ಚಿಕ್ಕನಾಯಕನಹಳ್ಳಿ : ತಾಲ್ಲೂಕು ಹಂದನಕೆರೆ ಹೋಬಳಿ ಬರಗೂರು ಗ್ರಾಮ ಪಂಚಾಯಿತಿ ಗದ್ದೆಗೆ ರಟ್ಟಿ ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಸರಬರಾಜು ಆಗುವ ಓವರ್ ಟ್ಯಾಂಕ್ ನೀರನ್ನು ಕುಡಿದು ಜನರು ಅಸ್ವಸ್ಥರಾದ ಘಟನೆ ನಡೆದಿದೆ.
ಟ್ಯಾಂಕ್ ನೀರು ಸೇವಿಸಿದ ಪರಿಣಾಮ ಜನರಿಗೆ ವಾಂತಿ ಭೇದಿ ಆರಂಭವಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡು ಜನರು ನರಳಿದ ಘಟನೆ ನಡೆದಿದೆ. ವಿಷಯ ತಿಳಿದ ಸಚಿವರಾದ ಮಾಧುಸ್ವಾಮಿ ಗ್ರಾಮಕ್ಕೆ ಆಗಮಿಸಿ, ಆರೋಗ್ಯ ಇಲಾಖೆಯವರನ್ನು ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ಕಳೆದ ಮೂರು ದಿನಗಳಿಂದ ಗ್ರಾಮದ ದೇವಾಲಯದ ಆವರಣದಲ್ಲಿ ವೈದ್ಯರ ತಂಡ ಬೀಡು ಬಿಟ್ಟಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ ಹಾಗೂ ಕೆಲವರು ಹಾಸನ ಆಸ್ಪತ್ರೆಗೆ ದಾಖಲಾಗಿದ್ದಾರೆ .
ಕಳೆದ ನಾಲ್ಕು ವರ್ಷಗಳಿಂದ ಓವರ್ ಟ್ಯಾಂಕ್ ಸ್ವಚ್ಛಗೊಳಿಸದಿರುವುದರಿಂದಾಗಿ ಈ ಸಮಸ್ಯೆ ಆರಂಭವಾಗಿದ್ದು, ಅಧಿಕಾರಿಗಳು ಈ ಬಗ್ಗೆ ತೀವ್ರವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ಪಿಡಿಓ ನೀರುಗಂಟಿ ಗಮನಕ್ಕೆ ತಂದರೆ ಉಡಾಫೆ ಮಾತನಾಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಗೆ ಕಾರಣರಾದ ನೀರುಗಂಟೆಯನ್ನು ಅಮಾನತು ಮಾಡುವಂತೆ ತಹಸಿಲ್ದಾರ್ ರಿಗೆ ದೂರು ನೀಡಲಾಗಿದೆ. ಇಷ್ಟಾದರೂ ಸಹ ಓವರ್ ಟ್ಯಾಂಕ್ ಅನ್ನು ಕ್ಲೀನ್ ಮಾಡದೆ ಅದೇ ನೀರನ್ನು ಮತ್ತೆ ಸರಬರಾಜು ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದಿದ್ದು, ಗ್ರಾಮಸ್ಥರ ಪ್ರಾಣದ ಜೊತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy