nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ

    June 12, 2026
    Facebook Twitter Instagram
    ಟ್ರೆಂಡಿಂಗ್
    • ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ
    • ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!
    • ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ
    • ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ
    • ಪಾವಗಡ: ಸಕಾಲಕ್ಕೆ ಸಿಗದ ಚಿಕಿತ್ಸೆ; ಹಾವು ಕಚ್ಚಿ ಬಿ.ಫಾರ್ಮಸಿ ವಿದ್ಯಾರ್ಥಿ ದುರ್ಮರಣ
    • ಐದು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಗುದ್ದಲಿ ಪೂಜೆ
    • ಕ್ಷೇತ್ರದ ವಿದ್ಯಾರ್ಥಿಗಳಿಗೆ ಎಸ್.ಬಿ.ಚಾರಿಟಬಲ್ ಟ್ರಸ್ಟ್‌ನಿಂದ ಉಚಿತ ಸಿಇಟಿ, ನೀಟ್ ತರಬೇತಿ: ಶಾಸಕ ಸಿ.ಬಿ. ಸುರೇಶ್ ಬಾಬು
    • KCET–2026ರಲ್ಲಿ ಸುಭಾಷ್ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಕೊರಟಗೆರೆ ತಾಲೂಕು ಪ್ರಥಮ ಸ್ಥಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭದ್ರಾವತಿ ಆಕಾಶವಾಣಿಗೆ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕ ಅಳವಡಿಕೆ
    ಜಿಲ್ಲಾ ಸುದ್ದಿ February 27, 2026

    ಭದ್ರಾವತಿ ಆಕಾಶವಾಣಿಗೆ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕ ಅಳವಡಿಕೆ

    By adminFebruary 27, 2026No Comments3 Mins Read
    l murugan

    ಶಿವಮೊಗ್ಗ:  ರೇಡಿಯೋ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದ್ದು ನೂತನವಾಗಿ ಭದ್ರಾವತಿ ಆಕಾಶವಾಣಿಗೆ ಎಫ್.ಎಂ ಅಳವಡಿಸುವ ಮೂಲಕ ಕಡೆಯ ವ್ಯಕ್ತಿಯನ್ನು ತಲುಪುವ ದೃಢ ಹೆಜ್ಜೆಯನ್ನು ಇಡಲಾಗಿದೆ ಎಂದು ಕೇಂದ್ರದ ಮಾಹಿತಿ ಹಾಗೂ ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾದ ಎಲ್.ಮುರುಗನ್ ತಿಳಿಸಿದರು.

    ಶಿವಮೊಗ್ಗದ ವಿದ್ಯಾನಗರದಲ್ಲಿ ಗುರುವಾರ ಭದ್ರಾವತಿ ಆಕಾಶವಾಣಿಗೆ ನೂತನವಾಗಿ ಅಳವಡಿಸಲಾದ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.


    Provided by
    Provided by

    ಭದ್ರಾವತಿ ಆಕಾಶವಾಣಿಗೆ ಇದೊಂದು ಉಡುಗೊರೆಯಾಗಿದ್ದು, ಜಿಲ್ಲೆಯ ಮೂಲೆ ಮೂಲೆ ಸೇರಿದಂತೆ 8 ಜಿಲ್ಲೆಗಳನ್ನು ತಲುಪಲಿದೆ. ರೇಡಿಯೋ ಒಂದು ಶಕ್ತಿಯುತವಾದ ಸಂವಹನ ಮಾಧ್ಯವಾಗಿದ್ದು ಕೇಂದ್ರ ಸರ್ಕಾರವು ಡಿಜಿಟಲ್ ಮತ್ತು ಸಂವಹನ ಮಾಧ್ಯಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮತ್ತು ಗುಣಮಟ್ಟ ವೃದ್ದಿಗಾಗಿ ರೂ.2000 ಕೋಟಿ ಖರ್ಚು ಮಾಡುತ್ತಿದೆ.

    ರೇಡಿಯೋ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತಿ ಹೆಚ್ಚು ಜನರನ್ನು ತಲುಪುತ್ತಿದ್ದು ಶೇ.92 ಭಾಗವನ್ನು ತಲುಪುತ್ತಿರುವ ಬಹುದೊಡ್ಡ ಪ್ರಸಾರ ಮಾಧ್ಯಮವಾಗಿದೆ. ಕೇಂದ್ರವು ಕಲೆ, ಸಂಸ್ಕೃತಿ, ವಿನ್ಯಾಸ, ಚಲನಚಿತ್ರ, ಸಂಗೀತ, ಸಾಫ್ಟ್ವೇರ್ ಮತ್ತು ಗೇಮಿಂಗ್‌ ನಂತಹ ಸೃಜನಶೀಲ ಉದ್ಯಮಗಳನ್ನು ಒಳಗೊಂಡಿರುವ ಆರ್ಥಿಕ ವ್ಯವಸ್ಥೆ ‘ಆರೆಂಜ್ ಎಕಾನಮಿಗೆ ಹೆಚ್ಚಿನ ಒತ್ತು ನೀಡುತ್ತಿದೆ. 25 ಸಾವಿರ ಶಾಲೆಗಳಿಗೆ ಕ್ರಿಯೇಟಿವ್ ಲ್ಯಾಬ್‌ನ್ನು ನೀಡುತ್ತಿದೆ ಎಂದರು.

    ರೇಡಿಯೋ ಒಂದು ಶಕ್ತಿಯುತ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮ ಮಾತ್ರವಲ್ಲದೇ ನೈಜ, ಸತ್ಯ ಮತ್ತು ಸಮರ್ಪಕವಾದ ಸುದ್ದಿ, ವಿಷಯಗಳನ್ನು ನೀಡುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದೆ. ಜೊತೆಗೆ ಸ್ಥಳೀಯ ಕಲಾವಿದರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಒಂದು ವೇದಿಕೆ ನಿರ್ಮಾಣ ಮಾಡಿದೆ. ಹೊಸತನಕ್ಕೆ ಸ್ಪೂರ್ತಿಯಾಗಿದೆ.

    ರೇಡಿಯೋ 23 ಭಾಷೆಗಳು ಮತ್ತು 182 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ಗಡಿನಾಡು, ಗುಡ್ಡಗಾಡು, ಮತ್ತು ದೂರದ ಪ್ರದೇಶಗಳನ್ನು ತಲುಪುತ್ತಿದೆ. ಎಲ್ಲ ವರ್ಗ ಮತ್ತು ವಯೋಮಾನ ಹಾಗೂ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಬಿತ್ತರವಾಗುತ್ತವೆ. ಆಕಾಶವಾಣಿ ಪಾಡ್‌ಕಾಸ್ಟ್ ಸಹ ಶುರುವಾಗಿದ್ದು ಕಮ್ಯುನಿಟಿ ರೇಡಿಯೋ ಸಹ ಬಹು ದೊಡ್ಡ ಪಾತ್ರ ವಹಿಸುತ್ತಿದೆ. 550 ಕಮ್ಯುನಿಟಿ ರೇಡಿಯೋ ಕೆಲಸ ಮಾಡುತ್ತಿದೆ. ಭದ್ರಾವತಿ ಆಕಾಶವಾಣಿ ಎಫ್ ಎಂ 25ನೇ ಪ್ರೇಷಕವಾಗಿದ್ದು 3500 ಚ ಕಿ.ಮೀ ನ್ನು ಕವರ್ ಮಾಡುತ್ತದೆ ಎಂದರು.

    ಸಂಸದರು, ಶಾಸಕರು ಮನವಿ ಮಾಡಿದಂತೆ ನಗರದ ಪಾರ್ಕುಗಳಲ್ಲಿ ಬಾನುಲಿ ಕೇಳುವಂತಹ ವ್ಯವಸ್ಥೆ ಮಾಡಲು ಇಲ್ಲಿ ಪೈಲಟ್ ಯೋಜನೆಯಾಗಿ ಅನುಷ್ಟಾನಗೊಳಿಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.

    ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಎಫ್.ಎಂ ಪ್ರೇಷಕ ಅಳವಡಿಕೆಗೆ 2024 ರ ಜನವರಿಯಲ್ಲಿ ಅಡಿಗಲ್ಲು ಹಾಕಲಾಗಿತ್ತು. ಇದೀಗ ಅದು ಸಾಕಾರಗೊಂಡಿದ್ದು ಆಕಾಶವಾಣಿ ಭದ್ರಾವತಿ ಕೇಂದ್ರ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ 101.4 ತರಂಗಾಂತರ ಎಫ್ ಎಂ ಪ್ರೇಷಕದ ಅಳವಡಿಕೆಯಿಂದಾಗಿ ಶಿವಮೊಗ್ಗದ ಸುತ್ತಲಿನ ಎಂಟು ಜಿಲ್ಲೆಗಳಿಗೆ ಪ್ರಸಾರ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಸುಮಾರು 1 ಕೋಟಿ ಜನರಿಗೆ ಈ ಸೇವೆ ಲಭ್ಯವಾಗುತ್ತಿದ್ದು ಭದ್ರಾವತಿ ಆಕಾಶವಾಣಿಯ ವಜ್ರ ಮಹೋತ್ಸವದ ಉಡುಗೊರೆ ಇದಾಗಿದೆ.

    ಆಕಾಶವಾಣಿಯು ಆರಂಭಿಕ ಹಂತದಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಡಿಜಿಟಲ್ ಮತ್ತು ಸಂವಹನ ಕ್ರಾಂತಿಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಸಂಪೂರ್ಣ ಕನ್ನಡಿಗರನ್ನು ತಲುಪುವ ಏಕೈಕ ಕೇಂದ್ರವಾಗಿ ಭದ್ರಾವತಿ ಆಕಾಶವಾಣಿ ಹೊರಹೊಮ್ಮಿದೆ. ವಿದ್ಯಾನಗರದ 150 ಮೀಟರ್ ದೂರದರ್ಶನ ಟವರ್ ನ್ನು ಬಳಕೆ ಮಾಡಿಕೊಂಡು 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ ಪ್ರೇಷಕ ಅಳವಡಿಸಲಾಗಿದೆ ಎಂದರು.

