nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು, ಮಾಹಿತಿ ಸಂಗ್ರಹ ಆರಂಭ

    August 27, 2026

    ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾದ 4 ಚಿರತೆ ಮರಿಗಳು, ಗ್ರಾಮಸ್ಥರಲ್ಲಿ ಆತಂಕ

    August 27, 2026

    ತುಮಕೂರು: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

    August 27, 2026
    Facebook Twitter Instagram
    ಟ್ರೆಂಡಿಂಗ್
    • ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು, ಮಾಹಿತಿ ಸಂಗ್ರಹ ಆರಂಭ
    • ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾದ 4 ಚಿರತೆ ಮರಿಗಳು, ಗ್ರಾಮಸ್ಥರಲ್ಲಿ ಆತಂಕ
    • ತುಮಕೂರು: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
    • ಈದ್ ಮಿಲಾದ್: ಮೆರವಣಿಗೆಯಲ್ಲಿ ಭಾಗಿಯಾಗಿ ಶುಭಕೋರಿದ ಹಾಸನ ಸಂಸದ ಶ್ರೇಯಸ್ ಪಟೇಲ್
    • ತುಮಕೂರು: ವಿವಿಧ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
    • ಹಾಸನ: ಮುಸುಕಿನ ಜೋಳಕ್ಕೆ ‘ಬಿಳಿಸುಳಿ’ ರೋಗ ಬಾಧೆ: 7 ತಾಲೂಕು ಬರಪೀಡಿತ ಎಂದು ಘೋಷಿಸಿ: ಸಿಎಂಗೆ ಸಚಿವ ಶಿವಲಿಂಗೇಗೌಡ ಮನವಿ
    • ಹೆಡಗಾಪೂರದಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ: ಕೂಲಿಕಾರ್ಮಿಕರಿಗೆ ಹಳ್ಳಿಯಲ್ಲೇ ಸಿಗಲಿದೆ ಹೆಚ್ಚಿನ ಉದ್ಯೋಗಾವಕಾಶ
    • ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ನಡೆಯುತ್ತದೆ: ಸಚಿವ ಡಾ. ಯತೀಂದ್ರ ಸ್ಪಷ್ಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಟೀಕೆ ಟಿಪ್ಪಣಿಗಳಿಗೆ ಅಭಿವೃದ್ದಿಯೇ ಉತ್ತರ: ಗೃಹ ಸಚಿವ ಡಾ.ಜಿ.ಪರಮೇಶ್ವರ್
    ಕೊರಟಗೆರೆ March 16, 2026

    ಟೀಕೆ ಟಿಪ್ಪಣಿಗಳಿಗೆ ಅಭಿವೃದ್ದಿಯೇ ಉತ್ತರ: ಗೃಹ ಸಚಿವ ಡಾ.ಜಿ.ಪರಮೇಶ್ವರ್

    By adminMarch 16, 2026No Comments2 Mins Read
    g parameshwar

    ಕೊರಟಗೆರೆ : ಗ್ಯಾರಂಟಿ ಯೋಜನೆಗೆ ಮಾತ್ರ ದುಡ್ಡು ಕೊಡ್ತಾರೇ, ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ ಎಂಬುದು ವಿರೋಧ ಪಕ್ಷದ ಆರೋಪ. ಟೀಕೆ ಟಿಪ್ಪಣಿಗಳು ಬರುವುದು ಸರ್ವೇ ಸಾಮಾನ್ಯ ಅದಕ್ಕೆ ನನ್ನ ಅಭಿವೃದ್ದಿ ಕಾಮಗಾರಿಗಳೇ ಉತ್ತರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಟಾಂಗ್ ನೀಡಿದರು.

    ಕೊರಟಗೆರೆ ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಭಾನುವಾರ ಏರ್ಪಡಿಸಲಾಗಿದ್ದ 14 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇರವೇರಿಸಿ ಮಾತನಾಡಿದರು.

    ಕೇಂದ್ರ ಸರಕಾರ 53 ಲಕ್ಷ ಕೋಟಿ ಬಜೆಟ್ ಮಂಡಿಸಿದೆ ಅದರಲ್ಲಿ 14 ಲಕ್ಷ ಕೋಟಿ ಸಾಲ ಮಾಡಿದೆ. ನಮ್ಮ ರಾಜ್ಯ ಸರಕಾರ 4 ಲಕ್ಷ 48 ಸಾವಿರ ಬಜೆಟ್ ಮಂಡಿಸಿದೆ. ಬಜೆಟ್ ಗಾತ್ರದಲ್ಲಿ ಶೇ.25ರಷ್ಟು ಒಳಗೆ ಸಾಲ ಮಾಡಲು ನಮ್ಮ ಸರಕಾರಕ್ಕೂ ಅವಕಾಶವಿದೆ. ನಮ್ಮ ದೇಶ ಸೇರಿ ಎಲ್ಲಾ ರಾಜ್ಯಗಳು ಇದನ್ನೇ ಮಾಡುತ್ತವೆ ಇದರ ಮಾಹಿತಿ ವಿರೋಧ ಪಕ್ಷಗಳಿಗೆ ಸರಿಯಾಗಿ ಇಲ್ಲ ಎಂದು ಹೇಳಿದರು.

