nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಲ್ ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ

    March 28, 2026

    ಸವಾಲುಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು: ಅಂಧ ಕ್ರಿಕೆಟ್ ಪಟು ದೀಪಿಕಾ ಟಿ.ಸಿ.

    March 28, 2026

    ಭ್ರಷ್ಟಾಚಾರದ ಆರೋಪ: ಕೋಟಗುಡ್ಡ ಪಂಚಾಯಿತಿಯ ಹಾಲಿ ಮತ್ತು ಮಾಜಿ ಪಿಡಿಒ ಅಮಾನತು

    March 28, 2026
    Facebook Twitter Instagram
    ಟ್ರೆಂಡಿಂಗ್
    • ಎಲ್ ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ
    • ಸವಾಲುಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು: ಅಂಧ ಕ್ರಿಕೆಟ್ ಪಟು ದೀಪಿಕಾ ಟಿ.ಸಿ.
    • ಭ್ರಷ್ಟಾಚಾರದ ಆರೋಪ: ಕೋಟಗುಡ್ಡ ಪಂಚಾಯಿತಿಯ ಹಾಲಿ ಮತ್ತು ಮಾಜಿ ಪಿಡಿಒ ಅಮಾನತು
    • ಬೆಂಗಳೂರು–ತುಮಕೂರು–ಅರಸೀಕೆರೆ ಮಾರ್ಗದಲ್ಲಿ ನೂತನ ಮೆಮು ರೈಲು ಸಂಚಾರ ಆರಂಭ
    • ತುಮಕೂರು ಹಾಲು  ಒಕ್ಕೂಟದಿಂದ ಮಿಶ್ರತಳಿ ರಸುಗಳ ಹಾಲು ಕರೆಯುವ ಸ್ಪರ್ಧೆ ಯಶಸ್ವಿ : ಅತಿ ಹೆಚ್ಚು ಹಾಲು ಕರೆದ ರೈತರಿಗೆ 30,000 ನಗದು ಪ್ರಥಮ ಬಹುಮಾನ
    • ಮೇ 3 ರಿಂದ 10 ರವರೆಗೆ ಅಂತಾರಾಷ್ಟ್ರೀಯ ಮಹಿಳಾ ಓಪನ್ ಟೆನ್ನಿಸ್ ಚಾಂಪಿಯನ್ ಶಿಪ್: ಗೃಹ ಸಚಿವ ಡಾ.ಜಿ.ಪರಮೇಶ್ವರ್
    • ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ: ಎಲ್ಲೆಡೆ ಬಂದೋಬಸ್ತ್, ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ಮಾರ್ಗ
    • 2030ಕ್ಕೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಶಕ್ತ: ಕೇಂದ್ರ ಸಚಿವ ವಿ.ಸೋಮಣ್ಣ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು ಹಾಲು  ಒಕ್ಕೂಟದಿಂದ ಮಿಶ್ರತಳಿ ರಸುಗಳ ಹಾಲು ಕರೆಯುವ ಸ್ಪರ್ಧೆ ಯಶಸ್ವಿ : ಅತಿ ಹೆಚ್ಚು ಹಾಲು ಕರೆದ ರೈತರಿಗೆ 30,000 ನಗದು ಪ್ರಥಮ ಬಹುಮಾನ
    ಕೊರಟಗೆರೆ March 28, 2026

    ತುಮಕೂರು ಹಾಲು  ಒಕ್ಕೂಟದಿಂದ ಮಿಶ್ರತಳಿ ರಸುಗಳ ಹಾಲು ಕರೆಯುವ ಸ್ಪರ್ಧೆ ಯಶಸ್ವಿ : ಅತಿ ಹೆಚ್ಚು ಹಾಲು ಕರೆದ ರೈತರಿಗೆ 30,000 ನಗದು ಪ್ರಥಮ ಬಹುಮಾನ

