ಗುಬ್ಬಿ: ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ (ಗುಬ್ಬಿಯಪ್ಪ) ಅವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಉಪವಿಭಾಗಾಧಿಕಾರಿಗಳು ಹಾಗೂ ದೇವಾಲಯದ ಆಡಳಿತಾಧಿಕಾರಿ ನಹೀದಾ ಜಮ್ ಜಮ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ದೇವಾಲಯದ ದಾಸೋಹ ಸಭಾಂಗಣದಲ್ಲಿ ಕರೆಯಲಾಗಿತ್ತು.
ಸಭೆಯಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಹಶೀಲ್ದಾರ್ ಆರತಿ ಬಿ. ಕಳೆದ ಬಾರಿ ನಡೆದ ಜಾತ್ರಾ ಮಹೋತ್ಸವದ ಸಾಧಕ ಬಾಧಕಗಳನ್ನು ಚರ್ಚಿಸಿ ಜಾತ್ರೆಯ ಸಂದರ್ಭದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ 18 ಕೋಮಿನ ಮುಖಂಡರು, ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ದಾಸೋಹ ಸಮಿತಿ ಸೇರಿದಂತೆ ಹಲವು ಮುಖಂಡರ ಚರ್ಚೆ ನಡೆಸಿ ಬೆಸ್ಕಾಂ, ಆರೋಗ್ಯ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಬಾರಿಯೂ ಜಾತ್ರೆಯ ಸಂದರ್ಭದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು, ಜಾತ್ರೆಯ ಸಂದರ್ಭದಲ್ಲಿ ಜಿಲ್ಲೆಯ ಮೂಲೆ ಮೂಲೆಯಿಂದ ಹಾಗೂ ಹೊರ ಜಿಲ್ಲೆಗಳಿಂದ ಭಕ್ತರು ಬರುವುದರಿಂದ ಕೆಎಸ್ಆರ್ಟಿಸಿ ಅವರು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಲಾಯಿತು, ಜೊತೆಗೆ ಸಾವಿರಾರು ಜನ ಭಾಗವಹಿಸುವುದರಿಂದ ಪೊಲೀಸ್ ಇಲಾಖೆಯು ಸಹ ಸರಿಯಾದ ಭದ್ರತೆ ಒದಗಿಸಬೇಕು ಎಂದು ತಿಳಿಸಲಾಯಿತು.
ಫೆ.22ರಿಂದ ಆರಂಭವಾಗುವ ಜಾತ್ರಾ ಮಹೋತ್ಸವವು ಫೆ.26ರಂದು ಗುಬ್ಬಿಯಪ್ಪರವರ ಮಹಾರಥೋತ್ಸವವು ನಡೆಯಲಿದ್ದು, ಮಾ.3ರಂದು ಸಂಜೆ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಲಿದೆ. ಜಾತ್ರೆಯು ಫೆ.22ರಿಂದ ಆರಂಭವಾಗಿ ಮಾರ್ಚ್ 15ರಂದು ಮುಕ್ತಾಯವಾಗಿದ್ದು, ಅಲ್ಲಿಯವರೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಜೊತೆಗೆ ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ಸಂದರ್ಭದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಕೊಂಡು ಸೂಕ್ತ ಭದ್ರತೆ ಕಲ್ಪಿಸುವಂತೆ ಸೂಚನೆ ನೀಡಿದರು.
ಈ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಮತ್ತು ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿ ಆರತಿ ಬಿ. ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ, ಪಾಟೀಲ್ ಕೆಂಪೇಗೌಡರು, ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ ಬಿಂದು ಮಾಧವ, ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ದಾಸೋಹ ಸಮಿತಿ, ಜೀರ್ಣೋದ್ಧಾರ ಸಮಿತಿ, ಅಧ್ಯಕ್ಷ ಜಿ ಆರ್ ಸುರೇಶ್, ಕಾರ್ಯದರ್ಶಿ ಜಿ ಟಿ ಸುರೇಶ್ ಸದಸ್ಯರಾದ ಚನ್ನಬಸವಪ್ರಸಾದ್, ಅನಿಲ್ ಕುಮಾರ್, ಪ್ರಭು, ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳಾದ ಮಂಜುನಾಥ್, ರೇಣು ಕಪ್ರಸಾದ್, ರಾಘವೇಂದ್ರ, ಜೀರ್ಣೋದ್ಧಾರ ಸಮಿತಿಯ ಜಿಬಿಟಿ ಹರೀಶ್, ಕುಮಾರ್, ಯಜಮಾನ್ ಕುಮಾರ್, ಮುಖಂಡರುಗಳಾದ ಜಿ ಎಸ್ ವಿಜಯ ಕುಮಾರ್, ಸೋಮಶೇಖರಯ್ಯ, ನಿಜಲಿಂಗಪ್ಪ, ವಾಟಾಳ್ ನಾಗರಾಜ್, ಸದಾಶಿವ, ಜಿ ಎನ್ ಬಸವರಾಜು, ಲಕ್ಷ್ಮೀನಾರಾಯಣ ಅರ್ಜುನ್, ಅನಿಲ್, 18 ಕೋಮಿನ ಮುಖಂಡರು, ಭಕ್ತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


