nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು ಚಿತ್ರದ ಶೀರ್ಷಿಕೆ, ಹಾಡುಗಳ ಲೋಕಾರ್ಪಣೆ

    August 24, 2026

    ಜಲಾಶಯಕ್ಕೆ ನೀರಿನ ಒಳ ಹರಿವು ಆಧಾರದಲ್ಲಿ ರಾಗಿ ಬೆಳೆಗೆ — ಸಾಲು ಕೆರೆಗಳಿಗೆ ನೀರು: ಶಾಸಕ ಡಾ. ಎಚ್.ಡಿ. ರಂಗನಾಥ್

    August 24, 2026

    ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಬಹಳಮುಖ್ಯ: ಕವಿರತ್ನ ಕಾಳಿದಾಸ ಪ.ಸ.ಸಂಘ ಸಭೆಯಲ್ಲಿ ಡಾ. ಹುಲಿನಾಯ್ಕರ್ ಸಲಹೆ

    August 24, 2026
    Facebook Twitter Instagram
    ಟ್ರೆಂಡಿಂಗ್
    • ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು ಚಿತ್ರದ ಶೀರ್ಷಿಕೆ, ಹಾಡುಗಳ ಲೋಕಾರ್ಪಣೆ
    • ಜಲಾಶಯಕ್ಕೆ ನೀರಿನ ಒಳ ಹರಿವು ಆಧಾರದಲ್ಲಿ ರಾಗಿ ಬೆಳೆಗೆ — ಸಾಲು ಕೆರೆಗಳಿಗೆ ನೀರು: ಶಾಸಕ ಡಾ. ಎಚ್.ಡಿ. ರಂಗನಾಥ್
    • ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಬಹಳಮುಖ್ಯ: ಕವಿರತ್ನ ಕಾಳಿದಾಸ ಪ.ಸ.ಸಂಘ ಸಭೆಯಲ್ಲಿ ಡಾ. ಹುಲಿನಾಯ್ಕರ್ ಸಲಹೆ
    • ಬದುಕಿನ ತಾತ್ವಿಕ ಶೋಧದ ಕಾದಂಬರಿ ಕಾಡುದೇವರಬೆಟ್ಟ:  ಬರಗೂರು ರಾಮಚಂದ್ರಪ್ಪ ಅಭಿಮತ
    • ಗ್ರಾಮೀಣ ರೋಜ್ ಗಾರ್ ಗ್ಯಾರಂಟಿ ಕಾರ್ಡ್ ವಿತರಣೆ
    • ಹೆಗ್ಗೇರೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು:  8 ಕೋಟಿ ರೂ. ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗೆ ಡಿಸಿಎಂ ಚಾಲನೆ
    • ಗೌತಮ್‌ ಅದಾನಿ ಭೇಟಿ ಬಗ್ಗೆ  ಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ
    • ಬೀದರ್: ಸಿಸಿಟಿ ಕಾಮಗಾರಿ ಸ್ಥಳದಲ್ಲೇ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ; 330 ಜನರಿಗೆ ನೆರವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ: ಡಿಎಲ್‌ ಆರ್‌ ಸಿ–ಡಿಸಿಸಿ ಸಭೆಯಲ್ಲಿ ಸಂಸದ ಈ.ತುಕಾರಾಮ್ ತಾಕೀತು
    ಜಿಲ್ಲಾ ಸುದ್ದಿ March 6, 2026

    ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ: ಡಿಎಲ್‌ ಆರ್‌ ಸಿ–ಡಿಸಿಸಿ ಸಭೆಯಲ್ಲಿ ಸಂಸದ ಈ.ತುಕಾರಾಮ್ ತಾಕೀತು

    By adminMarch 6, 2026No Comments2 Mins Read
    ballari

    ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಬ್ಯಾಂಕ್ ವಲಯ ಯೋಜನೆಗಳನ್ನು ಜನರಿಗೆ ತಲುಪಿಸಲು ಸರ್ಕಾರಿ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ.ತುಕಾರಾಮ್ ಅವರು ಹೇಳಿದರು.

