nammatumakuru

    Subscribe to Updates

    Get the latest creative news from FooBar about art, design and business.

    What's Hot

     ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ಶಾಕ್‌! ದರ ಹೆಚ್ಚಳ ಸಾಧ್ಯತೆ? ಯಾರಿಗೆ ಬೀಳಲಿದೆ ಹೆಚ್ಚುವರಿ ಹೊರೆ?

    October 21, 2026

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ವಾರಂಟಿ ಬೇರೆ, ಗ್ಯಾರಂಟಿ ಬೇರೆ! ಹೊಸ ವಸ್ತು ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ

    October 21, 2026
    Facebook Twitter Instagram
    ಟ್ರೆಂಡಿಂಗ್
    •  ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ಶಾಕ್‌! ದರ ಹೆಚ್ಚಳ ಸಾಧ್ಯತೆ? ಯಾರಿಗೆ ಬೀಳಲಿದೆ ಹೆಚ್ಚುವರಿ ಹೊರೆ?
    • ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?
    • ವಾರಂಟಿ ಬೇರೆ, ಗ್ಯಾರಂಟಿ ಬೇರೆ! ಹೊಸ ವಸ್ತು ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ
    • ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಆದಾಯ ತೆರಿಗೆ ಇಲಾಖೆ ನಿಯಮಗಳೇನು ?
    • ‘ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್’ ಕಾರ್ಣಿಕದ ಅರ್ಥವೇನು? ಯೋಗಿ ಆದಿತ್ಯನಾಥ್‌ ಪ್ರಧಾನಿ ಆಗ್ತಾರಾ?
    • ಮಳೆ ಬಗ್ಗೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ:  ಶ್ರೀಗಳು ನೀಡಿದ ಎಚ್ಚರಿಕೆ ಏನು?
    • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ: ₹9.67 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, ಇಬ್ಬರ ಬಂಧನ
    • ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತುಮಕೂರಿನ ಸಾಧನೆ: ನಕ್ಷೆಯ ಆಕಾರದ ಮಾನವಾಕೃತಿಯಲ್ಲಿ ಸಾಮೂಹಿಕ ನೃತ್ಯ ಮತ್ತು ಗಾಯನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಾರಂಟಿ ಬೇರೆ, ಗ್ಯಾರಂಟಿ ಬೇರೆ! ಹೊಸ ವಸ್ತು ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ
    ಸ್ಪೆಷಲ್ ನ್ಯೂಸ್ October 21, 2026

    ವಾರಂಟಿ ಬೇರೆ, ಗ್ಯಾರಂಟಿ ಬೇರೆ! ಹೊಸ ವಸ್ತು ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ

    By Ganesh TumkuruOctober 21, 2026No Comments2 Mins Read
    warranty and guarantee

    ಟಿವಿ, ಫ್ರಿಡ್ಜ್, ಮೊಬೈಲ್ ಫೋನ್ ಅಥವಾ ವಾಷಿಂಗ್ ಮೆಷಿನ್ ಖರೀದಿಸುವಾಗ ಅಂಗಡಿಯವರು ಒಂದು ಅಥವಾ ಎರಡು ವರ್ಷಗಳ ವಾರಂಟಿ, ಗ್ಯಾರಂಟಿ ನೀಡುವುದಾಗಿ ಹೇಳುತ್ತಾರೆ. ಆದರೆ ಇವೆರಡರ ನಡುವಿನ ನಿಜವಾದ ವ್ಯತ್ಯಾಸವೇನು? ವಸ್ತು ಕೆಟ್ಟರೆ ಉಚಿತವಾಗಿ ರಿಪೇರಿ ಮಾಡಿಕೊಡುತ್ತಾರೆಯೇ ಅಥವಾ ಹೊಸ ವಸ್ತು ನೀಡುತ್ತಾರೆಯೇ? ಖರೀದಿಸುವ ಮುನ್ನ ಯಾವೆಲ್ಲಾ ಅಂಶಗಳನ್ನು ಪರಿಶೀಲಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

    ವಾರಂಟಿ ಎಂದರೇನು?

    ವಾರಂಟಿ (Warranty) ಎಂದರೆ ಖರೀದಿಸಿದ ವಸ್ತುವಿನಲ್ಲಿ ಉತ್ಪಾದನಾ ದೋಷ ಅಥವಾ ವಾರಂಟಿಯ ವ್ಯಾಪ್ತಿಗೆ ಬರುವ ಸಮಸ್ಯೆ ಕಂಡುಬಂದರೆ, ಕಂಪನಿಯು ನಿಗದಿತ ಅವಧಿಯಲ್ಲಿ ಅದರ ದುರಸ್ತಿಗೆ ಅಥವಾ ದೋಷಪೂರಿತ ಬಿಡಿಭಾಗಗಳ ಬದಲಾವಣೆಗೆ ಹೊಣೆ ಹೊರುವ ಭರವಸೆ.

