nammatumakuru

    Subscribe to Updates

    Get the latest creative news from FooBar about art, design and business.

    What's Hot

    ನವರಾತ್ರಿ

    October 16, 2026

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    October 16, 2026

    ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ

    October 16, 2026
    Facebook Twitter Instagram
    ಟ್ರೆಂಡಿಂಗ್
    • ನವರಾತ್ರಿ
    • ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ
    • ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ
    • ಗರ್ಭಿಣಿಯಾಗಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು?
    • ತುಮಕೂರು: ಅ.17ರಂದು ದಸರಾ ಕವಿಗೋಷ್ಠಿ
    • ಮುಜರಾಯಿ ದೇವಾಲಯಗಳ ಹಣ ದಸರಾಗೆ ಬೇಡ: ದಾಖಲೆ ಪ್ರದರ್ಶಿಸಿ ಒತ್ತಾಯಿಸಿದ ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್
    • ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತೆ – ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನೇತೃತ್ವದಲ್ಲಿ ಪರಿಶೀಲನಾ ಸಭೆ
    • ಕೇದಿಗೇಹಳ್ಳಿ: ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ: ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ
    Uncategorized October 16, 2026

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    By adminOctober 16, 2026No Comments2 Mins Read
    yogesh n

    ತುಮಕೂರು: ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಎಲ್ಸೆವಿಯರ್ ಸಂಸ್ಥೆ ಜಂಟಿಯಾಗಿ ಪ್ರಕಟಿಸಿರುವ 2026ನೇ ಸಾಲಿನ “ವಿಶ್ವದ ಅತ್ಯುನ್ನತ ಶೇಕಡಾ 2% ವಿಜ್ಞಾನಿಗಳ” ಜಾಗತಿಕ ದತ್ತಾಂಶದ ‘ಸಿಂಗಲ್–ಇಯರ್ ಸೈಂಟಿಫಿಕ್ ಇಂಪ್ಯಾಕ್ಟ್’ ವಿಭಾಗದಲ್ಲಿ ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಎನ್. ಅವರು ಸ್ಥಾನ ಪಡೆದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅಪಾರ ಕೀರ್ತಿ ತಂದಿದ್ದಾರೆ.

    ವಿಜ್ಞಾನಿಗಳ ಸಂಶೋಧನಾ ಪ್ರಕಟಣೆಗಳು, ಲೇಖನಗಳಿಗೆ ದೊರೆತ ಜಾಗತಿಕ ಉಲ್ಲೇಖಗಳು, H–Index, ಸಹಲೇಖಕತ್ವಕ್ಕೆ ಹೊಂದಾಣಿಕೆ ಮಾಡಿದ ಸೂಚ್ಯಂಕಗಳು ಹಾಗೂ ಇತರ ಪ್ರಮಾಣೀಕೃತ ಸಂಶೋಧನಾ ಪ್ರಭಾವದ ಆಧಾರದ ಮೇಲೆ ಈ ಅಂತರರಾಷ್ಟ್ರೀಯ ದತ್ತಾಂಶವನ್ನು ಸಿದ್ಧಪಡಿಸಲಾಗಿದೆ. ಈ ಪ್ರಸಿದ್ಧ ದತ್ತಾಂಶದಲ್ಲಿ ಇನ್ಫಾರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜೀಸ್ ಮುಖ್ಯ ಕ್ಷೇತ್ರದಲ್ಲಿ ಹಾಗೂ ಅನ್ವಯಿಕ ಗಣಿತಶಾಸ್ತ್ರ ಉಪ ಕ್ಷೇತ್ರದಲ್ಲಿ ಡಾ. ಯೋಗೀಶ್ ಎನ್. ಅವರ ಹೆಸರು ದಾಖಲಾಗಿದೆ. ಸ್ವಯಂ ಉಲ್ಲೇಖಗಳನ್ನು ಹೊರತುಪಡಿಸಿ ಅನ್ವಯಿಕ ಗಣಿತಶಾಸ್ತ್ರದ ಉಪ ಕ್ಷೇತ್ರದಲ್ಲಿ ಇವರು ಜಾಗತಿಕ ಮಟ್ಟದಲ್ಲಿ1,261ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಪ್ರಸ್ತುತ 94 ಸಂಶೋಧನಾ ಪ್ರಕಟಣೆಗಳನ್ನು ಹೊಂದಿರುವ ಇವರ H–Index 9 ಆಗಿದೆ.

