- ರಾಘವೇಂದ್ರ ಅಡಿಗ ಎಚ್ಚೆನ್.
ಶಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗೋಕಾಕ್ ಮೂಲದವರಾದ ಹರಿಪ್ರಿಯ ರವಿಕೊಪ್ಪ್ ಬಂಡವಾಳ ಹೂಡುತ್ತಿರುವ ’ಗ್ರಂಥ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ.ಶ್ರೀ.ಮುರುಗ ರಾಜೇಂದ್ರ ಸ್ವಾಮಿಗಳು, ಶೂನ್ಯ ಸಂಪಾದನ ಮಠ, ಗೋಕಾಕ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರೆ, ನಟ ಅನಿರುದ್ದ್ ಜಟ್ಕರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಸಂಜೀವ್ ಗವಂಡಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ’ಭೂಲೋಕದ ಅಧಿಪತಿ’ ಎಂಬ ಕ್ಯಾಚಿ ಅಡಬರಹ ಇದೆ.
ನಾಯಕನಾಗಿ ಯುವ. ಉಳಿದಂತೆ ಹಿರಿಯ ನಟ ಅಭಿಜಿತ್, ಕಾಕ್ರೋಚ್ ಸುಧಿ, ರವಿಕಾಳೆ, ಶಯ್ಯಾಜಿರಾವ್ ಶಿಂದೆ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಅಂಜನ್ ಪೂಜಾರಿ, ಛಾಯಾಗ್ರಹಣ ವೀರೇಶ್.ಎನ್.ಟಿ.ಎ, ಸಂಕಲನ ಸತೀಶ್ ಚಂದ್ರಯ್ಯ, ಸಾಹಸ ಡಾ.ಥ್ರಿಲ್ಲರ್ ಮಂಜು, ನೃತ್ಯ ವಿ.ನಾಗೇಶ್-ಭೂಷಣ್-ವಿ.ಮುರಳಿ ಅವಾಗಿದೆ.





ನಂತರ ಮಾತನಾಡಿದ ನಿರ್ದೇಶಕರು, ಈ ಸಿನಿಮಾ ಮೂರು ವರ್ಷದ ಕನಸು. ಪದೇ ಪದೇ ಬದಲಾವಣೆ ಮಾಡಿಕೊಳ್ಳುತ್ತಾ, ಒಂದು ಹಂತದಲ್ಲಿ ಮನದಟ್ಟು ಮಾಡಿಕೊಂಡು ಹೊಸ ರೂಪದಲ್ಲಿ ಶೇಪ್ ಗೆ ತರಲಾಯಿತು. 90ರ ಕಾಲಘಟ್ಟದ ಅಂಶಗಳನ್ನು ಒಳಗೊಂಡಿದೆ. ಕರ್ನಾಟಕ ಅಲ್ಲದೆ ಬೇರೆ ರಾಜ್ಯದಲ್ಲಿ ರೌಡಿಸಂ ಹೇಗಿರುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ಆತ ತನ್ನದೆ ಗೃಂಥ ಸೃಷ್ಟಿ ಮಾಡಲು ಚಿಂತಿಸಿರುತ್ತಾನೆ. ಅವನದೇ ಆದ ಸೃಜನಾತ್ಮಕ ವಿಷಯಗಳನ್ನು ಅದರಲ್ಲಿ ಬರೆದು ಮುಂದಿನ ಪೀಳಿಗೆಗೆ ಭೂಗತ ಲೋಕ ಯಾವ ರೀತಿ ಇರುತ್ತದೆ ಎಂಬುದನ್ನು ಹೇಳ ಹೊರಟಿರುತ್ತಾನೆ. ಇದನ್ನು ಓದಿ ತಿಳಿದುಕೊಳ್ಳಬೇಕು. ಅದಕ್ಕಾಗಿ ಗ್ರಂಥ ಶೀರ್ಷಿಕೆ ಇಡಲಾಗಿದೆ. ಕಾಲ್ಪನಿಕ ಕಥೆಯಾದರೂ, ಒಂದಷ್ಟು ನೈಜ ಅಂಶಗಳನ್ನು ಬಳಸಲಾಗುತ್ತಿದೆ. ಖ್ಯಾತಿ ನಟಿ ನಾಯಕಿ ಆಗಲಿದ್ದಾರೆ. ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ. ಬೆಂಗಳೂರು, ಮಂಗಳೂರು, ಬಾಂಬೆ, ಉತ್ತರ ಕರ್ನಾಟಕ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂದು ಸಂಜೀವ್ ಗವಂಡಿ ಮಾಹಿತಿ ನೀಡಿದರು.
