ಗುಬ್ಬಿ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಂದಾದರೆ ಹೆಚ್ಚು ಅಭಿವೃದ್ಧಿಯನ್ನು ಕಾಣಬಹುದು ಎಂಬುದನ್ನು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತೋರಿಸಿದ್ದಾರೆ ಎಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ತಿಳಿಸಿದರು.
ಪಟ್ಟಣದ ಲಯನ್ಸ್ ಸಂಸ್ಥೆಯ ಕಚೇರಿ ಆವರಣದಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ,ಲಯನ್ಸ್ ಕ್ಲಬ್, ಗುಬ್ಬಿ ಇವರ ಆಶಯದಲ್ಲಿ ಏರ್ಪಡಿಸಿದ್ದ ಗುಬ್ಬಿ ಲಯನ್ಸ್ ಕ್ಲಬ್ ಸರ್ವೀಸ್ ಟ್ರಸ್ಟ್(ರಿ.) ನೂತನ ಕಛೇರಿ ಉದ್ಘಾಟನೆ, ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನೂತನ ಉಚಿತ ಮುಕ್ತಿವಾಹನ ಲೋಕಾರ್ಪಣೆ ಮತ್ತು ಲಯನ್ಸ್ ಕ್ಲಬ್ ಪಕ್ಕದ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆ ಭೂಮಿಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದ್ದು ಮುಂದಿನ ಹತ್ತು ವರ್ಷದಲ್ಲಿ ಗುಬ್ಬಿ ತುಮಕೂರು ಎರಡು ಒಂದಾಗಿ ಒಂದೇ ನಾಣ್ಯದ ಎರಡು ಮುಖಗಳಾಗುವುದರಲ್ಲಿ ಸಂಶಯವಿಲ್ಲ ಎಂದರು.
ಗುಬ್ಬಿ ಅತಿ ವೇಗವಾಗಿ ಬೆಳೆಯುತ್ತಿರುವುದರಿಂದ ಗುಬ್ಬಿಯ ಸುತ್ತಮುತ್ತ ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನುಗಳನ್ನು ಮಾರಾಟ ಮಾಡಬೇಡಿ. ಮುಂದೊಂದು ದಿನ ಉತ್ತಮ ಬೆಲೆ ಸಿಗುತ್ತದೆ. ಈ ಭಾಗದ ಜನತೆ ನನಗೆ ಮತನೀಡಿ ಗೆಲ್ಲಿಸಿರುವುದರಿಂದ ನಾನು ಅವರ ಋಣ ತೀರಿಸಲು ಪ್ರಮುಖವಾಗಿ ರಸ್ತೆಯ ಅಭಿವೃದ್ಧಿ ಹಾಗೂ ರೈಲ್ವೆ ಅಭಿವೃದ್ಧಿಯ ಕಾಮಗಾರಿಗಳಿಗೆ ಹೆಚ್ಚು ಅನುದಾನತಂದು ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಸ್. ಕುಮಾರಸ್ವಾಮಿ ಮಾತನಾಡಿ, ಲಯನ್ಸ್ ಸಂಸ್ಥೆಯು ಸುಮಾರು 43 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವೆಗಳನ್ನ ಮಾಡಿಕೊಂಡು ಬಂದಿದ್ದು, ಇಂದು ಲಯನ್ಸ್ ಕ್ಲಬ್ ವತಿಯಿಂದ ಮುಕ್ತಿ ವಾಹನ ಲೋಕಾರ್ಪಣೆ ಹಾಗೂ ಸಾರ್ವಜನಿಕರ ಉದ್ಯಾನವನ ಅಭಿವೃದ್ಧಿಗೆ ಭೂಮಿ ಪೂಜೆಯನ್ನು ಮಾಡಿಲಾಗಿದೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚು ಸಾಮಾಜಿಕ ಚಟುವಟಿಕೆಗಳನ್ನು ಎಲ್ಲಾ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಸಹಕಾರದಿಂದ ಮಾಡುತ್ತೇವೆ ಎಂದರು.
ವೇದಿಕೆ ಕಾರ್ಯಕ್ರಮವನ್ನು ಶಾಸಕ ಎಸ್. ಆರ್. ಶ್ರೀನಿವಾಸ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಛೇರ್ಮನ್ ಕೆ.ಆರ್. ಅಶೋಕ್ ಕುಮಾರ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಎಲ್.ವಿ.ಸಾವಂತ್, ಜಿ.ಆರ್. ಶಿವಕುಮಾರ್, ರಮೇಶ್ ಬಾಬು, ವಿವೇಕಾನಂದಸ್ವಾಮಿ.ಎಲ್., ಬಸವರಾಜು.ವಿ., ನಿವೃತ್ತ ಪ್ರಾಂಶುಪಾಲ ಜಿ.ಬಿ.ಮಲ್ಲಪ್ಪ, ಪಿ.ಎಸ್. ಸುರೇಶ್‌ಬಾಬು, ಹೊಸಹಳ್ಳಿ ಗಿರೀಶ್, ಉಂಡೆ ರಾಮಣ್ಣ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಕುಮಾರಸ್ವಾಮಿ,
ವರದಿ: ಚೇತನ್ ಗೌಡ, ಗುಬ್ಬಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