    By adminMarch 28, 2026No Comments3 Mins Read

    ಕೊರಟಗೆರೆ: ಪ್ರಸಕ್ತ ಆಧುನಿಕ ಯುಗದಲ್ಲಿ ಯಾಂತ್ರಿಕೃತ ಕೃಷಿ ಪದ್ಧತಿ ಹೆಚ್ಚಾಗುತ್ತಿದ್ದರೂ, ಹೈನುಗಾರಿಕೆಯಲ್ಲಿ ಇಂದಿಗೂ ರೈತನಿಗೂ ಮತ್ತು ಹಸುವಿಗೂ ಇರುವ ಅವಿನಾಭಾವ ಸಂಬಂಧವನ್ನು ಸಾರುವ ‘ಹಾಲು ಕರೆಯುವ ಸ್ಪರ್ಧೆ’ಯೊಂದು ವಿಜೃಂಭಣೆಯಿಂದ ಜರುಗಿತು.

    ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಆವರಣದಲ್ಲಿ  ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘದ ಒಕ್ಕೂಟ ನಿಯಮಿತ ತುಮಕೂರು ಹಾಗೂ ತಾಲೂಕು ಘಟಕ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೊರಟಗೆರೆ, ತುಮಕೂರು ಜಿಲ್ಲಾ ರೈತರ ಮತ್ತು ಎಂ ಪಿ ಸಿ ಎಸ್ ನೌಕರರ ಮತ್ತು ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ ಹಾಗೂ ಕುಂಚೀಟಿಗ ಮಹಾ ಸಂಸ್ಥಾನ ಮಠದ ಸಹಯೋಗದಲ್ಲಿ     ಆಯೋಜಿಸಲಾಗಿದ್ದ ಮಿಶ್ರ ತಳಿರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ಜರಗಿ ಈ ಕಾರ್ಯಕ್ರಮ ಕೇವಲ ಸ್ಪರ್ಧೆಯಾಗಿ ಉಳಿಯದೆ, ರೈತರ ಶ್ರಮ ಮತ್ತು ಪಶುಸಂಗೋಪನೆಯ ಮಹತ್ವವನ್ನು ಸಾರುವ ವೇದಿಕೆಯಾಗಿ ಮಾರ್ಪಟ್ಟಿತ್ತು.


    Provided by
    Provided by

    ಕಾರ್ಯಕ್ರಮ ಸತತ ಎರಡು ದಿನಗಳ ಕಾಲ ಜರುಗಿ ರೈತರಿಂದ ಸಂಜೆ ಹಾಗೂ ಬೆಳಿಗ್ಗೆ ಎರಡು ಸಮಯದ ಹಾಲು ಕರೆಯುವ ಸ್ಪರ್ಧೆಯನ್ನು ಬಹಳ ಅಚ್ಚುಕಟ್ಟಾಗಿ ಹಾಲು ಒಕ್ಕೂಟ, ಪಶು ಇಲಾಖೆ ಸಹಯೋಗದಲ್ಲಿ ತುಂಬಾ ಯಶಸ್ವಿಯಾಗಿ ಆಯೋಜನೆಗೊಂಡು, ತಾಲೂಕಿನ ವಿವಿಧ ಮೂಲಗಳಿಂದ ಬಂದಂತ 50ಕ್ಕೂ ಹೆಚ್ಚಿನ ರೈತರು ತಮ್ಮ ಹಸುಗಳನ್ನು  ಸ್ಪರ್ಧಾ ಕಣಕ್ಕೆ ಉಳಿಸಿ ಎಚ್.ಎಫ್ (HF), ಜರ್ಸಿ ಹಸುಗಳನ್ನ ರೈತರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದ್ದು, ಹಾಲಿನ ಪ್ರಮಾಣ ಮಾತ್ರವಲ್ಲದೆ, ಹಾಲಿನ ಗುಣಮಟ್ಟ (ಫ್ಯಾಟ್ ಅಂಶ) ಮತ್ತು ಹಸುಗಳ ಆರೋಗ್ಯವನ್ನು ಕೂಡ ತೀರ್ಪುಗಾರರು ಪರಿಗಣಿಸಲ್ಲಾಯಿತು, ನಿರ್ದಿಷ್ಟ ಸಮಯದಲ್ಲಿ ಅತಿ ಹೆಚ್ಚು ಹಾಲು ಕರೆಯುವ ಕೌಶಲ್ಯವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಹಸುಗಳು ಶಾಂತವಾಗಿ ನಿಂತು ಸಹಕರಿಸುತ್ತಿದ್ದರೆ, ರೈತರು ಅಷ್ಟೇ ವೇಗವಾಗಿ ಕೈಚಳಕ ತೋರಿಸುತ್ತಿದ್ದರು.

