nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರಾಣಿ ಬಲಿ: ಪ್ರತಿ ಜಾತ್ರೆಯೂ ರಕ್ತ ಮುಕ್ತ ಸುಕ್ಷೇತ್ರವಾಗಬೇಕು: ದಯಾನಂದ ಸ್ವಾಮೀಜಿ

    March 18, 2026

    SSLC: ತುಮಕೂರು ಜಿಲ್ಲೆಯಲ್ಲಿ 131 ಪರೀಕ್ಷಾ ಕೇಂದ್ರಗಳು: ಪರೀಕ್ಷೆ ಬರೆಯಲಿರುವ 37,130 ವಿದ್ಯಾರ್ಥಿಗಳು

    March 18, 2026

    ಶಿರಾ ಎಪಿಎಂಸಿ: ಹುಣಸೆಹಣ್ಣು ಬೆಲೆ ದಿಢೀರ್ ಕುಸಿತ; ರೈತರ ಆತಂಕ

    March 18, 2026
    Facebook Twitter Instagram
    ಟ್ರೆಂಡಿಂಗ್
    • ಪ್ರಾಣಿ ಬಲಿ: ಪ್ರತಿ ಜಾತ್ರೆಯೂ ರಕ್ತ ಮುಕ್ತ ಸುಕ್ಷೇತ್ರವಾಗಬೇಕು: ದಯಾನಂದ ಸ್ವಾಮೀಜಿ
    • SSLC: ತುಮಕೂರು ಜಿಲ್ಲೆಯಲ್ಲಿ 131 ಪರೀಕ್ಷಾ ಕೇಂದ್ರಗಳು: ಪರೀಕ್ಷೆ ಬರೆಯಲಿರುವ 37,130 ವಿದ್ಯಾರ್ಥಿಗಳು
    • ಶಿರಾ ಎಪಿಎಂಸಿ: ಹುಣಸೆಹಣ್ಣು ಬೆಲೆ ದಿಢೀರ್ ಕುಸಿತ; ರೈತರ ಆತಂಕ
    • ರೀಲ್ಸ್‌ ಹುಚ್ಚು: ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಬೆಂಗಳೂರಿನ ಮಹಿಳೆ!
    • ಶಿರಾದಲ್ಲಿ LPG ಸಿಲಿಂಡರ್ ಅಭಾವ: ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಬಿಸಿ
    • ಮಹನೀಯರ ಜಯಂತಿ ಅದ್ದೂರಿ ಆಚರಣೆ: ಬಳ್ಳಾರಿ ಎಡಿಸಿ ಮಹಮ್ಮದ್ ಝುಬೇರ್ ಎನ್. ಹೇಳಿಕೆ
    • ಬಳ್ಳಾರಿ:  SSLC ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿ ನಿಷೇಧಾಜ್ಞೆ ಜಾರಿ
    • ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ ಒದಗಿಸಲು ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೀಲ್ಸ್‌ ಹುಚ್ಚು: ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಬೆಂಗಳೂರಿನ ಮಹಿಳೆ!
    ರಾಜ್ಯ ಸುದ್ದಿ March 18, 2026

    ರೀಲ್ಸ್‌ ಹುಚ್ಚು: ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಬೆಂಗಳೂರಿನ ಮಹಿಳೆ!

    By adminMarch 18, 2026No Comments2 Mins Read
    reels madness

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಜನ ಎಂತಹ ಹುಚ್ಚಾಟಕ್ಕೂ ಮುಂದಾಗುತ್ತಾರೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಆಘಾತಕಾರಿ ಘಟನೆಯೇ ಸಾಕ್ಷಿ. ಕೇವಲ ಒಂದು ‘ರೀಲ್ಸ್‌’ (Instagram Reels) ಮಾಡುವುದಕ್ಕಾಗಿ ಮಹಿಳೆಯೊಬ್ಬಳು ತನ್ನ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಂಗಳವಾರ ವೈಯಾಲಿಕಾವಲ್‌ ನ ವಿನಾಯಕ ಸರ್ಕಲ್ ಬಳಿ ಇರುವ ಕೊರಿಯರ್ ಕಚೇರಿಗೆ ಇಬ್ಬರು ಮಹಿಳೆಯರು ಸೇರಿದಂತೆ ಐವರ ಗುಂಪು ದೊಡ್ಡದೊಂದು ಗೋಣಿ ಚೀಲದೊಂದಿಗೆ ಆಗಮಿಸಿದೆ. ಈ ಚೀಲವನ್ನು ಪಾರ್ಸೆಲ್ ಮಾಡಬೇಕು ಎಂದು ಅವರು ಸಿಬ್ಬಂದಿಗೆ ತಿಳಿಸಿದ್ದಾರೆ. ಚೀಲದ ಒಳಗಡೆ ಏನಿದೆ ಎಂದು ಸಿಬ್ಬಂದಿ ಪ್ರಶ್ನಿಸಿದಾಗ, ಅವರು ಸರಿಯಾದ ಉತ್ತರ ನೀಡದೆ ಮೌನವಾಗಿದ್ದರು. ಇದರಿಂದ ಅನುಮಾನಗೊಂಡ ಸಿಬ್ಬಂದಿ ಚೀಲವನ್ನು ತೆರೆದು ನೋಡಿದಾಗ ಒಳಗಡೆ ವೃದ್ಧರೊಬ್ಬರು ಇರುವುದು ಕಂಡುಬಂದು ಬೆಚ್ಚಿಬಿದ್ದಿದ್ದಾರೆ.


