nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಂಜುಗುಣಿ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    February 23, 2026

    ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    February 23, 2026

    ಜೆಡಿಎಸ್ ಬೆಳ್ಳಿಹಬ್ಬ: ಮಾರ್ಚ್ 2ರಂದು ನಿಖಿಲ್ ಕುಮಾರಸ್ವಾಮಿ ತಿಪಟೂರಿಗೆ

    February 23, 2026
    Facebook Twitter Instagram
    ಟ್ರೆಂಡಿಂಗ್
    • ಮಂಜುಗುಣಿ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
    • ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
    • ಜೆಡಿಎಸ್ ಬೆಳ್ಳಿಹಬ್ಬ: ಮಾರ್ಚ್ 2ರಂದು ನಿಖಿಲ್ ಕುಮಾರಸ್ವಾಮಿ ತಿಪಟೂರಿಗೆ
    • ಕೇಕ್ ಬಿಡಿ — ಸಸಿನೆಡಿ: ಮೊಬೈಲ್ ಬಿಡಿ–ಪುಸ್ತಕ ಹಿಡಿ:  ಸಿದ್ದಗಂಗಾ ಶ್ರೀಗಳ ಉದ್ಯಾನವನದಲ್ಲಿ ವಿನಯ್ ವಿನೂತನ ಜನ್ಮದಿನ
    • ಶೇ.99 ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ
    • ಕುರ್ಚಿ ಬಿಟ್ಟುಕೊಡುವ ಜಾಯಮಾನ ಸಿದ್ದರಾಮಯ್ಯ ಅವರದ್ದಲ್ಲ: ಸಿಎಂ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
    • ಈ 3 ತಪ್ಪುಗಳು ನಿಮ್ಮ ಲಿವರ್ ಗೆ ಹಾನಿ ಮಾಡುತ್ತದೆ: ಈಗಲೇ ಬದಲಿಸಿಕೊಳ್ಳಿ
    • ಆರೋಗ್ಯ ಮತ್ತು ಕ್ಷೇಮಾ ಕೇಂದ್ರ ನಿರ್ಮಾಣಕ್ಕೆ ನಿವೇಶನ ಮಂಜೂರು: ಸಚಿವ ಪರಮೇಶ್ವರ್ ಅವರ ಕನಸಿನ ಕೂಸು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೇಕ್ ಬಿಡಿ — ಸಸಿನೆಡಿ: ಮೊಬೈಲ್ ಬಿಡಿ–ಪುಸ್ತಕ ಹಿಡಿ:  ಸಿದ್ದಗಂಗಾ ಶ್ರೀಗಳ ಉದ್ಯಾನವನದಲ್ಲಿ ವಿನಯ್ ವಿನೂತನ ಜನ್ಮದಿನ
    ಜಿಲ್ಲಾ ಸುದ್ದಿ February 23, 2026

    ಕೇಕ್ ಬಿಡಿ — ಸಸಿನೆಡಿ: ಮೊಬೈಲ್ ಬಿಡಿ–ಪುಸ್ತಕ ಹಿಡಿ:  ಸಿದ್ದಗಂಗಾ ಶ್ರೀಗಳ ಉದ್ಯಾನವನದಲ್ಲಿ ವಿನಯ್ ವಿನೂತನ ಜನ್ಮದಿನ

    By adminFebruary 23, 2026No Comments2 Mins Read

    ಮಂಡ್ಯ: ಅದ್ದೂರಿ ಆಡಂಬರವಿಲ್ಲ, ಕೇಕ್ ಕತ್ತರಿಸಿ ಪಟಾಕಿ ಸಿಡಿಸಲಿಲ್ಲ, ಕಟೌಟ್ ಪ್ಲೆಕ್ಸ್ ಹಾಕಲಿಲ್ಲ, ಅಚ್ಚಹಸಿರಿನ ಸುಂದರ ವಾತಾವರಣದಲ್ಲಿ ಸುಮಧುರ ವಚನಗಾಯನದೊಂದಿಗೆ ಹಿರಿಯ ನಾಗರಿಕರು ವಾಯುವಿಹಾರಿಗಳ ಜೊತೆಗೂಡಿ ಸಸಿನೆಟ್ಟು ಪುಸ್ತಕ ವಿತರಿಸಿ ಸರಳವಾಗಿ ಮಾದರಿ ಜನ್ಮದಿನ ಆಚರಣೆ ಮಾಡಲಾಯಿತು.

