nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಕ್ಟೋಬರ್ ತಿಂಗಳ ಮಹತ್ವದ ತೆರಿಗೆ ಗಡುವುಗಳು: ತೆರಿಗೆದಾರರು ಹಾಗೂ ವೃತ್ತಿಪರರು ಗಮನಿಸಬೇಕಾದ ಶಾಸನಬದ್ಧ ನಿಯಮಾವಳಿಗಳು

    October 6, 2026

    ಎತ್ತಿನಹೊಳೆ ನಾಲಾ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಎನ್‌.ಡಿ.ಎ ಮೈತ್ರಿಕೂಟದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಆಗ್ರಹ

    October 6, 2026

    ಜನವರಿ ನಂತರವೂ ಮಳೆ ಬಾರದೇ ಇದ್ದರೆ ಜಿಲ್ಲೆಯಲ್ಲಿ ಗಂಭೀರ ಸಮಸ್ಯೆ: ತುಮಕೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ

    October 6, 2026
    Facebook Twitter Instagram
    ಟ್ರೆಂಡಿಂಗ್
    • ಅಕ್ಟೋಬರ್ ತಿಂಗಳ ಮಹತ್ವದ ತೆರಿಗೆ ಗಡುವುಗಳು: ತೆರಿಗೆದಾರರು ಹಾಗೂ ವೃತ್ತಿಪರರು ಗಮನಿಸಬೇಕಾದ ಶಾಸನಬದ್ಧ ನಿಯಮಾವಳಿಗಳು
    • ಎತ್ತಿನಹೊಳೆ ನಾಲಾ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಎನ್‌.ಡಿ.ಎ ಮೈತ್ರಿಕೂಟದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಆಗ್ರಹ
    • ಜನವರಿ ನಂತರವೂ ಮಳೆ ಬಾರದೇ ಇದ್ದರೆ ಜಿಲ್ಲೆಯಲ್ಲಿ ಗಂಭೀರ ಸಮಸ್ಯೆ: ತುಮಕೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
    • ₹58 ಸಾವಿರದಿಂದ ಬೈಕ್ ಖರೀದಿ; 70 ಕಿ.ಮೀ ಮೈಲೇಜ್ ನೀಡುವ 5 ಬಜೆಟ್ ಬೈಕ್‌ ಗಳಿವು!
    • 50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!
    • ಮಹಾರಾಜವಾಡಿ ಮಹಿಳೆಯರಿಗೆ ‘ಶಕ್ತಿ’ಯ ಬಲ: ವಿಬಿ–ಜಿ ರಾಮ್ ಜಿ ಕೆಲಸಕ್ಕೆ ಉಚಿತ ಬಸ್ ನೆರವು
    • ಬೆಂಗಳೂರಲ್ಲಿ ಬಿಡಾಡಿ ದನಗಳ ‘ಟೋಯಿಂಗ್‌ಗೆ’ ವಿಶೇಷ ವಾಹನ: ರಸ್ತೆಗೆ ಜಾನುವಾರು ಬಿಡುವವರಿಗೆ ಬಿಸಿ!
    • ರಜನಿಕಾಂತ್ ಜೊತೆ ಶಿವಣ್ಣನ ಮಾಸ್ ದರ್ಬಾರ್: ಬಿಡುಗಡೆಯಾಯ್ತು ‘ಜೈಲರ್ 2’ ಟ್ರೇಲರ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿರಾದ ಲಕ್ಕನಹಳ್ಳಿಯಲ್ಲಿ ಖಬರಸ್ಥಾನಕ್ಕೆ ಜಾಗ ನೀಡಲು ಮುಸ್ಲಿಮರ ಒತ್ತಾಯ: ಪ್ರತಿಭಟನೆ
    ಸಿರಾ March 22, 2026

    ಶಿರಾದ ಲಕ್ಕನಹಳ್ಳಿಯಲ್ಲಿ ಖಬರಸ್ಥಾನಕ್ಕೆ ಜಾಗ ನೀಡಲು ಮುಸ್ಲಿಮರ ಒತ್ತಾಯ: ಪ್ರತಿಭಟನೆ

    By adminMarch 22, 2026No Comments1 Min Read
    sira tumkur

    ಶಿರಾ (ತುಮಕೂರು): ತಾಲ್ಲೂಕಿನ ಲಕ್ಕನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಅಂತ್ಯಕ್ರಿಯೆಗಾಗಿ ಪ್ರತ್ಯೇಕ ಖಬರಸ್ಥಾನ (ಸ್ಮಶಾನ) ಮಂಜೂರು ಮಾಡುವಂತೆ ಒತ್ತಾಯಿಸಿ ಶನಿವಾರ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು. ಈದ್ ಉಲ್ ಫಿತ್ರ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ನಂತರ ಒಗ್ಗೂಡಿದ ಸಮುದಾಯದ ಮುಖಂಡರು ಮತ್ತು ಗ್ರಾಮಸ್ಥರು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

