ಸಿರಾ: 2025–26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಸಿರಾ ತಾಲೂಕಿಗೆ ಶೇ.89.75 ರಷ್ಟು ಫಲಿತಾಂಶ ಲಭ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು 3,553 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3189 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 364 ಮಂದಿ ಅನುತ್ತೀರ್ಣರಾಗಿದ್ದಾರೆ. ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶ ಶೇ.91.58%, ಅನುದಾನಿತ ಪ್ರೌಢಶಾಲೆಗಳ ಫಲಿತಾಂಶ ಶೇ.79.88%, ಅನುದಾನ ರಹಿತ ಪ್ರೌಢಶಾಲೆಗಳ ಫಲಿತಾಂಶ ಶೇ.96.02% ಆಗಿದೆ.
ನಗರದ ಆರ್. ರೆಹಾನ್ ಶಾಲೆಯ ಟಿ.ಎಂ. ಜೀವನ್ 620 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದರೆ ಸೇಂಟ್ ಆನ್ ಪ್ರೌಢಶಾಲೆಯ ಆರ್ ಕೀರ್ತನ 619 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದರೆ ಇದೇ ಶಾಲೆಯ ಬಲ್ಕಿಸ್ ಖಾನಂ 618 ಅಂಕಗಳನ್ನು ಪಡೆದು ತೃತೀಯ ಸ್ಥಾನ ಹೊಂದಿದ್ದಾರೆ.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದಿದ ಸಿರಾ ಬುವನಹಳ್ಳಿ ಮೊರಾರ್ಜಿ ದೇಸಾಯಿ ವಸತಿಯುತ ಪ್ರೌಢಶಾಲೆಯ ಪುನೀತ್ 615, ಬರಗೂರು ಸರ್ಕಾರಿ ಪ್ರೌಢಶಾಲೆಯ ಪುಷ್ಪಲತಾ 614, ಯುಎಬಿವಿಪಿ ಬುವನಹಳ್ಳಿ ಶಾಲೆಯ ಯುಇ ಇಂಚರ 614 ಅಂಕಗಳನ್ನು ಪಡೆದಿದ್ದಾರೆ.
ಬುವನಹಳ್ಳಿ ಎಬಿವಿಪಿ ಶಾಲೆ, ಗೌಡಗೆರೆಯ ಅಂಬೇಡ್ಕರ್ ವಸತಿ ಶಾಲೆ, ಬುವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ರಂಗನಾಥಪುರ ಅಂಬೇಡ್ಕರ್ ವಸತಿ ಶಾಲೆ, ಲಕ್ಕನಹಳ್ಳಿಯ ಅರುಣೋದಯ ಶಾಲೆ, ಬುಕ್ಕಾಪಟ್ಟಣದ ಆಕ್ಸ್ ಫರ್ಡ್ ಶಾಲೆ, ಸಿರಾ ನಗರದ ದೀಪ ಶ್ರೀ, ಗುಲ್ಜಾನೆ ರಜಾ ಶಾಲೆ, ಪೂನಂ ಶಾಲೆಗಳು ಶೇ.100ಕ್ಕೆ ನೂರಷ್ಟು ಫಲಿತಾಂಶ ಪಡೆದಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


