nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ

    October 12, 2026

    ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ

    October 12, 2026

    ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ

    October 12, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ
    • ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ
    • ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ
    • ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ತುಂಬಿ ನಾಲೆಗೆ ಎಸೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್– ಆರೋಪಿ ಬಂಧನ
    • ತಿಪಟೂರು: ಬಿ.ಎಚ್. ರಸ್ತೆಯಲ್ಲಿ ಬೃಹತ್ ಮರ ಬಿದ್ದು ನಿವೃತ್ತ ಶಿಕ್ಷಕ ದುರಂತ ಸಾವು
    • ಅಪ್ರಾಪ್ತರ ಕೈಗೆ ವಾಹನ ನೀಡಿದರೆ ಪೋಷಕರಿಗೆ ₹25 ಸಾವಿರ ದಂಡ: ಭಾಲ್ಕಿ ಡಿವೈಎಸ್ಪಿ ಎಚ್ಚರಿಕೆ
    • ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ
    • ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಜ್ಯದಲ್ಲಿ 370 ಬಾಂಗ್ಲಾ ವಲಸಿಗರ ಪತ್ತೆ; 196 ಜನರ ಗಡಿಪಾರು: ಗೃಹ ಸಚಿವ ಜಿ. ಪರಮೇಶ್ವರ
    ರಾಜ್ಯ ಸುದ್ದಿ February 3, 2026

    ರಾಜ್ಯದಲ್ಲಿ 370 ಬಾಂಗ್ಲಾ ವಲಸಿಗರ ಪತ್ತೆ; 196 ಜನರ ಗಡಿಪಾರು: ಗೃಹ ಸಚಿವ ಜಿ. ಪರಮೇಶ್ವರ

    By adminFebruary 3, 2026No Comments1 Min Read
    dr g parameshwar

    ಬೆಂಗಳೂರು: ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರ ಕುರಿತು ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನಸಭೆಯಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 370 ಬಾಂಗ್ಲಾ ಪ್ರಜೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 196 ಜನರನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಎಲ್ಲೆಲ್ಲಿ ಎಷ್ಟು ಜನ?: ಗುರುತಿಸಲಾದ 370 ಜನರಲ್ಲಿ ಅತಿ ಹೆಚ್ಚು ಅಂದರೆ 284 ಮಂದಿ ಬೆಂಗಳೂರಿನಲ್ಲಿದ್ದಾರೆ. ಉಳಿದಂತೆ ಬೆಂಗಳೂರು ಗ್ರಾಮಾಂತರದಲ್ಲಿ 37, ಶಿವಮೊಗ್ಗದಲ್ಲಿ 12 ಮತ್ತು ಹಾಸನದಲ್ಲಿ 3 ಬಾಂಗ್ಲಾ ಪ್ರಜೆಗಳನ್ನು ಪತ್ತೆ ಹಚ್ಚಲಾಗಿದೆ.

    ಹಲವು ನಗರಗಳಿಗೆ ವಲಸೆ: ಅಕ್ರಮ ವಲಸಿಗರು ಸಾಮಾನ್ಯವಾಗಿ ಕೋಲ್ಕತ್ತಾ ಮೂಲಕ ದೇಶದ ಒಳಗೆ ನುಸುಳುತ್ತಾರೆ. ಅಲ್ಲಿಂದ ಕೆಲಸ ಅರಸಿ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ವಲಸೆ ಹೋಗುತ್ತಾರೆ ಎಂದು ಸಚಿವರು ವಿವರಿಸಿದರು.

    ಲಕ್ಷಾಂತರ ಜನರಿದ್ದಾರೆ ಎಂಬ ಆರೋಪ ತಳ್ಳಿಹಾಕೆ: ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾ ವಲಸಿಗರಿದ್ದಾರೆ ಎಂಬ ವಿರೋಧ ಪಕ್ಷದ ಆರೋಪವನ್ನು ಸಚಿವರು ನಿರಾಕರಿಸಿದರು. “ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅವರು ಇಲ್ಲಿರುವುದನ್ನು ನಾನು ಒಪ್ಪುವುದಿಲ್ಲ, ಆದರೆ ಅಕ್ರಮ ವಲಸಿಗರ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ” ಎಂದರು.

    ಪ್ರತ್ಯೇಕ ಕಾರ್ಯಪಡೆ: ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಪ್ರತ್ಯೇಕ ಕಾರ್ಯಪಡೆ (Special Task Force) ರಚಿಸಲಾಗಿದೆ. ರಾಜ್ಯ ಸರ್ಕಾರ ವಲಸಿಗರನ್ನು ಪತ್ತೆ ಹಚ್ಚುವ ಕೆಲಸ ಮಾಡಿದರೆ, ಕೇಂದ್ರ ಸರ್ಕಾರ ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

    ವಿಧಾನಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ನಡೆದ ಚರ್ಚೆಯ ವೇಳೆ ಬಿಜೆಪಿ ಸದಸ್ಯರ ಆಕ್ಷೇಪಗಳಿಗೆ ಉತ್ತರಿಸುತ್ತಾ ಪರಮೇಶ್ವರ ಅವರು ಈ ವಿವರಗಳನ್ನು ನೀಡಿದ್ದಾರೆ. ಈ ವೇಳೆ ಪುನೀತ್ ಕೆರೆಹಳ್ಳಿ ವಿಚಾರವಾಗಿಯೂ ಸದನದಲ್ಲಿ ಪರ-ವಿರೋಧದ ಚರ್ಚೆಗಳು ನಡೆದವು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ

    October 12, 2026

    ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!

    October 12, 2026

    “30 ನಾಯಕರಿಗೆ ಕೋಟಿ ಕೋಟಿ ಕೊಟ್ಟಿದ್ದೇನೆ” ಎಂದ ಪ್ರದೀಪ್ ಈಶ್ವರ್! ಕಾಂಗ್ರೆಸ್‌ ನಲ್ಲಿ ಭಿನ್ನಮತ ಸ್ಫೋಟ

    October 11, 2026

    Leave A Reply Cancel Reply

    Our Picks

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ

    October 12, 2026

    ತುಮಕೂರು: ತುಮಕೂರು ದಸರಾ–2026 ಉತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜಿಸಲು ಉದ್ದೇಶಿಸಲಾಗಿದ್ದ ಹೆಲಿಕ್ಯಾಪ್ಟರ್ ರೈಡ್ ಗೆ (Helicopter Ride) ತುಮಕೂರು ವಿಶ್ವವಿದ್ಯಾನಿಲಯವು…

    ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ

    October 12, 2026

    ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ

    October 12, 2026

    ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ತುಂಬಿ ನಾಲೆಗೆ ಎಸೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್– ಆರೋಪಿ ಬಂಧನ

    October 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.