    ನಮ್ಮ ರಾಜ್ಯದ ಸಿಎಂ ನನ್ನ ಕ್ಷೇತ್ರದ ಅಭಿವೃದ್ದಿಗೆ 50 ಕೋಟಿ ಅನುದಾನ ನೀಡಿದ್ದಾರೆ. ಗ್ರಾಮೀಣ ರಸ್ತೆ ಮತ್ತು ಮೂಲ ಸೌಲಭ್ಯ ಅಭಿವೃದ್ದಿಗೆ ವಿಶೇಷ ಆಧ್ಯತೆ ನೀಡಲಾಗಿದೆ. ಗ್ಯಾರಂಟಿ ಯೋಜನೆಯ ಜೊತೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತಿವೆ. ಶಂಕುಸ್ಥಾಪನೆ ಆದ ಕಾಮಗಾರಿಗಳನ್ನು ಗುತ್ತಿಗೆದಾರರು ತ್ವರಿತವಾಗಿ ಮುಗಿಸಿ ಅಭಿವೃದ್ದಿಗೆ ಸಹಕಾರ ನೀಡಬೇಕಿದೆ ಎಂದರು.

    ಕ್ರೀಡಾ ಇಲಾಖೆ ಆಯುಕ್ತರಾದ ಚೇತನ್ ಮಾತನಾಡಿ, ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ ಕನಸಿನ ಕೂಸು ಒಳಾಂಗಣ ಮತ್ತು ಹೊರಂಗಣ ಕ್ರೀಡಾಂಗಣಕ್ಕೆ 7 ಕೋಟಿ ಕೊರಟಗೆರೆಗೆ ಬಂದಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳು ಕ್ರಿಡಾಂಗಣದ ಅನುಕೂಲ ಪಡೆದು ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕಿದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಅಶ್ವಿಜಾ, ಎಸ್ಪಿ ಅಶೋಕ್, ಮಧುಗಿರಿ ಎಸಿ ಶಿವಪ್ಪ, ತಹಶೀಲ್ದಾರ್ ಮಂಜುನಾಥ, ತಾಪಂ ಇಓ ಅಪೂರ್ವ, ಎಇಇ ಕೆಆರ್‌ ಐಡಿಎಲ್ ನಾಗಯ್ಯ, ಎಇಇ ಸಿಂಧು, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ ಕೆ ನಾಗಣ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವತ್ಥ ನಾರಾಯಣ್, ಅರಕೆರೆ ಶಂಕರ್, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ಬೈರೇಶ್, ಅಟ್ಟಿಕ ನಾಗರಾಜ್, ವಿನಯ್ ಕುಮಾರ್, ಅರವಿಂದ್ ಸೇರಿದಂತೆ ಇತರರು ಇದ್ದರು.

    14 ಕೋಟಿ ಕಾಮಗಾರಿಗೆ ಚಾಲನೆ:

    4 ಕೋಟಿ 23 ಲಕ್ಷದ ರಾಜೀವ್‌ ಗಾಂಧಿ ಒಳಾಂಗಣ ಕ್ರೀಡಾಂಗಣ ಮತ್ತು 21 ಲಕ್ಷದ ವನಧನ ವಿಕಾಸ ಕೇಂದ್ರ ಉದ್ಘಾಟನೆ, 3 ಕೋಟಿಯ ಹೊರಂಗಣ ಗ್ಯಾಲರಿ, 1 ಕೋಟಿ 50 ಲಕ್ಷದ ತಾಲ್ಲೂಕು ಆಡಳಿತ ಕಚೇರಿ ರಸ್ತೆ, 2 ಕೋಟಿಯ ತಾ.ಪಂ. ನೂತನ ಕಟ್ಟಡ, 60 ಲಕ್ಷ ಬಯಲು ಆಂಜನೇಯ ರಸ್ತೆ, 1 ಕೋಟಿಯ ಸೋಂಪುರ ರಸ್ತೆಗೆ ಶಂಕುಸ್ಥಾಪನೆ ಸೇರಿ ವಿವಿಧ ಕಾಮಗಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನೇರವೇರಿಸಿದರು.

     ಏಪ್ರಿಲ್‌ ನಲ್ಲಿ ಕಬ್ಬಡಿ ಮತ್ತು ಕ್ರಿಕೆಟ್:

    ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಯುವ ಸ್ನೇಹಿತರಿಂದ ಜಿಲ್ಲಾಮಟ್ಟದ ಕಬ್ಬಡಿ ಮತ್ತು ಕ್ರಿಕೇಟ್ ಪಂದ್ಯಾವಳಿಗೆ ಅನುಮತಿ ನೀಡಿದ್ದೇನೆ. ಏಪ್ರಿಲ್ ಮಾಹೆಯೇ ಕ್ರೀಡಾಪಟುಗಳಿಗೆ ಕ್ರೀಡಾಸ್ಪೂರ್ತಿ ತುಂಬಿ ಯುವಕರಿಗೆ ಉತ್ತೇಜನ ನೀಡಲಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಶುಭ ಹಾರೈಸಿದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    August 25, 2026

    ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ

    August 25, 2026

    ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ

    August 22, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ನೇಪಾಳ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು, ಮಾಹಿತಿ ಸಂಗ್ರಹ ಆರಂಭ

    August 27, 2026

    ಬೆಂಗಳೂರು: ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ, ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ…

    ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾದ 4 ಚಿರತೆ ಮರಿಗಳು, ಗ್ರಾಮಸ್ಥರಲ್ಲಿ ಆತಂಕ

    August 27, 2026

    ತುಮಕೂರು: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

    August 27, 2026

    ಈದ್ ಮಿಲಾದ್: ಮೆರವಣಿಗೆಯಲ್ಲಿ ಭಾಗಿಯಾಗಿ ಶುಭಕೋರಿದ ಹಾಸನ ಸಂಸದ ಶ್ರೇಯಸ್ ಪಟೇಲ್

    August 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.