    ಕಾರ್ಯಕ್ರಮದ ಅಂತ್ಯದಲ್ಲಿ ಅತಿ ಹೆಚ್ಚು ಹಾಲು ನೀಡಿದ ಹಸುಗಳ ಮಾಲೀಕರಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು. ಮೊದಲನೇ ಬಹುಮಾನವನ್ನ ಬೈಚೇನಹಳ್ಳಿ ಅನುಸೂಯಮ್ಮ ನಟರಾಜು ಎಂಬುವರಿಗೆ ರೂ.30000 ನಗದು ಹಾಗೂ ಪಾರಿತೋಷಕ, ಎರಡನೇ ಬಹುಮಾನ ಪಾತಗನಹಳ್ಳಿ ಗ್ರಾಮದ ರಾಮಕ್ಕ ರಂಗಸ್ವಾಮಿಯ ಎಂಬವರಿಗೆ ಲಭಿಸಿದ್ದು 20,000 ನಗದು ಹಾಗೂ ಪಾರಿತೋಷಕ ನೀಡಲಾಯಿತು ತೃತೀಯ ಬಹುಮಾನವನ್ನು ಪಾತಗಾನಹಳ್ಳಿ ರಾಜೇಶ್ವರಿ ಶಿವಕುಮಾರ್ ಎಂಬವರಿಗೆ ಲಭಿಸಿದ್ದು ಅವರಿಗೆ ಹತ್ತು ಸಾವಿರ ನಗದು ಹಾಗೂ ಪಾರತೋಷಕ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಯ ಬೆನ್ನೆಲು ಬಾಗಿದೆ, ಇಂತಹ ಸ್ಪರ್ಧೆಗಳು ರೈತರಿಗೆ ಪ್ರೇರಣೆ ನೀಡುವುದರ ಜೊತೆಗೆ, ಪಶುಸಂಗೋಪನೆಯ ಮಹತ್ವವನ್ನು ಮತ್ತಷ್ಟು ಜನರಿಗೆ ತಲುಪಿಸುತ್ತವೆ ಜೊತೆಗೆ, ಯುವಕರು ಕೃಷಿ ಹಾಗೂ ಪಶುಸಂಗೋಪನೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

    ತುಮಕೂರು ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ಸಿದ್ದಗಂಗಯ್ಯ ಮಾತಾಡಿ, ಹೈನುಗಾರಿಕೆ ತಾಲ್ಲೂಕಿನ ಜನರ ಬೆನ್ನೆಲುಬಾಗಿದ್ದು, ಹಾಲನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ಯಾವುದೇ ಸಮಸ್ಯೆ ಇದ್ದರೂ ನನ್ನ ಸಹಕಾರ ಇರುತ್ತದೆ ಇಲಾಖೆಯಿಂದ ಸಿಗುವಂತ ಸೌಲಭ್ಯಗಳನ್ನ ರೈತರು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ರೈತರಿಗೆ ತಿಳಿಸಿದರು.

    ಹೈನುಗಾರಿಕೆಗೆ ಸಂಬಂಧಪಟ್ಟಂತ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸಲಿದ್ದು ಈ ಬಾರಿ 40 ರಿಂದ 50 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗುವುದು ಎಂದು ಅಭಿಪ್ರಾಯಪಟ್ಟರು.

