ಕೊರಟಗೆರೆ : ವಾಹನ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಬೇಕು ಎಂದು ಕೊರಟಗೆರೆ ಪಿಎಸೈ ತೀರ್ಥೇಶ್ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಕೊರಟಗೆರೆ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಅನೇಕ ಅಪಘಾತಗಳು ಮನುಷ್ಯನ ತಪ್ಪುಗಳಿಂದ ಆಗುತ್ತವೆ. ಅಪಘಾತದಲ್ಲಿ ಅಮಾಯಕ ಜನರು ಜೀವ ಕಳೆದುಕೊಂಡು ಅವಲಂಬಿಸಿರುವವರನ್ನ ಬೀದಿಪಾಲು ಮಾಡುತ್ತಾರೆ. ವಾನಹ ಚಾಲಕರು ವಾಹನದಲ್ಲಿ ಕುಳಿತುಕೊಂಡಾಗ ತಮ್ಮ ಕುಡುಂಬದವರನ್ನ ಒಂದು ಬಾರಿ ನೆನೆಸಿಕೊಳ್ಳಿ. ನಿಮಗೆ ಏನಾದರೂ ತೊಂದರೆ ಆದಲ್ಲಿ ಅವರ ಪರಿಸ್ಥಿತಿ ಏನು. ಅನೇಕರು ಕುಡಿದು ವಾಹನ ಚಾಲನೆ ಮಾಡುತ್ತಾರೆ. ಅದರಿಂದ ಅನೇಕ ಅಪಘಾತಗಳ ಸಂಭಿವಿಸಿ ಮೃತಪಟ್ಟುತ್ತಾರೆ ಎಂದು ತಿಳಿಸಿದರು.
ವಾಹನ ಚಾಲನೆ ಮಾಡುವ ಪ್ರತಿಯೊಬ್ಬರು ರಸ್ತೆ ನಿಯಮಗಳನ್ನ ಹಾಗೂ ಸಂಚಾರ ಚಿಹ್ನೆಗಳನ್ನ ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ತೋರದೆ ಸರ್ಕಾರದ ನಿಯಮಗಳನ್ನ ಪಾಲನೆ ಮಾಡಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಸಂಚಾರ ನಿಯಮಗಳನ್ನ ಎಲ್ಲರೂ ಪಾಲಿಸಿದ್ದಲ್ಲಿ ಸಾಕಷ್ಟು ಅಪಘಾತಗಳನ್ನ ತಡೆಯಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೊಳವನಹಳ್ಳಿ ಉಪಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸೈ ನಾಗರಾಜು, ಗ್ರಾಮಸ್ಥರಾದ ರಾಮಾಂಜನೇಯ, ರಂಗಣ್ಣ, ರೇಣುಕಾಪ್ರಸಾದ್, ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


