ತುಮಕೂರು: ನಗರದ ವರಿನ್ ಅಂತರಾಷ್ಟ್ರೀಯ ವಸತಿ ಶಾಲೆಯ 30 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಸಾಮಾನ್ಯ ಜ್ಞಾನದ ಒಲಂಪಿಯಾಡ್ ಪರೀಕ್ಷೆಯಲ್ಲಿ ಚಿನ್ನದ ಪದಕಗಳಿಸಿದ್ದಾರೆ.
ಇಂಟರ್ನ್ಯಾಷನಲ್ ಜನರಲ್ ನಾಲೆಡ್ಜ್ ಒಲಂಪಿಯಾಡ್ ಪರೀಕ್ಷೆಯು ವಿದ್ಯಾರ್ಥಿಗಳ ಪಠ್ಯೇತರ ಜ್ಞಾನ ಸಂಪನ್ನತೆ, ಜಾಗೃತ ಮನಸ್ಥಿತಿ, ತಾರ್ಕಿಕ ಆಲೋಚನೆ ಜೀವನ ಕೌಶಲ ಇತ್ಯಾದಿ ಅಂಶಗಳನ್ನು ಪರೀಕ್ಷಿಸುವ ಗುರಿ ಹೊಂದಿದೆ.
ವರಿನ್ ವಿದ್ಯಾರ್ಥಿಗಳು ತಮ್ಮ ಬುದ್ಧಿಮತ್ತೆ, ಜ್ಞಾನಗಳಿಗೆ ಪ್ರಸ್ತುತ ವಿದ್ಯಮಾನಗಳ ಅರಿವು ಇತ್ಯಾದಿ ಜ್ಞಾನ ಸ್ಥಿರತೆಯನ್ನು ಸ್ಪಷ್ಟವಾಗಿ ದಾಖಲಿಸುವ ಮೂಲಕ ಚಿನ್ನದ ಪದಕ ಮತ್ತು ಅಭಿನಂದನಾ ಪತ್ರವನ್ನು ಗಳಿಸಿರುತ್ತಾರೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಾಧನೆ ಪ್ರಶಂಸನೀಯವಾಗಿದೆ. ವಿಜೇತರೆಲ್ಲರನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗ ಪ್ರಶಂಸಿಸಿ ಹರ್ಷ ಸೂಚಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


