ಸರಗೂರು: ಹಾಲಿಗೆ ಕಲಬೆರಕೆ ಮಾಡದೆ ಗುಣಮಟ್ಟವನ್ನು ಕಾಯ್ದುಕೊಂಡು ಹಾಲಿನ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶಾಸಕರು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.
ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಬಿಎಂಸಿ ಕೇಂದ್ರವನ್ನು ಮಂಗಳವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಏಳಿಗೆಗೆ ಎಲ್ಲರೂ ಶ್ರಮಿಸಬೇಕು. ಆ ಮೂಲಕ ಗುಣಮಟ್ಟದ ಹಾಲಿನ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
ಹಾಲಿನಿಂದ ಮನೆಯ ನಿರ್ವಹಣೆ ಮಾಡಬಹುದು. ಹಾಲಿನಿಂದ ಕಲಬೆರಕೆ ಇರೋದಿಲ್ಲ. ಪರಿಶುದ್ದ ಹಾಲು ಮಕ್ಕಳಿಂದ ವಯೋವೃದ್ದರಿಗೂ ಬೇಕು. ಸುಂದರವಾಗಿ ಕಟ್ಟಡ ನಿರ್ಮಾಣವಾಗಿದ್ದು, ಸಂಘ ಉತ್ತಮವಾಗಿ ಬೆಳೆಯಬೇಕು. ರಾಜಕಾರಣ ಮಾಡಬಾರದು ಎಂದು ಹೇಳಿದರು.
ಮೈಮುಲ್ ಅಧ್ಯಕ್ಷ ಕೆ.ಈರೇಗೌಡ ಮಾತನಾಡಿ, “ಹಾಲಿಗೆ ನೀರು ಹಾಕದೆ ಗುಣಮಟ್ಟ ಕಾಯ್ದುಕೊಳ್ಳಿ. ಹಸುಗಳಿಗೆ ರೋಗಬರದಂತೆ ಮುನ್ನೆಚ್ಚರಿಕೆ ಕ್ರಮವಹಿಸಿಕೊಂಡು ಆರೋಗ್ಯ ಕಾಪಾಡಿ. ಮುಂದಿನ ದಿನಗಳಲ್ಲಿ ಉತ್ಪಾದಕರು ಸಬಲರಾಗಲು ಹೆಚ್ಚು ಹಾಲು ಉತ್ಪಾದನೆಗೆ ಮುಂದಾಗಬೇಕು,” ಎಂದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷ ಕೆ ಈರೇಗೌಡ, ಮೈಮುಲ್ ನಿರ್ದೇಶಕ ದ್ರಾಕ್ಷಾಯೀಣಿ ಬಸವರಾಜಪ್ಪ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ ಮಂಜುನಾಥ ವಹಿಸಿದ್ದರು. ವ್ಯವಸ್ಥಾಪಕರಾದ ಎಲ್ ಆರ್ ಕರಿಬಸವರಾಜು, ಜಿ.ಎನ್.ಸಂತೋಷ್, ವಿಸ್ತರಣಾಧಿಕಾರಿಗಳಾದ ಆರೀಫ್ ಇಕ್ಬಾಲ್, ರಾಮಪ್ಪ ಬಾರ್ಕಿ, ಗ್ರಾಪಂ ಅಧ್ಯಕ್ಷ ಟಿ.ಕುಮಾರ್, ಮುಖಂಡರು ಶಂಬುಲಿಂಗನಾಯಕ, ಪುರದಕಟ್ಟೆ ಬಸವರಾಜು, ಚಿಕ್ಕಣ್ಣ, ಮಲ್ಲೇಶ್, ಪ್ರದೀಪ್, ಗ್ರಾಪಂ ಸದಸ್ಯ ಮಹಾದೇವಯ್ಯ, ಕರಿಗೌಡ, ಗುಡಿಗೌಡ ನಂಜಪ್ಪ, ಗುಡಿಗೌಡ ರತ್ನಯ್ಯ, ನಾಗರಾಜು, ಸುಂದರ, ನಾಗರಾಜು, ಉಪಾಧ್ಯಕ್ಷೆ ಗಂಗಮ್ಮ, ನಿರ್ದೇಶಕರಾದ ಡಿ.ರತ್ನಯ್ಯ, ಕೆ.ಎಸ್.ಮಹದೇವಪ್ಪ, ಕೆಮಡಗಣ್ಣಸ್ವಾಮಿ, ಸುಂದರರದಾಸ್, ಬೀರೇಗೌಡ, ಡಿ.ಗೋಪಾಲಚಾರಿ, ಪುಟ್ಟೇಗೌಡ, ಮಹದೇವಯ್ಯ, ಮಹದೇವಮ್ಮ, ಎಚ್.ಶಿವು, ಕಾರ್ಯದರ್ಶಿ ಕೆ. ಮಹದೇವಸ್ವಾಮಿ, ಹಾಲು ಪರೀಕ್ಷಕಿ ಎಂ.ಸುಗುಣಾಂಬ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


