸಹ ನಮ್ಮ ತಂದೆ ಖಾತೆ ಮಾಡಿಕೊಂಡಿರುವುದಿಲ್ಲ. ನಮಗೆ ನೋಂದಣಿ ಆದ ನಂತರವೂ ಸಹ ಜಮೀನು ಮೂಲ ಮಾಲೀಕರ ಹೆಸರಿನಲ್ಲಿ ಬರುತ್ತಿರುವುದನ್ನು ಗಮನಿಸಿದ ಜಮೀನಿನ ಕುಟುಂಬ ದವರು ಕಳೆದ ಒಂದು ವರ್ಷದ ಹಿಂದೆ ಪೌತಿ ವಾರಸುಮೂಲಕ ಖಾತೆ ಬದಲಾವಣೆಯನ್ನು ಮಾಡಿಕೊಂಡು ಕಲ್ಲೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಎಂಬುವರಿಗೆ ಅಕ್ರಮವಾಗಿ ಮಾರಾಟ ಮಾಡಿರುತ್ತಾರೆ.
ನಾವು ಕ್ರಯಕ್ಕೆ ಪಡೆದು ಖಾತೆ ಮಾಡಿಕೊಳ್ಳದೆ ಇರುವ ಜಮೀನನ್ನು ಕ್ರಯಕ್ಕೆ ಕೊಂಡು ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಅವರ ಕುಟುಂಬ ದವರು ಜಮೀನಿನ ಬಳಿ ಬಂದು ಇದು ನಮಗೆ ಸೇರಿರುವ ಜಮೀನು ಎಂದು ನಮ್ಮ ಮೇಲೆ ದೌರ್ಜನ್ಯ ಮಾಡಿ ಬೆದರಿಸಿ ನಮಗೆ ತೊಂದರೆ ನೀಡುವ ಜೋತೆಗೆ ಜಮೀನಿನಿಂದ ಹೊರಹಾಕಿ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಜಮೀನು ಖಾತೆ ನಮಗೆ ಹಳೇ ಕ್ರಯ ಪತ್ರದಂತೆ ಖಾತೆ ಮಾಡಿಕೊಡುವಂತೆ ಸಂಬಂಧ ಪಟ್ಟ ಕಂದಾಯ ಇಲಾಖೆಗೆ 1 ವರ್ಷದ ಹಿಂದೆ ನಾನು ಅರ್ಜಿ ನೀಡಿದ್ದರು ಸಹ ಕಂದಾಯ ಇಲಾಖೆ ನಮಗೆ ಯಾವುದೇ ರೀತಿಯಲ್ಲಿ ಅನುಕೂಲ ಮಾಡಿಲ್ಲ ಬದಲಾಗಿ ಅಂದಿನ ಬೊಚಿಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್. ಸ್ಥಳ ಪರಿಶೀಲನೆ ಮಾಡದೆ ಗ್ರಾಮದಲ್ಲಿ ವಿಚಾರಿಸದೆ ತಮ್ಮ ಕಛೇರಿ ಯಲ್ಲಿ ಮಹಜರ್ ಮಾಡಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ ಇದರಿಂದ ನಮಗೆ ಬಹಳ ಅನ್ಯಾಯ ವಾಗಿದ್ದು ತಾಲೂಕು ಆಡಳಿತ ಇವರ ಮೇಲೆ ಕ್ರಮ ವಹಿಸುವಂತೆ ಆಗ್ರಹಿಸಿದರು.
ಭೂ ದಾಖಲೆ ಅಧಿಕಾರಿಗಳು ಸಹ ಈ ಜಮೀನು ತಿದ್ದುಪಡಿ ಮಾಡಿ ಫೋಡು ಬದಲಾವಣೆ ಮಾಡಿ ನಮಗೆ ತೊಂದರೆ ನೀಡುತ್ತಿದ್ದು ಕಂದಾಯ ಮತ್ತು ಭೂ ದಾಖಲೆ ಇಲಾಖೆ ಅಧಿಕಾರಿಗಳ ಎಡವಟ್ಪಿನಿಂದ ಇಂದು ನಮ್ಮ ಕುಟುಂಬ ಬೀದಿಗೆ ಬರುವಂತಾಗಿದೆ ಎಂದರು. ಈ ವೇಳೆಯಲ್ಲಿ ಸ್ಥಳೀಯ ಗ್ರಾಮಸ್ಥರು. ರೈತ ಮುಖಂಡರು ಇತರರು ಹಾಜರಿದ್ದರು.
ವರದಿ: ಚೇತನ್ ಗೌಡ, ಗುಬ್ಬಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