ದೂರದ ಊರಿನಿಂದ ಬಂದು ಚಿತ್ರ ಮಾಡುತ್ತಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ತಾವುಗಳು ಹರಸಬೇಕೆಂದು ನಿರ್ಮಾಪಕಿ ಹರಿಪ್ರಿಯ ರವಿಕೊಪ್ಪ್ ಮಾಧ್ಯಮದವರನ್ನು ಕೋರಿಕೊಂಡರು.
“ಭಾಯ್” ಚಿತ್ರದಲ್ಲಿ ನಟಿಸಿದ್ದ ಕಾರಣ ಯುವ ಭಾಯ್ ಅಂತ ಕರೆಯುತ್ತಿದ್ದರು. ಇದು ನನಗೆ ಎರಡನೇ ಚಿತ್ರ. ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿದೆ. ಮನಷ್ಯ ಸತ್ತ ಮೇಲೂ ನೆನಪು ಮಾಡಿಕೊಳ್ಳುವುದು ಪೆನ್ನು, ಗ್ರಂಥ. ಅದೇ ಲಾಂಗ್ ಸಾಯೋವರೆಗೂ ನೆನಪಿನಲ್ಲಿ ಇರುತ್ತದೆ. ಅದಕ್ಕಿರುವ ಶಕ್ತಿ ಅಂದರೆ ರೌಡಿಸಂ ಎಂದು ನಾಯಕ ಯುವ ಪಾತ್ರದ ಪರಿಚಯ ಮಾಡಿಕೊಂಡರು.
ನೆಗಟೀವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತೇನೆಂದು ಅಭಿಜಿತ್ ಪಾತ್ರದ ಗೌಪ್ಯತೆ ಕಾಪಾಡಿಕೊಂಡರು. ಇಲ್ಲಿಯವರೆಗೂ ಸಿಕ್ಕಿದಂತಹ ರೋಲ್ ಇರುತ್ತೇನೆಂದು ಕಾಕ್ರೋಚ್ ಸುಧಿ ನಕ್ಕರು.
ಇಲ್ಲಿನ ಐದು ಸಾವಿರ ಅಲ್ಲಿನ ಜನಕ್ಕೆ ಇಪ್ಪತ್ತು ಸಾವಿರ ಇದ್ದಂತೆ. ಡಿಲಿವರಿ ಬಾಯ್ ಆಗಿದ್ದ ಸಂಜೀವ್, ನಿರ್ದೇಶಕರಾಗಿರುವುದು ಸಂತಸ ತಂದಿದೆ. ನಮ್ಮವರು ಬದುಕು ಹರಸಿಕೊಂಡು ಇಲ್ಲಿಗೆ ಬಂದು ನಂತರ ಸಿನಿಮಾರಂಗಕ್ಕೆ ಬರುತ್ತಾರೆ. ಇವರೆಲ್ಲರೂ ಆ ಭಾಗದವರಾಗಿದ್ದು, ಎಲ್ಲರಿಗೂ ಒಳ್ಳೆಯದಾಗಲೆಂದು ಅತಿಥಿಯಾಗಿ ಬಂದಿದ್ದ ನಟ ನವೀನ್ ಶಂಕರ್ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
