ಗುಬ್ಬಿ: ಗುಬ್ಬಿ ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾವಿರಾರು ಹಿಂದೂ ಸಮಾಜದ ಮುಖಂಡರುಗಳು ಸಮಾಜೋತ್ಸವದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಗುಬ್ಬಿ ಪಟ್ಟಣದ ನಾಗಲೀಂಗೇಶ್ವರ ಸ್ವಾಮಿ ದೇವಾಲಯದಿಂದ ಹೊರಟ ಹಿಂದೂ ಮೆರವಣಿಗೆ ಗೋಸಲ ಚನ್ನಬಸವೇಶ್ವರ ದೇವಾಲಯದವರೆಗೆ ವಿವಿಧ ಮಠಾಧೀಶರುಗಳು ಹಾಗೂ ವಿವಿಧ ಜನಪದ ಕಲಾ ತಂಡಗಳು ಲಿಂಗದ ವೀರರ ಕುಣಿತ ಹಾಗೂ ನಂದಿಧ್ವಜಾ ಕುಣಿತ ಹಾಗೂ ದೇವರುಗಳ ಉತ್ಸವದೊಂದಿಗೆ ಸಾವಿರಾರು ಹಿಂದೂಗಳು ಮೆರವಣಿಗೆಯಲ್ಲಿ ಭಾಗವಹಿಸಿ ಸಾಥ್ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಷ್ವ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಇಡೀ ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾದರೆ, ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಆದ್ದರಿಂದ ನಾವೆಲ್ಲ ಹಿಂದೂಗಳು ಒಗ್ಗೂಡಿ ಹಿಂದೂ ಸಮಾಜವನ್ನು ಕಟ್ಟಬೇಕು. ಸನಾತನ ಧರ್ಮ ಪರಂಪರೆ ಹಾಗೂ ಭಾರತೀಯತೆಯ ಉಳಿಸಿ ಬೆಳೆಸುವ ಧ್ಯೇಯದಿಂದ ಪ್ರಾರಂಭಗೊಂಡ ಆರ್ ಎಸ್ ಎಸ್ ನೂರು ಸಂಘಟನೆ ನೂರು ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಹಿಂದೂಗಳಲ್ಲಿ ಸಂಘಟನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾಜೋತ್ಸವ ಆಚರಿಸಲಾಗುತ್ತಿದೆ. ಎಂದು ತಿಳಿಸಿದರು.
ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ಮಾತನಾಡಿ, ಹಿಂದೂ ಧರ್ಮಕ್ಕೆ ಯಾರು ಸಂಸ್ಥಾಪಕರು ಇಲ್ಲ, ಭೌದ್ದ ಧರ್ಮ ಹಾಗೂ ಕೈಸ್ತ ಧರ್ಮ ಹಲವು ಧರ್ಮಗಳಿಗೆ ಸಂಸ್ಥಾಪಕರು ಇದ್ದಾರೆ. ಆದರೆ ಹಿಂದೂ ಧರ್ಮಕ್ಕೆ ಮಾತ್ರ ಯಾರು ಇಲ್ಲ, ಹಿಂದೂ ಧರ್ಮವನ್ನು ಪ್ರತಿಯೊಬ್ಬ ಸಂತರು ಕೂಡ ಒಪ್ಪಿಕೊಂಡಿದ್ದಾರೆ. ಎಲ್ಲ ಜಾತಿ ಧರ್ಮಗಳಿಗೂ ಒಂದೇ ರೀತಿಯಾಗಿ ನಡೆದುಕೊಳುತ್ತದೆ. ಆದರೆ ಮೇಲು ಕೀಳು ಭಾವನೆಯೊಂದಿಗೆ ನಡೆದುಕೊಳುವುದು ತಪ್ಪು ಅದನ್ನು ಬಿಟ್ಟು ನಾವೆಲ್ಲರೂ ಹಿಂದೂಗಳೆಂಬ ಭಾವನೆಯೊಂದಿಗೆ ಇದ್ದಾರೆ ದೇಶ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಡುಗೊಲ್ಲ ಜನಾಂಗವನ್ನು ಎಸ್.ಟಿ.ಮೀಸಲಾತಿಗೆ ಸೇರಿಸಬೇಕೆಂದ ಬಿಜೆಪಿ ರಾಷ್ವ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರಿಗೆ ವನಕಲ್ಲು ಮಠದ ಶ್ರೀಬಸವ ರಮಾನಂದ ಸ್ವಾಮಿಗಳು ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮಿಗಳು, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿಧ್ಯಾಶಂಕರ ಸ್ವಾಮಿಗಳು, ಕೋಡಿಹಳ್ಳಿಮಠದ ಶ್ರೀ ಬಸವ ಬೃಗೇಶ್ವರ ಸ್ವಾಮಿಗಳು , ಜ್ಞಾನನಂದಪೂರಿ ಸ್ವಾಮಿಗಳು, ಆಟವಿ ಮಠದ ಮಹಾಲಿಂಗಸ್ವಾಮಿಗಳು ಸೇರಿದಂತೆ ಹಿಂದೂ ಸಮಾಜೋತ್ಸವದ ಮುಖಂಡರುಗಳು ಭಾಗವಹಿಸಿದ್ದರು.
ವರದಿ: ಚೇತನ್ ಗೌಡ, ಗುಬ್ಬಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


