ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಸಹಯೋಗದಲ್ಲಿ, ಕಾರವಾರದ ನಗರಸಭೆ ಉದ್ಯಾನವನದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಜಯಂತಿಯನ್ನು ಛತ್ರಪತಿ ಶಿವಾಜಿ ಪುತ್ಥಳಿಗೆ ಹಾರ ಹಾಕಿ ಹಾಗೂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ ಉದ್ಘಾಟಿಸಿದರು.
ಶಿವಾಜಿ ಕುರಿತು ವಿಷೇಶ ಉಪನ್ಯಾಸ ನೀಡಿ ಕಮಲಾಕರ ವಿಶ್ವನಾಥ ಕಾಂಬ್ಳೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿ, ರಾಜಕೀಯ ಗುರು ದಾದಾಜಿ ಕೊಂಡದೇವ ಅವರ ಮಾರ್ಗದರ್ಶನದಿಂದ ಅವರು ಹದಿನಾರನೇ ವಯಸ್ಸಿನಲ್ಲೇ ತೋರಣ ಕೋಟೆಯನ್ನು ಗೆಲ್ಲುವ ಮೂಲಕ ಸ್ವರಾಜ್ಯ ಸ್ಥಾಪನೆಗೆ ಮೊದಲ ಹೆಜ್ಜೆ ಇಟ್ಟರು. ನಂತರ ಬಿಜಾಪುರ ಸುತ್ತ ಮುತ್ತಲಿನ ಕೋಟೆ, ಔರಂಗಜೇಬು ಅವರ ಕೋಟೆಗಳನ್ನು ವಶ ಪಡಿಸಿಕೊಂಡನು. ಶಿವಾಜಿ ಅವರನ್ನು ಗೆಲುವಿನ ರಾಜ ಎಂದು ಕರೆಯಲಾಗುತ್ತದೆ.
ಭಾರತದ ಸಂಸ್ಕೃತಿ , ಪಂರಂಪರೆ ಮತ್ತು ಮೌಲ್ಯಗಳನ್ನು ಉಳಿಸುವಲ್ಲಿ ಶಿವಾಜಿಯ ಕೊಡುಗೆ ಆಪಾರ. ದೇಶದಲ್ಲಿ ಮೊದಲ ನೌಕಾಸೇನೆ ಕಟ್ಟಿದ್ದು, ಮುಂದಾಲೋಚನೆ ಹಾಗೂ ರಾಜಕೀಯ ತಂತ್ರದಲ್ಲಿ ಚಾಣಕ್ಷನಾಗಿದ್ದರು. ಅವರ ನಡೆದು ಬಂದ ದಾರಿ ಮತ್ತು ಮಾರ್ಗಗಳು ನಮ್ಮಗೆಲ್ಲ ಪ್ರೇರಣೆಯಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತರಬೇತಿ ನಿರತ ಐಎಎಸ್ ಅಧಿಕಾರಿ ಝೂಪಿಷನ್ ಹಕ್, ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯ ತಹಶೀಲ್ದಾರ್ ಪ್ರಮೋದ ನಾಯ್ಕ, ಕೊಂಕಣ ಮರಾಠ ಸಂಘದ ಅಧ್ಯಕ್ಷ ಗಜಾನನ ರಾಣೆ, ನಗರಸಭೆ ಅಧಿಕಾರಿ ಸಿಬ್ಬಂದಿಗಳು, ಮರಾಠಿ ಸಮುದಾಯದವರು ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ ಸ್ವಾಗತಿಸಿದರು. ನಯನಾ ಮಧುಕರ್ ನಾಯ್ಕ ನಿರೂಪಿಸಿ, ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


