nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ

    October 11, 2026

    ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?

    October 11, 2026

    ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?

    October 11, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ
    • ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?
    • ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?
    • ಬ್ಯಾಂಕ್ ಸೇವೆಯಲ್ಲಿ ಲೋಪವಾದರೆ ನಿಮಗೂ ಪರಿಹಾರ ಸಿಗುತ್ತೆ!  ಯಾವಾಗ ಎಷ್ಟು ? 
    • ಕಾನ್ಸಿರಾಂ ದೇಶ ಕಂಡ ಅತ್ಯುನ್ನತ ರಾಜಕಾರಣಿ: ರಾಹುಲ್ ಖಂದಾರೆ
    • ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!
    •  CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?
    • ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಸಿದ್ದರ ತಪೋ ಭೂಮಿ”ಯಲ್ಲಿ ಅದ್ಧೂರಿ ಮಹಾ ಶಿವರಾತ್ರಿ: ಖ್ಯಾತ ನಟ–ನಟಿಯರು, ಕಿರುತರೆ ಕಲಾವಿದರು, ಗಣ್ಯರು ಭಾಗಿ
    ಕೊರಟಗೆರೆ February 15, 2026

    “ಸಿದ್ದರ ತಪೋ ಭೂಮಿ”ಯಲ್ಲಿ ಅದ್ಧೂರಿ ಮಹಾ ಶಿವರಾತ್ರಿ: ಖ್ಯಾತ ನಟ–ನಟಿಯರು, ಕಿರುತರೆ ಕಲಾವಿದರು, ಗಣ್ಯರು ಭಾಗಿ

    By adminFebruary 15, 2026No Comments2 Mins Read
    sidharabetta

    ವಿಶೇಷ ವರದಿ: ಮಂಜುಸ್ವಾಮಿ ಎಂ.ಎನ್.

    ತುಮಕೂರು : ಜಿಲ್ಲೆಯ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಸಿದ್ದರಬೆಟ್ಟವು ಅತ್ಯಂತ ಪ್ರಾಚೀನ ಮತ್ತು ಪೌರಾಣಿಕ ಇತಿಹಾಸವನ್ನು ಹೊಂದಿರುವ ಸುಕ್ಷೇತ್ರವಾಗಿದ್ದು. ಈ ಪುಣ್ಯಕ್ಷೇತ್ರವನ್ನು ಸಿದ್ದರ ತಪೋಭೂಮಿ, ಆಯುರ್ವೇದಿಕ್ ದಿವ್ಯ ಔಷಧಿಗಳ ತಾಣ, ನವಕೋಟಿ ಸಿದ್ದರು ತಪಸ್ಸು ಮಾಡಿದ ಪುಣ್ಯಸ್ಥಳವೆಂದು ಸಹ ಈ ಕ್ಷೇತ್ರವನ್ನು ಕರೆಯಲ್ಪಡುತ್ತಾರೆ.

    ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಸುಕ್ಷೇತ್ರವಾಗಿದ್ದು ರಾಮಾಯಣ ಕಾಲದಲ್ಲಿ ಶ್ರೀ ಆಂಜನೇಯ ಸ್ವಾಮಿಯು ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಹೊತ್ತು ತರುವಾಗ ಒಂದು ತುಂಡು ಕಳಚಿ ಬಿದ್ದ ಕ್ಷೇತ್ರವಾಗಿದೆ ಎಂಬಾ ಇತಿಹಾಸವು ಇದೆ. ಇಂದಿಗೂ ಕೂಡ ಶ್ರೀ ಸಿದ್ಧರಬೆಟ್ಟ ಕ್ಷೇತ್ರದಲ್ಲಿ ಸಂಜೀವಿನಿ ಸೇರಿದಂತೆ ಜೀವಾಮೃತ ನೀಡುವ ಗಿಡ ಮೂಲಿಕೆಗಳು, ದಿವ್ಯ ಔಷಧಿಯ ಸಸ್ಯಗಳು ಇರುವುದು ಸತ್ಯವಾಗಿದೆ. ಈ ಕಾರಣಗಳಿಂದ ಈ ಸಿದ್ಧರಬೆಟ್ಟ ಕ್ಷೇತ್ರವನ್ನು “ಸುವರ್ಣ ಗಿರಿ” ಮತ್ತು “ರಸ ಸಿದ್ಧರಬೆಟ್ಟ” ಎಂದು ಕರೆಯುತ್ತಾರೆ.  ಸುವರ್ಣಮುಖಿ ನದಿಯ ಉಗಮ ಸ್ಥಾನವಾಗಿದೆ. ನವಕೋಟಿ ಸಿದ್ದರು ಈ ಪುಣ್ಯಭೂಮಿಯಲ್ಲಿ ತಪಸ್ಸು ಮಾಡಿದ ಹಿನ್ನೆಲೆಯಿಂದ ಈ ಕ್ಷೇತ್ರವನ್ನು “ಸಿದ್ದರಬೆಟ್ಟ” ಎಂದು ನಾಮಕರಣ ಮಾಡಲಾಗಿದೆ.

