ತುಮಕೂರು: ಟೀ ಅಂಗಡಿ ಇಟ್ಟುಕೊಂಡು ಜೀವನಸಾಗಿಸುತ್ತಿದ್ದ ಮಹಿಳೆಯಿಂದ ಓಟಿಪಿ ಪಡೆದು 41 ಸಾವಿರ ಖಾತೆಯಿಂದ ಎಗರಿಸಿರುವ ಘಟನೆ ನಡೆದಿದೆ.
ಬಟವಾಡಿ ಹೊಯ್ಸಳಯ್ಯನ ತೋಟದ ವಾಸಿ ರಾಧಾ ಎಂಬುವರ ಮೊಬೈಲ್ ಸಂಖ್ಯೆಗೆ ಮೇ 13ರಂದು ಅಪರಿಚಿತ ನಂಬರ್ ನಿಂದ ಕರೆಬಂದಿದ್ದು, ನಿಮ್ಮ ಬ್ಯಾಂಕ್ ಖಾತೆ ಲಾಕ್ ಆಗಿದೆ. ಮೊಬೈಲ್ ಗೆ ಬಂದಿರುವ ಓಟಿಪಿ ನಂಬರ್ ಹೇಳುವಂತೆ ಕೇಳಿದ್ದಾರೆ.
ಅಪರಿಚಿತನ ಮಾತು ನಂಬಿ ಓಟಿಪಿ ಸಂಖ್ಯೆ ಹೇಳಿದ ಕೂಡಲೇ ಮಹಿಳೆ ಖಾತೆಯಿಂದ 41,241 ರೂ. ಕಡಿತವಾಗಿದ್ದು, ಮೋಸಹೋದ ಬಳಿಕ ಮನನೊಂದ ಬಡ ಮಹಿಳೆಗೆ ಸೈಬರ್ ಠಾಣೆಯಲ್ಲಿ ಗುರುವಾರ ದೂರುದಾಖಲಿಸಿದ್ದಾಳೆ.
ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಕೂಡಿಟ್ಟ ಹಣಕ್ಕೆ ಸೈಬರ್ ವಂಚಕರು ಕನ್ನಹಾಕಿದ್ದು, ಸಂಬಂಧಪಟ್ಟವರನ್ನು ಹುಡುಕಿ ಹಣ ಕೊಡಿಸುವಂತೆ ಮಹಿಳೆ ಮೊರೆಯಿಟ್ಟಿದ್ದಾಳೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