    Provided by
    Provided by

    ಗೋಣಿ ಚೀಲದೊಳಗೆ ಕುಳಿತಿದ್ದ ವೃದ್ಧ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದರು. ಆದರೂ ಆ ತಂಡದವರು, “ನಾವು ಹಣ ಕೊಡುತ್ತೇವೆ, ಇವರನ್ನು ಬೇರೆ ರಾಜ್ಯಕ್ಕೆ ಪಾರ್ಸೆಲ್ ಕಳುಹಿಸಿ” ಎಂದು ಒತ್ತಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಕೊರಿಯರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಇದೊಂದು ‘ರೀಲ್ಸ್’ ಪ್ರದರ್ಶನ ಎಂಬುದು ತಿಳಿದುಬಂದಿದೆ. ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಬಸ್ ಟಿಕೆಟ್ ದರ ಏರಿಕೆಯಾದಾಗ ಸಾಮಾನ್ಯ ಜನರು ಎಷ್ಟು ಸಂಕಷ್ಟಕ್ಕೀಡಾಗುತ್ತಾರೆ ಮತ್ತು ಜನದಟ್ಟಣೆಯ ನಡುವೆ ಹೇಗೆ ಪ್ರಯಾಣಿಸಬೇಕಾಗುತ್ತದೆ ಎಂಬ ಸಂದೇಶ ನೀಡಲು ಈ ರೀತಿ ಚಿತ್ರೀಕರಣ ಮಾಡುತ್ತಿದ್ದೆವು ಎಂದು ಕುಟುಂಬಸ್ಥರು ಸಮರ್ಥಿಸಿಕೊಂಡಿದ್ದಾರೆ.

    ಪೊಲೀಸರ ಎಚ್ಚರಿಕೆ:

    ಚೀಲದಲ್ಲಿದ್ದ ವೃದ್ಧರು ತಮ್ಮ ಕುಟುಂಬದವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಹೀಗಾಗಿ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ, ಕೊರಿಯರ್ ಸಂಸ್ಥೆಯವರು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕೇವಲ ಪ್ರಚಾರಕ್ಕಾಗಿ ವೃದ್ಧರ ಪ್ರಾಣದ ಜೊತೆ ಚೆಲ್ಲಾಟವಾಡಿದ ಕುಟುಂಬದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬಳ್ಳಾರಿ:  SSLC ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿ ನಿಷೇಧಾಜ್ಞೆ ಜಾರಿ

    March 17, 2026

    ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ ಒದಗಿಸಲು ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ

    March 17, 2026

    ಮಾ.18ರಿಂದ SSLC ಪರೀಕ್ಷೆ ಆರಂಭ: 8.65 ಲಕ್ಷ ವಿದ್ಯಾರ್ಥಿಗಳಿಗೆ ಸಿಎಂ, ಶಿಕ್ಷಣ ಸಚಿವರ ಶುಭಾಶಯ

    March 17, 2026

    Leave A Reply Cancel Reply

    Our Picks

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026

    LPG ಸಿಲಿಂಡರ್‌ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಸಾವು!

    March 14, 2026

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಪ್ರಾಣಿ ಬಲಿ: ಪ್ರತಿ ಜಾತ್ರೆಯೂ ರಕ್ತ ಮುಕ್ತ ಸುಕ್ಷೇತ್ರವಾಗಬೇಕು: ದಯಾನಂದ ಸ್ವಾಮೀಜಿ

    March 18, 2026

    ಸರಗೂರು:  ಪ್ರಾಣಿ ಬಲಿ ನಿಷೇಧಿಸುವಂತೆ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಚಿಕ್ಕದೇವಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟಲಾಯಿತು ಎಂದು ವಿಶ್ವ…

    SSLC: ತುಮಕೂರು ಜಿಲ್ಲೆಯಲ್ಲಿ 131 ಪರೀಕ್ಷಾ ಕೇಂದ್ರಗಳು: ಪರೀಕ್ಷೆ ಬರೆಯಲಿರುವ 37,130 ವಿದ್ಯಾರ್ಥಿಗಳು

    March 18, 2026

    ಶಿರಾ ಎಪಿಎಂಸಿ: ಹುಣಸೆಹಣ್ಣು ಬೆಲೆ ದಿಢೀರ್ ಕುಸಿತ; ರೈತರ ಆತಂಕ

    March 18, 2026

    ರೀಲ್ಸ್‌ ಹುಚ್ಚು: ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಬೆಂಗಳೂರಿನ ಮಹಿಳೆ!

    March 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.