ಸಿರಾ: ಧ್ಯಾನ ಹಾಗೂ ಯೋಗಾಸನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಿರಾ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪಾಂಡುರಂಗಪ್ಪ ಹೇಳಿದರು
ಜಿಲ್ಲೆಯ ಸಿರಾ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಯೋಗ ಮತ್ತು ಯೋಗಾಸನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಗತ್ತೇ ಒಂದು ಕುಟುಂಬ ಎನ್ನುವ ತತ್ತ್ವದಡಿ ಸೇವೆ ಮಾಡುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ.
ಮನಸ್ಸು ಏರುಪೇರು ಆದಾಗ ಶಾರೀರಿಕವಾಗಿ ನಾವು ತೊಂದರೆಗೀಡಾಗುತ್ತೇವೆ. ಆರೋಗ್ಯವಂತರಾಗಿರಬೇಕಾದರೆ ಧ್ಯಾನ ಬಹಳ ಅವಶ್ಯಕವಿದೆ. ಮನಸ್ಸಿನ ಆರೋಗ್ಯ ಅಷ್ಟೇ ಮುಖ್ಯವಾಗಿದೆ. ಮನಸ್ಸು ಆರೋಗ್ಯವಾಗಿರಬೇಕಾದರೆ ಅಧ್ಯಾತ್ಮ ಜ್ಞಾನ ಒಳ್ಳೆಯ ಚಿಂತನೆಗಳು ಮುಖ್ಯವಾಗಿವೆ. ನಾವು ಏನು ನೋಡುತ್ತಿದ್ದೇವೋ ಇದೇನು ಶಾಶ್ವತವಲ್ಲ, ಧ್ಯಾನ ಒಂದು ಅದ್ಭುತವಾದ ಶಕ್ತಿ ಅದರಲ್ಲಿ ನಾವು ತಲ್ಲೀನರಾದಾಗ ಮನಸ್ಸಿನ ಗೊಂದಲ ದೂರವಾಗುತ್ತವೆ ಎಂದರು.
ಬ್ರಹ್ಮಕುಮಾರಿ ಆಧ್ಯಾತ್ಮಿಕ ಪ್ರವಚನಕ ರಾಜಯೋಗಿ ಡಾ.ಮಹೇಂದ್ರಪ್ಪ ಪಿ.ಹೆಚ್. ಮಾತನಾಡಿ, ಯೋಗಾಸನ ಶರೀರದ ಆರೋಗ್ಯವನ್ನು ಸದೃಢ ಮಾಡುತ್ತದೆ. ಧ್ಯಾನ ಮನಸ್ಸಿನ ಆರೋಗ್ಯವನ್ನು ಸದೃಢ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತನಾಗಲು ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಅಧ್ಯಾತ್ಮ ವಿಷಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ಎಂದರು.
ಕಾರ್ಯಕ್ರಮ ದಲ್ಲಿ ನಗರಸಭೆ ಸದಸ್ಯರಾದ ತೇಜು ಬಾನುಪ್ರಕಾಶ್, ನರಸಿಂಹಮೂರ್ತಿ, ಬ್ರಹ್ಮ ಕುಮಾರಿ, ಅನ್ನಪೂರ್ಣ ಮತ್ತಿತರ ಹಾಜರಿದ್ದರು.
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB