nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ

    February 9, 2026

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ
    • ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ
    • ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ
    • ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು
    • ತುಮಕೂರು ಕಾಂಗ್ರೆಸ್‌ ನಲ್ಲಿ ಭುಗಿಲೆದ್ದ ಆಕ್ರೋಶ: ‘ನಾಯಕರಿಂದಲೇ ಚುನಾವಣೆ ಗೆಲ್ಲಿಸಿಕೊಳ್ಳಿ’ ಎಂದು ಕಾರ್ಯಕರ್ತರ ಸವಾಲು
    • ಜೀತಕಾರ್ಮಿಕ ಪದ್ಧತಿ ನಿರ್ಮುಲನಾ ದಿನಾಚರಣೆ ದಿನಾಂಕ ಬದಲಿಸಲು ಒತ್ತಾಯ
    • ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾನೂನಾತ್ಮಕವಾಗಿ ಪಡೆದ ಜಮೀನು, ಬೇರೆಯವರಿಗೆ ಅಕ್ರಮ ಖಾತೆ ಬದಲಾವಣೆ: ರೈತ ಮುಖಂಡ ರಂಗಸ್ವಾಮಿ ಆರೋಪ
    ಗುಬ್ಬಿ January 12, 2026

    ಕಾನೂನಾತ್ಮಕವಾಗಿ ಪಡೆದ ಜಮೀನು, ಬೇರೆಯವರಿಗೆ ಅಕ್ರಮ ಖಾತೆ ಬದಲಾವಣೆ: ರೈತ ಮುಖಂಡ ರಂಗಸ್ವಾಮಿ ಆರೋಪ

    By adminJanuary 12, 2026No Comments2 Mins Read
    gubbi

    ಗುಬ್ಬಿ: ಕಾನೂನಾತ್ಮಕವಾಗಿ ಕ್ರಯಕ್ಕೆ ಪಡೆದ ಜಮೀನನ್ನು ಇದು ಬೇರೆಯವರು ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಕೊಂಡು ಬೇರೆ ವ್ಯಕ್ತಿಗೆ ಮಾರಾಟ ಮಾಡಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ವರಹಸಂದ್ರ ಗ್ರಾಮದ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು.

    ವರಹಸಂದ್ರ ಗ್ರಾಮದಲ್ಲಿ ಮಾಧ್ಯಮ ದವರೊಂದಿಗೆ ತಮ್ಮ ಅಳಲನ್ನು ತೊಡಿಕೊಂಡರು. ಗುಬ್ಬಿ ತಾಲೂಕು ಕಡಬ ಹೋಬಳಿಯ ವರಹಸಂದ್ರ ಗ್ರಾಮದ ಸ. ನಂ. 19/1ರಲ್ಲಿ  ಒಟ್ಟು 4.31 ಎಕರೆ ಜಮೀನು ತುರುವೇಕೆರೆ ತಾಲೂಕು ದಂಡಿನಶಿವರ  ಹೋಬಳಿ ಸಿದ್ದನಹಟ್ಟಿ ಗ್ರಾಮದ ಕೆಂಪಯ್ಯ ಬಿನ್ ಕೆಂಪಯ್ಯ ಇವರ ಹೆಸರಿಗೆ ಖಾತೆ ಇದ್ದು ಇವರ ಮರಣದ ನಂತರ ಇವರ ಹೆಂಡತಿ ಮಾಳಮ್ಮನಿಗೆ 1.08 ಎಕರೆ ಜಮೀನು ವಿಭಾಗದ ಮೂಲಕ ಬಂದು ಇವರು 1978 ರಲ್ಲಿ  ಜಮೀನು ಮಾರಾಟ ಮಾಡಿರುತ್ತಾರೆ. ಉಳಿಕೆ ಜಮೀನಿನಲ್ಲಿ ನಮ್ಮ ತಂದೆ ಶ್ಯಾನ್ ಬೋಗ್  ನರಸಿಂಹಯ್ಯ 1979 ರಲ್ಲಿ ಕೆಂಪಯ್ಯ ನವರಿಂದ ನಾವು 19/1ರಲ್ಲಿ 1.23 ಎಕರೆ ನಮಗೆ ಶುದ್ದ ಕ್ರಯಕ್ಕೆ ತೆಗೆದುಕೊಂಡು ಸುಮಾರು 60 ವರ್ಷಗಳಿಂದ ಅನುಭವದಲ್ಲಿ ಇದ್ದರೂ ಸಹ ನಮ್ಮ ತಂದೆ ಖಾತೆ ಮಾಡಿಕೊಂಡಿರುವುದಿಲ್ಲ. ನಮಗೆ ನೋಂದಣಿ ಆದ ನಂತರವೂ ಸಹ ಜಮೀನು ಮೂಲ ಮಾಲೀಕರ ಹೆಸರಿನಲ್ಲಿ ಬರುತ್ತಿರುವುದನ್ನು ಗಮನಿಸಿದ ಜಮೀನಿನ ಕುಟುಂಬ ದವರು ಕಳೆದ ಒಂದು ವರ್ಷದ ಹಿಂದೆ ಪೌತಿ ವಾರಸುಮೂಲಕ ಖಾತೆ ಬದಲಾವಣೆಯನ್ನು ಮಾಡಿಕೊಂಡು ಕಲ್ಲೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಎಂಬುವರಿಗೆ ಅಕ್ರಮವಾಗಿ  ಮಾರಾಟ ಮಾಡಿರುತ್ತಾರೆ.