    ಶಿರಾ ತಾಲ್ಲೂಕಿನ ನಿರ್ದೇಶಕರಾದ ಎಸ್.ಆರ್.ಗೌಡ ಮಾತನಾಡಿ  ಹೈನುಗಾರಿಕೆಗೆ ಸಂಬಂಧಪಟ್ಟಂತ ಇಂತಹ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಉಳಿಸುವುದಲ್ಲದೆ, ರೈತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.

    ತುಮಕೂರು ಪಶು ಇಲಾಖೆ ಉಪ ನಿರ್ದೇಶಕ ಡಾ. ಎಚ್.ಎಮ್.ಶಿವಪ್ರಸಾದ್ ಮಾತನಾಡಿ, ಪಶುಪಾಲನೆ ಇಂದು ರೈತರ ಆರ್ಥಿಕ ಸ್ಥಿರತೆಗೆ ಮಹತ್ವದ ಆಧಾರವಾಗಿದೆ. ಉತ್ತಮ ತಳಿ ಅಭಿವೃದ್ಧಿ, ಸಮರ್ಪಕ ಆಹಾರ ಮತ್ತು ವೈಜ್ಞಾನಿಕ ನಿರ್ವಹಣೆಯಿಂದ ಹಾಲು ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಸರ್ಕಾರದ ವಿವಿಧ ಯೋಜನೆಗಳನ್ನು ಪಶು ಪಾಲಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಂತಹ ಸ್ಪರ್ಧೆಗಳು ರೈತರಲ್ಲಿ ಉತ್ತೇಜನವನ್ನು ಮೂಡಿಸುವುದರ ಜೊತೆಗೆ ಗುಣಮಟ್ಟದ ಪಶುಪಾಲನೆಗೆ ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ಮಧುಗಿರಿ ನಾಗೇಶ್ ಬಾಬು, ಚಂದ್ರಶೇಖರ್ ರೆಡ್ಡಿ ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಧಾಕರ್ ಎಂ ಎಸ್, ವ್ಯವಸ್ಥಾಪಕರಾದ ಶ್ರೀನಿವಾಸ್, ಉಪ ವ್ಯವಸ್ಥಾಪಕರಾದ ದೀಕ್ಷಿತ್, ಕೆಎಂಎಫ್ ತಾಲೂಕ ಘಟಕದ ಮುಖ್ಯಸ್ಥೆ ಪುಷ್ಪಲತಾ, ವಿಸ್ತರಣಾಧಿಕಾರಿ ಬಶೀರಾ, ಎಲೆರಾಂಪುರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ವೈವಿ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ

    March 27, 2026

    ಏ.4 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ”

    March 26, 2026

    ಕೈಕೊಟ್ಟ ಹೈನುಗಾರಿಕೆ: ಸಾಲ ಬಾಧೆಯಿಂದ ನೊಂದ ರೈತ ಸಾವಿಗೆ ಶರಣು

    March 26, 2026

    Leave A Reply Cancel Reply

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಎಲ್ ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ

    March 28, 2026

    ಬೆಂಗಳೂರು : ಸಮಾಜಮುಖಿ ಸೇವೆಯಲ್ಲಿ ಮುಂದಿರುವ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ ಐಸಿ) ಸಂಸ್ಥೆಯ ಗೋಲ್ಡನ್ ಜ್ಯೂಬಿಲಿ…

    ಸವಾಲುಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು: ಅಂಧ ಕ್ರಿಕೆಟ್ ಪಟು ದೀಪಿಕಾ ಟಿ.ಸಿ.

    March 28, 2026

    ಭ್ರಷ್ಟಾಚಾರದ ಆರೋಪ: ಕೋಟಗುಡ್ಡ ಪಂಚಾಯಿತಿಯ ಹಾಲಿ ಮತ್ತು ಮಾಜಿ ಪಿಡಿಒ ಅಮಾನತು

    March 28, 2026

    ಬೆಂಗಳೂರು–ತುಮಕೂರು–ಅರಸೀಕೆರೆ ಮಾರ್ಗದಲ್ಲಿ ನೂತನ ಮೆಮು ರೈಲು ಸಂಚಾರ ಆರಂಭ

    March 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.