    ಲಕ್ಕನಹಳ್ಳಿಯಲ್ಲಿ ಮುಸ್ಲಿಮರಿಗೆ ಅಂತ್ಯಕ್ರಿಯೆ ನಡೆಸಲು ಹಕ್ಕುಬದ್ಧವಾದ ಜಾಗವಿಲ್ಲ. ಸದ್ಯಕ್ಕೆ ಸರ್ಕಾರಿ ಜಾಗವೊಂದನ್ನು ಇದಕ್ಕಾಗಿ ಬಳಸಲಾಗುತ್ತಿದೆ. ಆದರೆ, ಆ ಜಾಗದಲ್ಲಿ ರೈತರು ಕೃಷಿ ಮಾಡುತ್ತಿರುವುದರಿಂದ ಅಂತ್ಯಕ್ರಿಯೆ ನಡೆಸಲು ಪದೇ ಪದೇ ಅಡೆತಡೆಗಳು ಎದುರಾಗುತ್ತಿವೆ. ಮೃತರನ್ನು ಗೌರವಯುತವಾಗಿ ಬೀಳ್ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

    ಕೆಲ ದಿನಗಳ ಹಿಂದೆ ಸಾಲಬಾಧೆಯಿಂದ ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಲಕ್ಕನಹಳ್ಳಿಯ ಒಂದೇ ಕುಟುಂಬದ ಐವರು ಸದಸ್ಯರ ಅಂತ್ಯಕ್ರಿಯೆ ಸಂದರ್ಭದಲ್ಲಿ ಈ ಸಮಸ್ಯೆ ತೀವ್ರವಾಗಿ ಕಾಡಿತ್ತು. ಸ್ವಗ್ರಾಮದಲ್ಲಿ ಸೂಕ್ತ ಸ್ಮಶಾನವಿಲ್ಲದ ಕಾರಣ, ಮೃತರ ಶವಗಳನ್ನು ಶಿರಾ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕಾಯಿತು. ಈ ಘಟನೆಯು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    ಈಗಾಗಲೇ ಈ ಸಂಬಂಧ ಸ್ಥಳೀಯ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಸಮುದಾಯದ ಪ್ರಮುಖ ನಾಯಕರ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

    ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಲಕ್ಕನಹಳ್ಳಿಯಲ್ಲಿ ಖಬರಸ್ಥಾನಕ್ಕೆ ಅಗತ್ಯವಿರುವ ಜಾಗವನ್ನು ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬುಕ್ಕಾಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ: ತಹಶೀಲ್ದಾರ್ ಆನಂದ್ ಕುಮಾರ್ ವಿರುದ್ಧ ಎಂಎಲ್ಸಿ ಬೆಂಬಲಿಗರ ತೀವ್ರ ಆಕ್ರೋಶ

    September 20, 2026

    ಕೊಳಗೇರಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಗೆ ಐತಿಹಾಸಿಕ ಹೆಜ್ಜೆ

    September 9, 2026

    ಸಿರಾ: ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಬಿಡುಗಡೆ

    September 7, 2026

    Leave A Reply Cancel Reply

    Our Picks

    50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!

    October 6, 2026

    35 ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ ಮಹಿಳೆ: ಪತ್ತೆಗೆ ಸುಳಿವು ನೀಡಿದ ಕೈಯಲ್ಲಿದ್ದ ಹಚ್ಚೆ!

    October 6, 2026

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಅಕ್ಟೋಬರ್ ತಿಂಗಳ ಮಹತ್ವದ ತೆರಿಗೆ ಗಡುವುಗಳು: ತೆರಿಗೆದಾರರು ಹಾಗೂ ವೃತ್ತಿಪರರು ಗಮನಿಸಬೇಕಾದ ಶಾಸನಬದ್ಧ ನಿಯಮಾವಳಿಗಳು

    October 6, 2026

    ಲೇಖನ: ನಟರಾಜು ಜಿ.ಎಲ್. ಸಂಪಾದಕರು, ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ ಪ್ರತಿಯೊಂದು ಆರ್ಥಿಕ ವರ್ಷದಲ್ಲೂ ಅಕ್ಟೋಬರ್ ಮಾಸವು ವ್ಯಾಪಾರಸ್ಥರು,…

    ಎತ್ತಿನಹೊಳೆ ನಾಲಾ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಎನ್‌.ಡಿ.ಎ ಮೈತ್ರಿಕೂಟದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಆಗ್ರಹ

    October 6, 2026

    ಜನವರಿ ನಂತರವೂ ಮಳೆ ಬಾರದೇ ಇದ್ದರೆ ಜಿಲ್ಲೆಯಲ್ಲಿ ಗಂಭೀರ ಸಮಸ್ಯೆ: ತುಮಕೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ

    October 6, 2026

    ₹58 ಸಾವಿರದಿಂದ ಬೈಕ್ ಖರೀದಿ; 70 ಕಿ.ಮೀ ಮೈಲೇಜ್ ನೀಡುವ 5 ಬಜೆಟ್ ಬೈಕ್‌ ಗಳಿವು!

    October 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.