    ದುಬೈನ ಪರ್ವ ಗ್ರೂಪ್ಸ್ ಸಾರಥ್ಯದಲ್ಲಿ ಅಹೋರಾತ್ರಿ ಜಾಗರಣೆ ಮಹೋತ್ಸವ

    ಗ್ರಾಮೀಣ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಸಿದ್ದರಬೆಟ್ಟದ ಶ್ರೀ ಬಾಳೆ ಹೊನ್ನೂರು ಖಾಸಾ ಶಾಖಾ ಮಠದ ಆವರಣದಲ್ಲಿ ಇಂದು ರಾತ್ರಿ ಅಹೋರಾತ್ರಿ ಜಾಗರಣೆ  ಕಾರ್ಯಕ್ರಮವನ್ನು ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಹನುಮಂತನಾಥ ಮಹಾ ಸ್ವಾಮೀಜಿಯವರ ಮಾರ್ಗದರ್ಶನ ದೊಂದಿಗೆ, ಯುವ ಉದ್ಯಮಿ ಹಾಗೂ ಪರ್ವ ಗ್ರೂಪ್ಸ್ ನ ಅಧ್ಯಕ್ಷರಾದ ನಿಲೇಶ್ ಹೆಚ್ ಪಿ ಅವರ ಸಾರಥ್ಯದಲ್ಲಿ ಅಹೋರಾತ್ರಿ ಜಾಗರಣಾ ಮಹೋತ್ಸವವನ್ನ ಏರ್ಪಡಿಸಲಾಗಿದೆ. ಇಂದು ಸಂಜೆ 6:೦೦ ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ಬೆಳಗಿನ ಜಾವದವರೆಗೂ ನಡೆಯಲಿದೆ. ಜಾಗರಣೆಗೆ ಬರುವ ಭಕ್ತಾದಿಗಳಿಗೆ ಶ್ರೀ ಮಠದ ವತಿಯಿಂದ ದಾಸೋಹದ ವ್ಯವಸ್ಥೆ ಮಾಡಲಾಗಿದೆ, ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

    ಧರ್ಮ ಪ್ರಚಾರ, ಧರ್ಮದ ಜಾಗೃತಿ, ಹಾಗೂ ಜನರಿಗೆ ಆಧ್ಯಾತ್ಮಿಕ ಚಿಂತನೆಯನ್ನ ಮೂಡಿಸಬೇಕು ಎಂದು ಸಿದ್ದರಬೆಟ್ಟದಲ್ಲಿ ಅದ್ದೂರಿ ಶಿವರಾತ್ರಿ ಜಾಗರಣೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

    —  ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ, ಶ್ರೀ ಕ್ಷೇತ್ರ ಸಿದ್ದರಬೆಟ್ಟ


    ಗ್ರಾಮೀಣ ಭಾಗದ ಒಬ್ಬ ಯುವಕ ಹೊರ ದೇಶವಾದ ದುಬೈನಲ್ಲಿ ಉದ್ಯಮ ಮಾಡಿ ಬಹಳಷ್ಟು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಮೂಲಕ ಮತ್ತು ತಾಯ್ನಾಡಿಗೆ ಬಂದು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿ ಧರ್ಮ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

    ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದ ಉದ್ಘಾಟನೆ:

    ಅಹೋರಾತ್ರಿ ಜಾಗರಣೆ ಕಾರ್ಯಕ್ರಮವನ್ನು ರಾಜ್ಯದ ಗೃಹ ಸಚಿವರು, ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಕೊರಟಗೆರೆ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ.ಜಿ.ಪರಮೇಶ್ವರ ಅವರು ಶ್ರೀ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇವರ ಜೊತೆ ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮಧುಗಿರಿ ಶಾಸಕ ರಾಜಣ್ಣ, ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ಮಠಾಧೀಶರು, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

    ಹೆಸರಾಂತ ಕಿರುತರೆ ಕಲಾವಿದರು, ಸಿನಿಮಾ ನಟ–ನಟಿರಿಂದ ರಿಯಾಲಿಟಿ ಶೋ ಹಾಗೂ ಭಕ್ತಿಗೀತೆ, ಶಿವಗೀತೆ ಮತ್ತು ಎಲ್‌ ಇ ಡಿ ಲೇಜರ್ ಶೋ, ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ, ಮನರಂಜನೆ, ಶಿವ ಭಜನೆ, ಹಾಡುಗಳು ಹಾಗೂ ಹಾಸ್ಯ, ಜಾನಪದ ನೃತ್ಯ ಸೇರಿದಂತೆ ಎಲ್ಲಾ ತರಹದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

    ಇದೇ ಪ್ರಪ್ರಥಮವಾಗಿ ನನ್ನ ತವರು ತಾಲ್ಲೂಕು ಆದ ಕೊರಟಗೆರೆ ತಾಲ್ಲೂಕಿನ ಸಿದ್ದರ ತಪೋ ಭೂಮಿ ಸಿದ್ದರಬೆಟ್ಟದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಅದ್ದೂರಿಯಾಗಿ ಜಾಗರಣೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಯಾವುದೇ ನನ್ನ ವೈಯಕ್ತಿಕ ಇಲ್ಲದೆ ಧರ್ಮ ರಕ್ಷಣೆ, ಧರ್ಮ ಜಾಗೃತಿ ಸೇರಿದಂತೆ ಧಾರ್ಮಿಕ ಸೇವೆಗಳಿಗೆ ಆದ್ಯತೆ ನೀಡಲಾಗುತ್ತಿದೆ.

    —  ನೀಲೇಶ್. ಯುವ ಉದ್ಯಮಿ, ಪರ್ವ ಗ್ರೂಪ್, ದುಬೈ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ

    October 4, 2026

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    ಗಾಂಧಿ ಜಯಂತಿ ಪ್ರಯುಕ್ತ ಶ್ರೀಕ್ಷೇತ್ರ ಸಿದ್ದರಬೆಟ್ಟದಲ್ಲಿ ಸ್ವಚ್ಛತಾ ಆಂದೋಲನ

    October 2, 2026

    Leave A Reply Cancel Reply

    Our Picks

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ

    October 11, 2026

    ತುಮಕೂರು: ನಗರದ ಟೌನ್ ಹಾಲ್ ವೃತ್ತದಲ್ಲಿ ದಸರಾ ಮಹೋತ್ಸವ–2026ರ ಅಂಗವಾಗಿ ಕರ್ನಾಟಕ ಸರ್ಕಾರದ ಮಾನ್ಯ ಉಪ ಮುಖ್ಯಮಂತ್ರಿಗಳು ಕಂದಾಯ, ಯುವಜನ…

    ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?

    October 11, 2026

    ತುಮಕೂರು ದಸರಾ 2026ಕ್ಕೆ ಅದ್ಧೂರಿ ಚಾಲನೆ; 11 ದಿನಗಳ ಉತ್ಸವದಲ್ಲಿ ಏನೇನು ವಿಶೇಷ ಏನೇನು?

    October 11, 2026

    ಬ್ಯಾಂಕ್ ಸೇವೆಯಲ್ಲಿ ಲೋಪವಾದರೆ ನಿಮಗೂ ಪರಿಹಾರ ಸಿಗುತ್ತೆ!  ಯಾವಾಗ ಎಷ್ಟು ? 

    October 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.