    ಈ ಅಪರೂಪದ ಜನ್ಮದಿನಕ್ಕೆ ಮಂಡ್ಯ ನಗರದ ಪರಮಪೂಜ್ಯ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿಯವರ ಭಾನುವಾರ ಸಂಜೆ ದೇವರವನ ಸಾಕ್ಷಿಯಾಯಿತು.


    Provided by
    Provided by

    ಕಾಯಕಯೋಗಿ ಫೌಂಡೇಶನ್ ಹಾಗೂ ಸಿದ್ದಗಂಗಾ ಶ್ರೀ ಸೇವಾಸಮಿತಿ ಆಯೋಜಿಸಿದ್ದ ಎಲ್ಲರೊಳಗೆ ಒಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜಮುಖಿ ಚಿಂತಕ ವಿನಯ್ ಅವರ 36ನೇ ಜನ್ಮದಿನಾಚರಣೆ ಪ್ರಯುಕ್ತದ ‘ ದಾಸೋಹ’  ಕಾರ್ಯಕ್ರಮ ವಿನೂತನವಾಗಿತ್ತು.

    ಉದ್ಯಾನವನದಲ್ಲಿ ಸಸಿನೆಟ್ಟು ಅಮೂಲ್ಯವಾದ ಪುಸ್ತಕಗಳನ್ನು ನಾಗರೀಕರಿಗೆ ವಿತರಿಸಿ ದಾಸೋಹಕ್ಕೆ ಚಾಲನೆ ನೀಡಿ ವಿನಯ್ ಮಾತನಾಡಿದರು.

    ಸಿದ್ದಗಂಗಾ ಶ್ರೀಗಳ ಅನ್ನ, ಅರಿವು, ಆಸರೆಯಂತಹ ತ್ರಿವಿಧ ದಾಸೋಹ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಂತಹ ಶತಾಯುಷಿ ಸಂತರ ಸೇವಾ ಮಾರ್ಗ ನನಗೆ ಸ್ಪೂರ್ತಿದಾಯಕ ಎಂದರು.

    ಹಸಿದವರಿಗೆ ಅನ್ನ ನೀಡುವುದೇ ಧರ್ಮ ಎಂಬ ಸತ್ಯ ಸಂದೇಶವನ್ನು ಸಾರಿದ ಪರಮಪೂಜ್ಯರ ಉದ್ಯಾನವನದಲ್ಲಿ ಸಸಿನೆಟ್ಟು ಹಸಿರೀಕರಣಕ್ಕೆ ಅಳಿಲುಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ. ಪುಸ್ತಕದ ಮೂಲಕ ಮಸ್ತಕದ ಜ್ಞಾನ ವೃದ್ದಿಯಾಗಬೇಕು. ವಿಶೇಷವಾಗಿ ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕಗಳನ್ನು ಓದುವತ್ತ ಆಸಕ್ತಿ ತೋರಿಸಬೇಕೆಂದರು.

    ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಜನ್ಮದಿನಗಳು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಆಚರಣೆಯಾದಾಗ ಜನಮಾನಸದಲ್ಲಿ ಅಂತಹ ವ್ಯಕ್ತಿಗಳು ಶಾಶ್ವತವಾಗಿ ನೆಲೆಸುತ್ತಾರೆ. ವಿದೇಶಿಗರ ಕೇಕ್ ಸಂಸ್ಕೃತಿಯನ್ನು ಬಿಟ್ಟು ಪ್ರತಿಯೊಬ್ಬರೂ ತಮ್ಮ ಹುಟ್ಟಿದ ದಿನದಂದು ಒಂದೊಂದು ಸಸಿನೆಟ್ಟು ಕಾಪಾಡಿದರೆ ಜೀವನ ಸಾರ್ಥಕ, ಪರಿಸರಕ್ಕೆ ಪೂರಕ ಎಂದರು.

    ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಶಿವರುದ್ರಪ್ಪ ಮಾತನಾಡಿ, ಆಧುನೀಕತೆ ಅಬ್ಬರದಲ್ಲಿ ಸಿಲುಕಿರುವ ಯುವಸಮುದಾಯ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆತಿರುವ ಈ ದಿನಮಾನದಲ್ಲಿ ಅನ್ನದಾಸೊಹ, ಪರಿಸರ ಹಾಗೂ ಪುಸ್ತಕಗಳ ವಿತರಣೆ ಮೂಲಕ ಸಮಾಜಮುಖಿಯಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ವಿನಯ್ ಮಾದರಿಯಾಗಿದ್ದಾರೆ ಎಂದು ಶುಭಹಾರೈಸಿದರು.

    ಕಾಯಕಯೋಗಿ ಫೌಂಡೇಶನ್ ವತಿಯಿಂದ ವಿನಯ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಕಸಾಪ ಮಾಜಿ ಅಧ್ಯಕ್ಷ ಧರಣೇಂದ್ರಯ್ಯ,  ಬಿಜೆಪಿ ಮುಖಂಡ ಜಿ.ಮಹಾಂತಪ್ಪ, ಹಿರಿಯ ಪತ್ರಕರ್ತ ಬಸವೇಗೌಡ, ನಗರಸಭೆ ಮಾಜಿ ಸದಸ್ಯೆ ಕೆ.ವಿದ್ಯಾಮಂಜುನಾಥ್, ಎಂ.ಅರ್.ಮಂಜುನಾಥ್, ಸಮಾಜಸೇವಕ ಡಾ.ಮಲ್ಲಿಕಾರ್ಜುನಯ್ಯ, ಕೆರಗೋಡು ಮಹೇಸ್, ಹರ್ಷಿತ್, ರಾಜೂಗೌಡ, ಶಿವಲಿಂಗು ಹಾಗೂ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಖ್ಯಾತ ಗಾಯಕ ಗೊರವಾಲೆ ರುದ್ರಪ್ಪ ತಂಡದವರು ತತ್ವಪದ ಹಾಗೂ  ವಚನಗಾಯನ ನಡೆಸಿಕೊಟ್ಟರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    February 23, 2026

    ಜೆಡಿಎಸ್ ಬೆಳ್ಳಿಹಬ್ಬ: ಮಾರ್ಚ್ 2ರಂದು ನಿಖಿಲ್ ಕುಮಾರಸ್ವಾಮಿ ತಿಪಟೂರಿಗೆ

    February 23, 2026

    ಹಂಪಸಾಗರದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯುತ್ಸವ ಹಾಗೂ ವೃತ್ತ ಉದ್ಘಾಟನೆ

    February 22, 2026

    Leave A Reply Cancel Reply

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮಂಜುಗುಣಿ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    February 23, 2026

    ಕಾರವಾರ: ಅಂಕೋಲಾ ಮತ್ತು ಕುಮಟಾ ತಾಲೂಕಿನ ಜನತೆಯ ಬಹಳ ದಿನದ ಬೇಡಿಕೆಯಾದ, ಅಂಕೋಲಾದ ಮಂಜಗುಣಿ ಮತ್ತು ಕುಮಟಾ ತಾಲೂಕಿನ ಗಂಗಾವಳಿ…

    ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    February 23, 2026

    ಜೆಡಿಎಸ್ ಬೆಳ್ಳಿಹಬ್ಬ: ಮಾರ್ಚ್ 2ರಂದು ನಿಖಿಲ್ ಕುಮಾರಸ್ವಾಮಿ ತಿಪಟೂರಿಗೆ

    February 23, 2026

    ಕೇಕ್ ಬಿಡಿ — ಸಸಿನೆಡಿ: ಮೊಬೈಲ್ ಬಿಡಿ–ಪುಸ್ತಕ ಹಿಡಿ:  ಸಿದ್ದಗಂಗಾ ಶ್ರೀಗಳ ಉದ್ಯಾನವನದಲ್ಲಿ ವಿನಯ್ ವಿನೂತನ ಜನ್ಮದಿನ

    February 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.