ಪಾವಗಡ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಹೆಲ್ಪ್ ಸೊಸೈಟಿ , ಸೇವಾ ಟ್ರಸ್ಟ್ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಶ್ರೀಶಾಲಾ ಕಾನ್ವೆಂಟ್, ಅಕ್ಷಯ ಬ್ಲೂಜಂ ಶಾಲೆ, ಸಹಯೋಗದಲ್ಲಿ 1,750 ಅಡಿಗಳ ಉದ್ದದ ತಿರಂಗಾ ಯಾತ್ರೆ ಅತ್ಯಂತ ವೈಭವದಿಂದ ನೆರವೇರಿತು.
ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನ ಮುಂಭಾಗದಲ್ಲಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ.ಶಶಿಕಿರಣ್ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮ ಮೂಡಿಸಿಕೊಳ್ಳಬೇಕು, ನಮ್ಮ ದೇಶವನ್ನು ಕಾವಲು ಕಾಯುವ ಸೈನಿಕರ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು, ಚಿತ್ರ ನಟರ ಫೋಟೋಗಳನ್ನು ಸ್ಟೇಟಸ್ ನಲ್ಲಿ ಹಾಕಿಕೊಳ್ಳದೆ ದೇಶಕ್ಕಾಗಿ ಹೋರಾಡಿದ ವೀರ ನಾಯಕರ ಫೋಟೋಗಳನ್ನು ಸ್ಟೇಟಸ್ ನಲ್ಲಿ ಹಾಕಿಕೊಂಡು ದೇಶ ಪ್ರೇಮವನ್ನು ಮೆರೆಯ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಂತರ ತಿರಂಗ ಯಾತ್ರೆ ಶಿರಾ ರಸ್ತೆ,ಬಳ್ಳಾರಿ ರಸ್ತೆ, ಶನಿಮಹಾತ್ಮ ಸರ್ಕಲ್ ಮುಖಾಂತರ ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ತಿರಂಗಾ ಯಾತ್ರೆ ಆಗಮಿಸಿದಾಗ, ಶಾಸಕರಾದ ಎಚ್.ವಿ.ವೆಂಕಟೇಶ್ ಮತ್ತು ತಹಶೀಲ್ದಾರ್ ವೈ.ರವಿ, ಇ.ಓ. ಮಧುಸೂದನ್ ಮತ್ತು ಬಿ.ಇ.ಓ. ರೇಣುಕಮ್ಮ ಮತ್ತಿತರ ಅಧಿಕಾರಿಗಳು ಬರಮಾಡಿಕೊಂಡು, ಸುಮಾರು 2 km ಉದ್ದದವರೆಗೂ ಸಾಗಿದ ತಿರಂಗ ಯಾತ್ರೆಯನ್ನು ಮುಕ್ತಾಯಗೊಳಿಸಿದರು, ಈ ವೇಳೆ ಮಾತನಾಡಿದ, ಶಾಸಕ ಎಚ್ .ವಿ. ವೆಂಕಟೇಶ್, ಇಷ್ಟೊಂದು ಬೃಹತ್ ಪ್ರಮಾಣದ ತಿರಂಗಾ ಯಾತ್ರೆಯನ್ನ ಕೈಗೊಂಡು ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುತ್ತಿರುವ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮತ್ತು ತಿರಂಗಾ ಯಾತ್ರೆಯ ರೂವಾರಿಗಳಾದ ಲಕ್ಷ್ಮೀನಾರಾಯಣ ಗುಪ್ತ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು, ಮತ್ತು ತಾಲೂಕು ಆಡಳಿತದ ವತಿಯಿಂದ ಲಕ್ಷ್ಮೀನಾರಾಯಣ ಗುಪ್ತ ಮತ್ತು ಮಾನಂ ಶಶಿಕಿರಣ್ ಅವರಿಗೆ ವೇದಿಕೆಯಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ವೇಳೆ, ಮಾನಂ ಶಶಿಕಿರಣ್ ಸಂಧ್ಯಾ ಶಶಿಕಿರಣ್, ಶಿಕ್ಷಕಿ ಭವ್ಯ ,ಶಮಿ ವೃಕ್ಷ ಅಭಿವೃದ್ಧಿ ಸಮಿತಿಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸತ್ಯ ಲೋಕೇಶ್, ಪ್ರಾಂಶುಪಾಲರಾದ ನಾಗೇಂದ್ರ, ನಾಗರಾಜು, ಚಂದ್ರಶೇಖರ್ , ಉಪನ್ಯಾಸಕರಾದ ಮಲ್ಲಿಕಾರ್ಜುನ, ಶಿವಕುಮಾರ್, ಪಾಂಡುರಂಗ, ಜಗದೀಶ್, ರಾಜಗೋಪಾಲ್, ರವಿಕಾಂತ್, ಮುಖಂಡರಾದ ರೈತ ಮುಖಂಡ ಜಿ.ನರಸಿಂಹ ರೆಡ್ಡಿ, ಚೌದರಿ, ನರಸಿಂಹ ಮೂರ್ತಿ, ಪಾವಗಡ ಪೊಲೀಸ್ ಠಾಣಾ ಸಿಪಿಐ ಸುರೇಶ್, ಗ್ರಾಮಾಂತರ ಸಿ.ಪಿ.ಐ. ಗಿರೀಶ್, ವೀರಮ್ಮನಹಳ್ಳಿ ಲೋಕೇಶ್, ನರೇಶ್, ಮೆಡಿಕಲ್ ದೇವರಾಜ್, ನಲ್ಲಾನಿಸುರೇಂದ್ರ, ಬಿಜೆಪಿಯ ಯುವ ಅಧ್ಯಕ್ಷರಾದ ಅಶೋಕ್, ರವಿ, ನಾಯುಡು, ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಸಿಇಒ ಶ್ರೀಧರ್ ಗುಪ್ತ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ಗೋವಿಂದ, ರಘುಪತಿ ನಾಯ್ಡು, ಮಂಜುನಾಥ, ಮತ್ತಿತರರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


