ಚಿನ್ನಾಭರಣ ಖರೀದಿಸಲು ಮುಂದಾಗಿರುವವರಿಗೆ ಮಾರುಕಟ್ಟೆಯಿಂದ ಸಿಹಿಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆಯಾಗಿದ್ದು, 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳು ಕಡಿಮೆಯಾಗಿವೆ. ಇದರಿಂದ ಚಿನ್ನ ಖರೀದಿಸುವ ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.ಅತ್ಯಂತ ಶುದ್ಧತೆಯ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹110 ಇಳಿಕೆಯಾಗಿದೆ. ಇದರ ಪರಿಣಾಮ 1 ಗ್ರಾಂ ಚಿನ್ನದ ದರ ₹14,918ಕ್ಕೆ ಇಳಿದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ₹1,100 ಕಡಿಮೆಯಾಗಿದ್ದು, ₹1,49,180ಕ್ಕೆ ತಲುಪಿದೆ.
ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲೂ ಇಳಿಕೆ ದಾಖಲಾಗಿದೆ. ಪ್ರತಿ ಗ್ರಾಂಗೆ ₹100 ಕಡಿಮೆಯಾಗಿದ್ದು, ಇದೀಗ 1 ಗ್ರಾಂಗೆ ₹13,675 ದರ ಇದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,000 ಇಳಿಕೆಯಾಗಿ ₹1,36,750ಕ್ಕೆ ತಲುಪಿದೆ.ಇನ್ನು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕುಸಿತ ಕಂಡುಬಂದಿದೆ. ಪ್ರತಿ ಗ್ರಾಂಗೆ ₹82 ಇಳಿಕೆಯಾಗಿದ್ದು, 1 ಗ್ರಾಂನ ದರ ₹11,189ಕ್ಕೆ ಬಂದಿದೆ. 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹820 ಇಳಿಕೆಯಾಗಿದ್ದು, ₹1,11,890ಕ್ಕೆ ತಲುಪಿದೆ.
ಹೀಗಾಗಿ ಚಿನ್ನ ಖರೀದಿಸಲು ಯೋಜಿಸಿರುವವರಿಗೆ ಇಂದಿನ ದರ ಇಳಿಕೆ ಗಮನಾರ್ಹವಾಗಿದೆ. ಆದರೆ ಆಭರಣ ಖರೀದಿಸುವಾಗ ಮೇಕಿಂಗ್ ಚಾರ್ಜ್, ಜಿಎಸ್‌ಟಿ ಹಾಗೂ ಇತರ ಶುಲ್ಕಗಳು ಪ್ರತ್ಯೇಕವಾಗಿ ಅನ್ವಯವಾಗಬಹುದು ಎಂಬುದನ್ನು ಗ್ರಾಹಕರು ಗಮನಿಸಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
