ತುರುವೇಕೆರೆ: ಸಮಾಜ ಸೇವೆಗೆ ಜಾತಿ ಮುಖ್ಯವಾಗಬಾರದು, ನಾವು ಮಾಡುವ ಸೇವೆ ಮುಖ್ಯವಾಗಬೇಕು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೋಳಂಬ ಲಿಂಗಾಯತ ಉಪ ಸಮಿತಿ ವತಿಯಿಂದ ಹಾಗೂ ಶಾಸಕ ಅನುದಾನ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನೂತನ ಗಣಪತಿ ಆಲಯ ಮತ್ತು ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಮುದಾಯ ಭವನಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮವಾದ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿ. ದಂಡಿನಶಿವಪ್ಪ ರಸ್ತೆಯ ಸಾರಿಗೆಹಳ್ಳಿ ಕೆರೆಕೋಡಿಗೆ ಸುಮಾರು 4 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಆದರೆ ಕೆಲವು ತಾಂತ್ರಿಕ ತೊಡಕುಗಳಿಂದ ಕಾಮಗಾರಿ ತಡವಾಗಿದ್ದು, ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಬಿ.ಧರಣೇಶ್ ಹಾಗೂ ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಮಾಚೇನಹಳ್ಳಿ ಲೋಕೇಶ್ ರನ್ನು ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ನೋಳಂಬ ಲಿಂಗಾಯತ ರಾಜ್ಯ ಸಂಘದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್, ಗೌರವ ಕಾರ್ಯದರ್ಶಿ ಕೆ.ಬಿ.ಶಶಿಧರ್, ನಿರ್ದೇಶಕರಾದ ಎಂ.ದೇವರಾಜು, ನೋಳಂಬ ಲಿಂಗಾಯತ ತಾಲ್ಲೂಕು ಸಂಘದ ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ, ಕಾರ್ಯದರ್ಶಿ ಶಿವಕುಮಾರ್, ಶೈಲೇಶ್, ತಾಂತ್ರಿಕ ಸಲಹೆಗಾರರು ಎಂ.ಎಸ್.ಪ್ರಸಾದ್, ಮುಖಂಡರಾದ ಹಟ್ಟಿಹಳ್ಳಿ ರಮೇಶ್, ಮಾಚೇನಹಳ್ಳಿ ಸಿದ್ದಬಸಪ್ಪ, ಹೆಡಗಿಹಳ್ಳಿ ವಿಶ್ವನಾಥ್, ರಾಮಡಿಹಳ್ಳಿ ದೇವರಾಜು, ವೆಂಕಟಾಪುರ ಯೋಗೇಶ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


