nammatumakuru

    Subscribe to Updates

    Get the latest creative news from FooBar about art, design and business.

    What's Hot

    “ತಿಂದ ಮನೆಗೆ ಕನ್ನ ಹಾಕಬೇಡಿ, ಗಂಟುಮೂಟೆ ಕಟ್ಟಿ ಹೊರಡಿ”: ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ

    April 4, 2026

    ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ: 9 ಅಪ್ರಾಪ್ತರು ಸೇರಿ 13 ಮಂದಿ ಜಾರ್ಖಂಡ್ ಖದೀಮರ ಬಂಧನ

    April 4, 2026

    ಗ್ಯಾಸ್ ಸಮಸ್ಯೆ ಬಗೆಹರಿಸದ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ

    April 4, 2026
    Facebook Twitter Instagram
    ಟ್ರೆಂಡಿಂಗ್
    • “ತಿಂದ ಮನೆಗೆ ಕನ್ನ ಹಾಕಬೇಡಿ, ಗಂಟುಮೂಟೆ ಕಟ್ಟಿ ಹೊರಡಿ”: ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ
    • ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ: 9 ಅಪ್ರಾಪ್ತರು ಸೇರಿ 13 ಮಂದಿ ಜಾರ್ಖಂಡ್ ಖದೀಮರ ಬಂಧನ
    • ಗ್ಯಾಸ್ ಸಮಸ್ಯೆ ಬಗೆಹರಿಸದ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ
    • ಕೌಟುಂಬಿಕ ಕಲಹ: ಮನನೊಂದು ನಾಪತ್ತೆಯಾಗಿದ್ದ ತುಮಕೂರಿನ ಮಹಿಳಾ ಪಿಎಸ್‌ ಐ ಚಿಕ್ಕಮಗಳೂರಿನಲ್ಲಿ ಪತ್ತೆ
    • ಡಾ. ಆತ್ಮ ಪ್ರಸನ್ನ ಅವರ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಕೃತಿ ಬಿಡುಗಡೆ: ಇದೊಂದು ಮಹಾನ್ ಗ್ರಂಥ ಎಂದ ಡಾ.ಸಿ.ಎನ್.ಮಂಜುನಾಥ
    • 1 ಗಂಟೆಗೆ ಸೀಮಿತವಾದ ಹುಳಿಯಾರು ಪ.ಪಂ. ಸಾಮಾನ್ಯ ಸಭೆ: ವಿಷಯ ಚರ್ಚೆ ನಡೆಯದೆ ಪಾಸ್
    • ಪಿಗ್ಮಿ ಹಣ ಗುಳುಂ: ಸಂಕಷ್ಟದಲ್ಲಿರುವ ಜನರ ಸಮಸ್ಯೆಗೆ ಕಿವಿಯಾದ ಶಾಸಕ ಸುರೇಶ್‌ ಬಾಬು
    • ಸ್ವಯಂ ಗಣತಿ: ಬಡಾವಣೆಗಳಿಗೆ ಖುದ್ದು ಭೇಟಿ ನೀಡಿ ಅರಿವು ಮೂಡಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರಗೂರು: ಕಾಡಾನೆ ದಾಳಿಗೆ ರೈತ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ತೀವ್ರ ಆಕ್ರೋಶ
    ಜಿಲ್ಲಾ ಸುದ್ದಿ February 5, 2026

    ಸರಗೂರು: ಕಾಡಾನೆ ದಾಳಿಗೆ ರೈತ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ತೀವ್ರ ಆಕ್ರೋಶ

    By adminFebruary 5, 2026No Comments2 Mins Read
    sargur

    ಸರಗೂರು: ತಾಲೂಕಿನಲ್ಲಿ ಮಾನವ ಮತ್ತು ಕಾಡಾನೆ ನಡುವಣ ಸಂಘರ್ಷ ಮುಂದುವರಿದಿದ್ದು, ಗುರುವಾರ ಬೆಳಗಿನ ಜಾವ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿರುವ ದಾರುಣ ಘಟನೆ ಬಿ.ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಟಿ ಕಾಲೋನಿಯಲ್ಲಿ ನಡೆದಿದೆ.

    ಘಟನೆಯ ವಿವರ: ಮೃತ ರೈತರನ್ನು ಎಸ್.ಟಿ.ಕಾಲೋನಿ ಗ್ರಾಮದ ನಿವಾಸಿ ಮಾದ (75) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಮಾದ ಅವರು ಮಲ ವಿಸರ್ಜನೆಗಾಗಿ ಜಮೀನಿನ ಕಡೆಗೆ ತೆರಳಿದ್ದಾಗ, ಮೊಳೆಯೂರು ವಲಯದಿಂದ ಬಂದ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಆನೆಯು ಅವರನ್ನು ತುಳಿದು ಹಾಕಿದ್ದರಿಂದ ಮಾದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


    Provided by
    Provided by

    ಬಹಳ ಹೊತ್ತಾದರೂ ಮಾದ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಿಕೊಂಡು ಹೋದಾಗ, ಬಂಡೀಪುರ ಗ್ಯಾಸ್ ಗೋಡೌನ್ ಪಕ್ಕದ ರಸ್ತೆಯ ಬಳಿ ಶವವು ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿದೆ.

    ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ:

    ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಮತ್ತು ಸಂಬಂಧಿಕರು ಜಮಾಯಿಸಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    “ರೈಲು ಕಂಬಿಗಳ ಬ್ಯಾರಿಕೇಡ್‌ ಗಳು ಹಲವೆಡೆ ಮುರಿದುಬಿದ್ದಿವೆ. ಆನೆಗಳು ರಾಜಾರೋಷವಾಗಿ ಜಮೀನುಗಳಿಗೆ ನುಗ್ಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಗ್ರಾಮಸ್ಥರು ಕಿಡಿಕಾರಿದರು.  ಹಂಚೀಪುರ, ಮಟಕರೆ, ಹೀರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳಿಗ್ಗೆಯೂ ಆನೆಗಳು ಸಂಚರಿಸುತ್ತಿದ್ದು, ಜನರು ಓಡಾಡಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದಾಗ ಸರಗೂರು ಪಿಎಸ್ ಐ ಆರ್. ಕಿರಣ್ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ನಂತರ ಎಸಿಎಫ್ ಪ್ರಭಾಕರನ್ ಮತ್ತು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

    ಪರಿಹಾರ ಘೋಷಣೆ:

    ಸ್ಥಳದಲ್ಲೇ ಸಿಸಿಎಫ್ ಪ್ರಭಾಕರನ್ ಅವರು ರೈತನ ಸಾವಿಗೆ ವಿಷಾದ ವ್ಯಕ್ತಪಡಿಸಿ, ಪರಿಹಾರ ಕ್ರಮಗಳನ್ನು ತಿಳಿಸಿದರು.   ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ತಕ್ಷಣವೇ ₹20 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು.  ಮೃತರ ಪತ್ನಿಗೆ ಪ್ರತಿ ತಿಂಗಳು ₹4,000 ಮಾಸಾಶನ ನೀಡುವ ದಾಖಲೆಗಳನ್ನು ಸ್ಥಳದಲ್ಲೇ ಸಿದ್ಧಪಡಿಸಲಾಯಿತು.

    ಉದ್ಯೋಗ ಭರವಸೆ: ಕುಟುಂಬದ ಒಬ್ಬ ಸದಸ್ಯರಿಗೆ ಇಲಾಖೆಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದರು.

    ಆನೆ ಹಿಡಿಯುವ ಕಾರ್ಯಾಚರಣೆ: ಇಂದಿನಿಂದಲೇ ಆನೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಮತ್ತು ರೈಲು ಬ್ಯಾರಿಕೇಡ್ ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಮಾದ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

    ಈ ಸಂದರ್ಭದಲ್ಲಿ ಚಿಕ್ಕಬೋಮ್ಮ, ಅಣ್ಣಯ್ಯ ಸ್ವಾಮಿ,ಗ್ರಾಪಂ ಅಧ್ಯಕ್ಷ ದೇವದಾಸ್, ನಾಗರಾಜು, ಚಿಕ್ಕಕ್ಯಾತ, ಮಣಿಕಂಠ, ಶ್ರೀನಿವಾಸ ಸೇರಿದಂತೆ ಅನೇಕರು ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸ್ವಯಂ ಗಣತಿ: ಬಡಾವಣೆಗಳಿಗೆ ಖುದ್ದು ಭೇಟಿ ನೀಡಿ ಅರಿವು ಮೂಡಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್

    April 4, 2026

    ಶಿವಮೊಗ್ಗ: ಅತ್ತೆ–ಮಾವನ ಕಿರುಕುಳಕ್ಕೆ 4 ತಿಂಗಳ ಗರ್ಭಿಣಿ ಸಾವು; ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಪೋಷಕರ ಆಕ್ರೋಶ

    April 3, 2026

    ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದೆ: ಬಾಗಲಕೋಟೆಯಲ್ಲಿ ಸೋಮಣ್ಣ ಗುಡುಗು

    April 3, 2026

    Leave A Reply Cancel Reply

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    “ತಿಂದ ಮನೆಗೆ ಕನ್ನ ಹಾಕಬೇಡಿ, ಗಂಟುಮೂಟೆ ಕಟ್ಟಿ ಹೊರಡಿ”: ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ

    April 4, 2026

    ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ (ಹಿಂದಿ) ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿ ಪತ್ರ ಬರೆದಿರುವ…

    ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ: 9 ಅಪ್ರಾಪ್ತರು ಸೇರಿ 13 ಮಂದಿ ಜಾರ್ಖಂಡ್ ಖದೀಮರ ಬಂಧನ

    April 4, 2026

    ಗ್ಯಾಸ್ ಸಮಸ್ಯೆ ಬಗೆಹರಿಸದ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ

    April 4, 2026

    ಕೌಟುಂಬಿಕ ಕಲಹ: ಮನನೊಂದು ನಾಪತ್ತೆಯಾಗಿದ್ದ ತುಮಕೂರಿನ ಮಹಿಳಾ ಪಿಎಸ್‌ ಐ ಚಿಕ್ಕಮಗಳೂರಿನಲ್ಲಿ ಪತ್ತೆ

    April 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.