    Provided by
    Provided by

    ನಾವು ಕ್ರಯಕ್ಕೆ ಪಡೆದು ಖಾತೆ ಮಾಡಿಕೊಳ್ಳದೆ ಇರುವ  ಜಮೀನನ್ನು ಕ್ರಯಕ್ಕೆ ಕೊಂಡು ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಅವರ ಕುಟುಂಬ ದವರು ಜಮೀನಿನ ಬಳಿ ಬಂದು ಇದು ನಮಗೆ ಸೇರಿರುವ ಜಮೀನು ಎಂದು ನಮ್ಮ ಮೇಲೆ ದೌರ್ಜನ್ಯ ಮಾಡಿ ಬೆದರಿಸಿ   ನಮಗೆ ತೊಂದರೆ ನೀಡುವ ಜೋತೆಗೆ ಜಮೀನಿನಿಂದ ಹೊರಹಾಕಿ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಈ ಜಮೀನು ಖಾತೆ ನಮಗೆ ಹಳೇ ಕ್ರಯ ಪತ್ರದಂತೆ ಖಾತೆ ಮಾಡಿಕೊಡುವಂತೆ  ಸಂಬಂಧ ಪಟ್ಟ ಕಂದಾಯ ಇಲಾಖೆಗೆ 1 ವರ್ಷದ ಹಿಂದೆ ನಾನು ಅರ್ಜಿ  ನೀಡಿದ್ದರು ಸಹ ಕಂದಾಯ ಇಲಾಖೆ ನಮಗೆ ಯಾವುದೇ ರೀತಿಯಲ್ಲಿ ಅನುಕೂಲ ಮಾಡಿಲ್ಲ  ಬದಲಾಗಿ ಅಂದಿನ  ಬೊಚಿಹಳ್ಳಿ ಗ್ರಾಮ ಲೆಕ್ಕಾಧಿಕಾರಿ  ಶಿವಕುಮಾರ್. ಸ್ಥಳ ಪರಿಶೀಲನೆ ಮಾಡದೆ ಗ್ರಾಮದಲ್ಲಿ ವಿಚಾರಿಸದೆ ತಮ್ಮ ಕಛೇರಿ ಯಲ್ಲಿ ಮಹಜರ್ ಮಾಡಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ ಇದರಿಂದ ನಮಗೆ ಬಹಳ ಅನ್ಯಾಯ ವಾಗಿದ್ದು ತಾಲೂಕು ಆಡಳಿತ ಇವರ ಮೇಲೆ ಕ್ರಮ ವಹಿಸುವಂತೆ ಆಗ್ರಹಿಸಿದರು.

    ಭೂ ದಾಖಲೆ ಅಧಿಕಾರಿಗಳು ಸಹ ಈ ಜಮೀನು ತಿದ್ದುಪಡಿ ಮಾಡಿ ಫೋಡು ಬದಲಾವಣೆ ಮಾಡಿ ನಮಗೆ ತೊಂದರೆ ನೀಡುತ್ತಿದ್ದು ಕಂದಾಯ ಮತ್ತು ಭೂ ದಾಖಲೆ ಇಲಾಖೆ ಅಧಿಕಾರಿಗಳ ಎಡವಟ್ಪಿನಿಂದ ಇಂದು ನಮ್ಮ ಕುಟುಂಬ ಬೀದಿಗೆ ಬರುವಂತಾಗಿದೆ ಎಂದರು.  ಈ ವೇಳೆಯಲ್ಲಿ ಸ್ಥಳೀಯ ಗ್ರಾಮಸ್ಥರು. ರೈತ ಮುಖಂಡರು ಇತರರು ಹಾಜರಿದ್ದರು.

    ವರದಿ: ಚೇತನ್ ಗೌಡ, ಗುಬ್ಬಿ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಗುಬ್ಬಿ: ವೇಗದಿಂದ ಸಾಗುತ್ತಿದೆ ಕಂದಾಯ ಗ್ರಾಮಗಳ ನೋಂದಣಿ ಕಾರ್ಯ

    February 6, 2026

    ಹಿಂಡಿಸ್ ಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸುಜಾತ ಉಪಾಧ್ಯಕ್ಷರಾಗಿ ಗೀತಾ ಅವಿರೋಧ ಆಯ್ಕೆ

    February 4, 2026

    ಅವಧಿ ಮುಗಿಯುತ್ತಿರುವ ಎಲ್ಲಾ ಗ್ರಾ.ಪಂ.ಗಳಿಗೂ ಶೀಘ್ರವೇ ಆಡಳಿತಾಧಿಕಾರಿಗಳ ನೇಮಕ: ಶಾಸಕ ಶ್ರೀನಿವಾಸ್

    February 1, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರಿನಲ್ಲಿ ಹಿಂದೂ ಸಮಾಜೋತ್ಸವದ ಅದ್ದೂರಿ ಸಿದ್ಧತೆ: ಇಂದು ಬೃಹತ್ ಶೋಭಾಯಾತ್ರೆ

    February 9, 2026

    ತಿಪಟೂರು: ನಗರದ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ…

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.