    ಗುರುವಾರ ನಗರದ ಜಿಪಂ ನ ಹಳೆಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಮಟ್ಟದ ಲೀಡ್ ಬ್ಯಾಂಕ್‌ನ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸರ್ಕಾರಿ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ; ಇದರಿಂದ ಸರ್ಕಾರದ ಯೋಜನೆಗಳು ಸಫಲತೆ ಕಾಣುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

    ಬಡಜನರು ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸಲು ಬ್ಯಾಂಕ್‌ಗಳು ಸಹಕಾರಿಯಾಗಬೇಕು. ಜನರು ನೆರವಿಗಾಗಿ ಸಲ್ಲಿಸುವ ಲೋನ್ ಅರ್ಜಿಗಳನ್ನು ಸಕಾಲದಲ್ಲಿ ಇತ್ಯರ್ಥಗೊಳಿಸುವ ಮೂಲಕ ಬಡಜನರ ಕಣ್ಣೊರೆಸುವ ಕೆಲಸ ಮಾಡಬೇಕು ಎಂದು ಸಂಸದರು ಸೂಚಿಸಿದರು.

    ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್‌ಗಳ ಮುಖಾಂತರ ನಿಗದಿತ ಕಾಲಮಿತಿಯಲ್ಲಿಯೇ ದೊರಕಿಸಿದರೆ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

    ಬ್ಯಾAಕ್ ಅಧಿಕಾರಿಗಳು ಪರಿಣಾಮಕಾರಿ ಅಭಿವೃದ್ಧಿಗಾಗಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಿದರೆ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಂಸದ ಈ.ತುಕಾರಾಮ್ ಅವರು ಕಿವಿಮಾತು ಹೇಳಿದರು.

    ಬ್ಯಾಂಕ್ ಗಳಲ್ಲಿ ಬಾಕಿ ಉಳಿಸಿಕೊಂಡತಂಹ ಅರ್ಜಿಗಳನ್ನು ಇತ್ಯರ್ಥಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ನಿಯಮಿತವಾಗಿ ಸಭೆ ಕೈಗೊಂಡು ಚರ್ಚಿಸಬೇಕು ಎಂದು ಅವರು ತಿಳಿಸಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಬ್ಯಾಂಕ್ ಗಳು ಸಾಮಾನ್ಯ ಜನರ ಬೆನ್ನೆಲುಬಾಗಬೇಕು. ಬ್ಯಾಂಕ್ ಗಳು ನೀಡುವ ಲೋನ್ ಗಳು ಉಪಕಾರ ಮತ್ತು ವ್ಯವಹಾರವೇ ಹೊರತು, ದಾನಧರ್ಮವಲ್ಲ; ಈ ಅಂಶವನ್ನು ಬ್ಯಾಂಕ್ ಅಧಿಕಾರಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲ ಯೋಜನೆಯಡಿ ಮಾರ್ಚ್ ಅಂತ್ಯದೊಳಗೆ ಕೃಷಿ, ಶಿಕ್ಷಣ, ವಸತಿ, ಕೈಗಾರಿಕೆ, ಸಾಮಾಜಿಕ ಬೆಳವಣಿಗೆ ಸೇರಿದಂತೆ ಆದ್ಯತಾ ವಲಯಕ್ಕೆ ಮಂಜೂರು ಮಾಡಿರುವ ಅನುದಾನವನ್ನು ನಿಗದಿತ ಕಾಲಾವಧಿಯೊಳಗೆ ಗುರಿ ತಲುಪಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಲೋನ್ ಮಂಜೂರು ಮಾಡದ ಬ್ಯಾಂಕ್ ಗಳಿಗೆ ನೋಟಿಸ್ ಜಾರಿ ಮಾಡುವಂತೆ ಮತ್ತು ಅತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗಳ ಕುರಿತು ಕೇಂದ್ರ ಆರ್ಥಿಕ ಇಲಾಖೆಗೆ ಪತ್ರ ಬರೆಯುವಂತೆ ಇದೇ ವೇಳೆ ಜಿಪಂ ಸಿಇಒ ಅವರಿಗೆ ಸೂಚಿಸಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತ ಜನಸಾಮಾನ್ಯರಿಗೆ ಮಾಹಿತಿ ನೀಡಲು ಸಿಎಸ್‌ಆರ್ ಅನುದಾನದಡಿ ಎಲ್‌ಇಡಿ ವಾಹನ ಖರೀದಿಸುವಂತೆ ಜಿಪಂ ಸಿಇಒ ಅವರಿಗೆ ತಿಳಿಸಿದರು.