    ಡಾ. ಯೋಗೀಶ್ ಎನ್. ಅವರು ಅನ್ವಯಿಕ ಗಣಿತಶಾಸ್ತ್ರ, ಸಂಖ್ಯಾತ್ಮಕ ವಿಶ್ಲೇಷಣೆ, ಫಝಿ ವ್ಯವಸ್ಥೆಗಳು, ಅನಿಶ್ಚಿತತೆಯ ಗಣಿತೀಯ ಮಾದರೀಕರಣ, ಆಪ್ಟಿಮೈಸೇಶನ್ ಹಾಗೂ ಅಂತರಶಿಸ್ತೀಯ ಅನ್ವಯಿಕ ಸಂಶೋಧನಾ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ. ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧನೆ ಮತ್ತು ವಿದ್ಯಾರ್ಥಿಗಳ ಮಾರ್ಗದರ್ಶನದ ಶೈಕ್ಷಣಿಕ ಜವಾಬ್ದಾರಿಗಳ ಜೊತೆಗೆ ನಿರಂತರ ಸಂಶೋಧನೆಯಲ್ಲಿಯೂ ತೊಡಗಿಸಿಕೊಂಡು ಈ ಅಂತರರಾಷ್ಟ್ರೀಯ ಮಟ್ಟದ ಗೌರವಕ್ಕೆ ಭಾಜನರಾಗಿದ್ದಾರೆ.

    ಸರ್ಕಾರಿ ಪದವಿ ಕಾಲೇಜಿನ ಅಧ್ಯಾಪಕರೊಬ್ಬರ ಸಂಶೋಧನಾ ಸಾಧನೆಯು ಜಾಗತಿಕ ಮಟ್ಟದ ಅಧಿಕೃತ ದತ್ತಾಂಶದಲ್ಲಿ ಗುರುತಿಸಲ್ಪಟ್ಟಿರುವುದು ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ, ಯುವ ಸಂಶೋಧಕರಿಗೆ ಹಾಗೂ ಅಧ್ಯಾಪಕ ವೃಂದಕ್ಕೆ ಹೆಮ್ಮೆಯ ವಿಷಯವಾಗಿದ್ದು, ಸಂಶೋಧನಾ ಕ್ಷೇತ್ರದಲ್ಲಿ ಮುನ್ನಡೆಯಲು ದೊಡ್ಡ ಪ್ರೇರಣೆಯಾಗಿದೆ. ಇವರ ಈ ಅಪೂರ್ವ ಸಾಧನೆಗೆ ಶೈಕ್ಷಣಿಕ ಕ್ಷೇತ್ರ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    admin
    • Website

    Related Posts

    ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

    October 15, 2026

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026

    ಬರಪೀಡಿತ ತುಮಕೂರು: ಸಾಲ ವಸೂಲಾತಿಯಲ್ಲಿ ಕಠಿಣ ಕ್ರಮ ಕೈಗೊಳ್ಳದಂತೆ ಮೈಕ್ರೋ ಫೈನಾನ್ಸ್‌ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ

    October 9, 2026

    Leave A Reply Cancel Reply

    Our Picks

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ನವರಾತ್ರಿ

    October 16, 2026

    ವಿ.ಎಂ.ಎಸ್.ಗೋಪಿ ಮೈಸೂರು ದಸರಾ ಎಷ್ಟೊಂದು ಸುಂದರ ನವರಾತ್ರಿ ಉತ್ಸವ ಹಬ್ಬದ ಸಡಗರ ಎಲ್ಲೆಲ್ಲೂ ಸಂಭ್ರಮ ನವ ಅವತಾರಗಳು ಶೈಲಪುತ್ರಿ ದುರ್ಗೆ…

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    October 16, 2026

    ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ

    October 16, 2026

    ಗರ್ಭಿಣಿಯಾಗಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು?

    October 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.