    ಇನ್ನು ಮುಂದೆ ನಗರದ ಎಲ್ಲ ಪಾರ್ಕುಗಳಲ್ಲಿ ರೇಡಿಯೋ ಸ್ಟೇಷನ್‌ಗಳನ್ನು ಅಳವಡಿಸಲು ಕೇಂದ್ರ ಸಚಿವರು ಇದೇ ಸಂದರ್ಭದಲ್ಲಿ ಒಪ್ಪಿಗೆ ನೀಡಿರುವುದು ಅಭಿನಂದನೀಯ ಎಂದರು.

    ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಎಫ್.ಎಂ ಪ್ರಸಾರಕ್ಕಾಗಿ ಶಿವಮೊಗ್ಗದ ಜನತೆ ಬಹಳ ವರ್ಷಗಳಿಂದ ಕಾಯುತ್ತಿದ್ದರು. ಇದೀಗ ಎಫ್.ಎಂ. ಪ್ರೇಷಕದ ಅಳವಡಿಕೆಯು ಜನರಲ್ಲಿ ಸಂತೋಷ ತಂದಿದೆ. ನಿಗದಿತ ಸಮಯಕ್ಕೆ ಆರಂಭವಗುವ ಆಕಾಶವಾಣಿ ಕಾರ್ಯಕ್ರಮಗಳು ಎಲ್ಲರ ಮನೆ ಮಾತಾಗಿವೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು ಭದ್ರಾವತಿ ಆಕಾಶವಾಣಿಗೆ ಎಫ್.ಎಂ ತರಲು ಸಹಕರಿಸಿದ್ದು ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ನಗರದ ಎಲ್ಲ ಪಾರ್ಕ್ಗಳಲ್ಲಿ ಜನರಿಗೆ ಬಾನುಲಿ ಪ್ರಸಾರ ಮಾಡುವ ಬಗ್ಗೆ ಚಿಂತಿಸಲಾಗುತ್ತಿದ್ದು, ಕೇಂದ್ರದ ಸಚಿವರು ಈ ಕುರಿತು ಸಹಕಾರ ನೀಡಬೇಕು ಎಂದರು.

    ಆಕಾಶವಾಣಿ ಮಹಾ ನಿರ್ದೇಶಕರಾದ ರಾಜೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಆಕಾಶವಾಣಿ ಇದೀಗ ತಲುಪಲಾರದ ಪ್ರದೇಶಗಳನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಹಾಗೂ ಎಲ್ಲೆಡೆ ಮಾಹಿತಿ, ಶಿಕ್ಷಣ ಮತ್ತು ರಂಜನೆಯನ್ನು ಒದಗಿಸುತ್ತಾ ಬಂದಿದ್ದು, ರಾಷ್ಟಿçÃಯ ಐಕ್ಯತೆಯ ಪ್ರತೀಕವಾಗಿದೆ ಮತ್ತು ವಿಶ್ವಾಸಾರ್ಹ ಧ್ವನಿಯಾಗಿ ಹೊರಹೊಮ್ಮಿದೆ ಎಂದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌರವ್ ದ್ವಿವೇದಿ, ಮಾಜಿ ಶಾಸಕರಾದ ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ದಕ್ಷಿಣ ವಲಯ(ಬ್ರಾಡ್‌ಕಾಸ್ಟ್ ಆಪರೇಷನ್ಸ್)ದ ಅಪರ ಮಹಾ ನಿರ್ದೇಶಕಿ ಗೀತಾ ರಾಣಿ, ಆಕಾಶವಾಣಿ ಭದ್ರಾವತಿಯ ಮುಖ್ಯಸ್ಥರಾದ ಎಸ್. ಆರ್ ಭಟ್, ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಗೋಪಿನಾಥ್, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸಿರಾ: ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಬ್ಲಾಕ್ ಕಾಂಗ್ರೆಸ್ ಒತ್ತಾಯ

    June 11, 2026

    ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ

    June 11, 2026

    ಕೊಟ್ಟೂರು: ಪ್ರೊ.ಬಿ.ಕೃಷ್ಣಪ್ಪನವರ 89ನೇ ಜನ್ಮದಿನಾಚರಣೆ; ದಸಂಸ ವತಿಯಿಂದ ಅರ್ಥಪೂರ್ಣ ಆಚರಣೆ

    June 10, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಮಂತ್ರಾಲಯ:  ಇಲ್ಲಿನ ಪ್ರಸಿದ್ಧ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಇದೇ ಜೂನ್ 26ರಂದು ಅತ್ಯಂತ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿರುವ “ರಾಯರ…

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ

    June 12, 2026

    ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ

    June 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.