    ಇದೇ ವೇಳೆ ಉದ್ಯೊಗಿನಿ, ಪಿಎಂಇಜಿಪಿ, ಪಿಎಂ ಸ್ವನಿಧಿ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

    ಸಭೆಗೂ ಮುನ್ನ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಿಮೆ ಹೊಂದಿದ್ದ ಇಬ್ಬರು ವಿಮಾದಾರರ ನಾಮನಿರ್ದೇಶಿತರಿಗೆ ತಲಾ 2 ಲಕ್ಷ ರೂ. ಮೌಲ್ಯದ 2 ಚೆಕ್‌ಗಳನ್ನು ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಎಜಿಎಂ ಪ್ರಭಾಕರ್.ಆರ್, ಕೆನರಾ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್ ಎ.ಜೆ., ಲೀಡ್ ಬ್ಯಾಂಕ್ ಮ್ಯಾನೇಜರ್ ಗಿರೀಶ್ ವಿ.ಕುಲಕರ್ಣಿ, ನಬಾರ್ಡ್ ನ ಎಜಿಎಂ ಯುವರಾಜ ಕುಮಾರ್ ಆರ್.ಎಸ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕ್ ಗಳ ಆರ್‌ಎಂ ಅಧಿಕಾರಿಗಳು ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬೀದರ್: ಸಿಸಿಟಿ ಕಾಮಗಾರಿ ಸ್ಥಳದಲ್ಲೇ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ; 330 ಜನರಿಗೆ ನೆರವು

    August 23, 2026

    ಸರಗೂರಿನ ಬಿಡಗಲು ಗ್ರಾಮದಲ್ಲಿ ₹30 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಪೂರ್ಣ

    August 23, 2026

    ಬೀದರ್: ಬರ ಘೋಷಣೆ, ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ಬೃಹತ್ ರಸ್ತೆ ತಡೆ

    August 22, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು ಚಿತ್ರದ ಶೀರ್ಷಿಕೆ, ಹಾಡುಗಳ ಲೋಕಾರ್ಪಣೆ

    August 24, 2026

     ರಾಘವೇಂದ್ರ ಅಡಿಗ ಎಚ್ಚೆನ್. ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು’ ಚಲನಚಿತ್ರದ ಅಧಿಕೃತ ಶೀರ್ಷಿಕೆ…

    ಜಲಾಶಯಕ್ಕೆ ನೀರಿನ ಒಳ ಹರಿವು ಆಧಾರದಲ್ಲಿ ರಾಗಿ ಬೆಳೆಗೆ — ಸಾಲು ಕೆರೆಗಳಿಗೆ ನೀರು: ಶಾಸಕ ಡಾ. ಎಚ್.ಡಿ. ರಂಗನಾಥ್

    August 24, 2026

    ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಬಹಳಮುಖ್ಯ: ಕವಿರತ್ನ ಕಾಳಿದಾಸ ಪ.ಸ.ಸಂಘ ಸಭೆಯಲ್ಲಿ ಡಾ. ಹುಲಿನಾಯ್ಕರ್ ಸಲಹೆ

    August 24, 2026

    ಬದುಕಿನ ತಾತ್ವಿಕ ಶೋಧದ ಕಾದಂಬರಿ ಕಾಡುದೇವರಬೆಟ್ಟ:  ಬರಗೂರು ರಾಮಚಂದ್ರಪ್ಪ ಅಭಿಮತ

    August 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.