ಬೆಂಗಳೂರು: ರಾಜ್ಯದ ಆಯುರ್ವೇದ ಮತ್ತು ಹೋಮಿಯೋಪತಿ ಪದವಿ ಕೋರ್ಸ್‌ಗಳ (2026-27ನೇ ಸಾಲು) ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಆಯ್ಕೆ ದಾಖಲಿಸುವ (Option Entry) ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆರಂಭಿಸಿದೆ.
ಸರ್ಕಾರವು ಕಾಲೇಜು, ಪ್ರವರ್ಗ ಹಾಗೂ ಕೋರ್ಸ್‌ವಾರು ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಯುಜಿ-ನೀಟ್ 2026ರಲ್ಲಿ (UGNEET-2026) ಅರ್ಹತೆ ಪಡೆದು, ಈಗಾಗಲೇ ನೋಂದಣಿ ಮತ್ತು ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿ ಪರಿಶೀಲನಾ ಸ್ಲಿಪ್ (Verification Slip) ಹೊಂದಿರುವ ಅಭ್ಯರ್ಥಿಗಳು ತಮ್ಮ ಆದ್ಯತೆಗಳನ್ನು ದಾಖಲಿಸಬಹುದು.
ಪ್ರಮುಖ ದಿನಾಂಕಗಳು:
* ಆಯ್ಕೆಗಳ ದಾಖಲಾತಿ ಪ್ರಾರಂಭ: 07-10-2026, ಮಧ್ಯಾಹ್ನ 2:00 ಗಂಟೆಯಿಂದ
* ಆಯ್ಕೆಗಳ ದಾಖಲಾತಿಗೆ ಕೊನೆಯ ದಿನಾಂಕ: 12-10-2026, ಬೆಳಗ್ಗೆ 11:00 ಗಂಟೆಯವರೆಗೆ
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು ಮತ್ತು ಎಚ್ಚರಿಕೆ:
* ಹಿಂದಿನ ಸೀಟು ರದ್ದು: ಈಗಾಗಲೇ ಇತರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಈ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಂಡರೆ, ಅವರ ಹಳೆಯ ಸೀಟು ತಾನಾಗಿಯೇ ರದ್ದಾಗುತ್ತದೆ. ಯಾವುದೇ ಕಾರಣಕ್ಕೂ ಹಳೆಯ ಸೀಟು ಮರಳಿ ಸಿಗುವುದಿಲ್ಲ; ಹಂಚಿಕೆಯಾದ ಹೊಸ ಕಾಲೇಜಿಗೆ ಕಡ್ಡಾಯವಾಗಿ ಸೇರಬೇಕಾಗುತ್ತದೆ.
* ಮೂಲ ದಾಖಲೆಗಳ ಹೊಣೆ: ಹೊಸದಾಗಿ ಹಂಚಿಕೆಯಾದ ಕಾಲೇಜಿಗೆ ಪ್ರವೇಶ ಪಡೆಯಲು ನಿಗದಿತ ಸಮಯದೊಳಗೆ ಹಿಂದಿನ ಕಾಲೇಜಿನಿಂದ ಮೂಲ ದಾಖಲೆಗಳನ್ನು (Original Documents) ಪಡೆದುಕೊಳ್ಳುವ ಸಂಪೂರ್ಣ ಜವಾಬ್ದಾರಿ ಅಭ್ಯರ್ಥಿಯದ್ದೇ ಆಗಿರುತ್ತದೆ.
* ಶುಲ್ಕ ಹೊಂದಾಣಿಕೆ ಇಲ್ಲ: ಇತರ ಕೋರ್ಸ್‌ಗಳಿಗೆ ಪಾವತಿಸಿರುವ ಶುಲ್ಕವು ಆಯುಷ್ ಸೀಟುಗಳಿಗೆ ಹೊಂದಾಣಿಕೆಯಾಗುವುದಿಲ್ಲ (Adjust ಆಗುವುದಿಲ್ಲ). ಆಯುಷ್ ಸೀಟು ಪಡೆದವರು ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕು.
* ವರದಿ ಮಾಡದಿದ್ದರೆ ಎರಡೂ ಸೀಟು ರದ್ದು: ನಿಗದಿತ ಕೊನೆಯ ದಿನಾಂಕದೊಳಗೆ ನಿಯೋಜಿತ ಕಾಲೇಜಿಗೆ ಹಾಜರಾಗದಿದ್ದರೆ, ಹಂಚಿಕೆಯಾದ ಸೀಟು ಮತ್ತು ಶುಲ್ಕ ಎರಡನ್ನೂ ಕಳೆದುಕೊಳ್ಳಬೇಕಾಗುತ್ತದೆ.
* ಅರ್ಹತೆ ಇಲ್ಲದವರು: ಮೂರನೇ ಸುತ್ತಿನಲ್ಲಿ ವೈದ್ಯಕೀಯ (Medical) ಸೀಟು ಪಡೆದ ಹಾಗೂ ಈಗಾಗಲೇ ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಲ್ಲ.
ಹೆಚ್ಚಿನ ಮಾಹಿತಿ ಹಾಗೂ ಕಾಲೇಜುವಾರು ಶುಲ್ಕದ ವಿವರಗಳಿಗೆ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ (kea.kar.nic.in) ವೀಕ್ಷಿಸಲು ಕೋರಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
