ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಹೃದಯದಲ್ಲಿ ಬ್ಲಾಕೇಜ್ (ರಕ್ತನಾಳದ ಅಡಚಣೆ) ಕಂಡುಬಂದ ಹಿನ್ನೆಲೆಯಲ್ಲಿ, ಅವರಿಗೆ ಯಶಸ್ವಿಯಾಗಿ ಸ್ಟಂಟ್ ಅಳವಡಿಸಲಾಗಿದೆ.
ಕಳೆದ ಭಾನುವಾರ (ಮಾರ್ಚ್ 22) ಸಚಿವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಮಂಗಳವಾರ (ಮಾರ್ಚ್ 24) ಸಚಿವರು ತಮ್ಮ ಕುಟುಂಬ ವೈದ್ಯರಿಂದ ಹೆಚ್ಚಿನ ತಪಾಸಣೆಗೆ ಒಳಗಾದಾಗ ಹೃದಯದಲ್ಲಿ ಬ್ಲಾಕೇಜ್ ಇರುವುದು ದೃಢಪಟ್ಟಿತ್ತು. ಇಂದು (ಬುಧವಾರ) ಬೆಳಿಗ್ಗೆ ಇಲಾಖೆಯ ನಿಗದಿತ ಕಾರ್ಯಕ್ರಮವೊಂದನ್ನು ಮುಗಿಸಿದ ನಂತರ, ಸಚಿವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾದರು.
ಮಧ್ಯಾಹ್ನದ ವೇಳೆಗೆ ತಜ್ಞ ವೈದ್ಯರ ತಂಡ ಸಚಿವರಿಗೆ ಯಶಸ್ವಿಯಾಗಿ ಸ್ಟಂಟ್ ಅಳವಡಿಸಿದೆ. ಪ್ರಸ್ತುತ ಶಿವರಾಜ್ ತಂಗಡಗಿ ಅವರು ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಚಿವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