    ಉದಾಹರಣೆಗೆ, ನೀವು ಎರಡು ವರ್ಷಗಳ ವಾರಂಟಿ ಹೊಂದಿರುವ ಟಿವಿ ಖರೀದಿಸಿದ್ದೀರಿ ಎಂದುಕೊಳ್ಳಿ. ಆ ಅವಧಿಯಲ್ಲಿ ಟಿವಿಯಲ್ಲಿ ಉತ್ಪಾದನಾ ದೋಷ ಕಂಡುಬಂದರೆ, ವಾರಂಟಿಯ ಷರತ್ತುಗಳ ಪ್ರಕಾರ ಕಂಪನಿ ಉಚಿತವಾಗಿ ರಿಪೇರಿ ಮಾಡಿಕೊಡಬಹುದು ಅಥವಾ ದೋಷಪೂರಿತ ಬಿಡಿಭಾಗವನ್ನು ಬದಲಾಯಿಸಬಹುದು. ಆದರೆ ವಸ್ತು ಕೈಯಿಂದ ಬಿದ್ದು ಒಡೆದರೆ, ನೀರು ಸೇರಿ ಹಾಳಾದರೆ ಅಥವಾ ಬಳಕೆದಾರರ ತಪ್ಪಿನಿಂದ ಹಾನಿಯಾದರೆ ಸಾಮಾನ್ಯ ವಾರಂಟಿಯಲ್ಲಿ ರಕ್ಷಣೆ ಸಿಗದೇ ಇರಬಹುದು. ಆದ್ದರಿಂದ ವಾರಂಟಿ ನಿಯಮಗಳನ್ನು ಮುಂಚಿತವಾಗಿ ಓದುವುದು ಮುಖ್ಯ.

    ಗ್ಯಾರಂಟಿ ಎಂದರೇನು?

    ಗ್ಯಾರಂಟಿ (Guarantee) ಎಂದರೆ ಉತ್ಪನ್ನದ ಗುಣಮಟ್ಟ ಅಥವಾ ಕಾರ್ಯಕ್ಷಮತೆಯ ಕುರಿತು ಕಂಪನಿ ನೀಡುವ ಭರವಸೆ. ನಿಗದಿತ ಅವಧಿಯಲ್ಲಿ ಉತ್ಪನ್ನದಲ್ಲಿ ಸಮಸ್ಯೆ ಕಂಡುಬಂದರೆ, ಕಂಪನಿಯ ನಿಯಮಗಳ ಪ್ರಕಾರ ರಿಪೇರಿ, ಬದಲಾವಣೆ ಅಥವಾ ಹಣ ಮರುಪಾವತಿಯ ಪರಿಹಾರ ದೊರೆಯಬಹುದು. ಸಾಮಾನ್ಯವಾಗಿ ವಾರಂಟಿ ದುರಸ್ತಿ ಮತ್ತು ಸೇವೆಗೆ ಸಂಬಂಧಿಸಿದ್ದರೆ, ಗ್ಯಾರಂಟಿ ಉತ್ಪನ್ನ ಬದಲಾವಣೆ ಅಥವಾ ಹಣ ಮರುಪಾವತಿಯ ಭರವಸೆಯಾಗಿ ನೀಡಲ್ಪಡಬಹುದು. ಆದರೆ ಗ್ಯಾರಂಟಿ ಎಂದರೆ ಯಾವಾಗಲೂ ಹೊಸ ವಸ್ತು ಅಥವಾ ಹಣ ವಾಪಸ್ ಸಿಗುತ್ತದೆ ಎಂದರ್ಥವಲ್ಲ. ಪರಿಹಾರವು ಕಂಪನಿಯ ಲಿಖಿತ ಷರತ್ತುಗಳು ಮತ್ತು ಉತ್ಪನ್ನದ ಮೇಲಿನ ಭರವಸೆಯನ್ನು ಅವಲಂಬಿಸಿರುತ್ತದೆ.

    ವಸ್ತು ಖರೀದಿಸುವಾಗ ಈ ಅಂಶಗಳನ್ನು ಪರಿಶೀಲಿಸಿ

    ಮೊಬೈಲ್, ಟಿವಿ, ಫ್ರಿಡ್ಜ್ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ವಾರಂಟಿ ಎಷ್ಟು ತಿಂಗಳು ಅಥವಾ ವರ್ಷಗಳವರೆಗೆ ಇದೆ ಎಂಬುದನ್ನು ಪರಿಶೀಲಿಸಿ. ವಾರಂಟಿ ಸಂಪೂರ್ಣ ಉತ್ಪನ್ನಕ್ಕೆ ಅನ್ವಯಿಸುತ್ತದೆಯೇ ಅಥವಾ ಮೋಟಾರ್, ಕಂಪ್ರೆಸರ್, ಬ್ಯಾಟರಿಯಂತಹ ನಿರ್ದಿಷ್ಟ ಭಾಗಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂದು ಕೇಳಿ ತಿಳಿದುಕೊಳ್ಳಿ.

    ರಿಪೇರಿ ಶುಲ್ಕ, ಬಿಡಿಭಾಗಗಳ ವೆಚ್ಚ, ಸರ್ವೀಸ್ ಚಾರ್ಜ್ ಮತ್ತು ಸಾರಿಗೆ ವೆಚ್ಚಗಳನ್ನು ಕಂಪನಿ ಭರಿಸುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾವ ಸಂದರ್ಭಗಳಲ್ಲಿ ವಾರಂಟಿ ಅನ್ವಯಿಸುವುದಿಲ್ಲ ಎಂಬುದನ್ನೂ ತಿಳಿದುಕೊಳ್ಳಿ. ಖರೀದಿಯ ಬಿಲ್, ವಾರಂಟಿ ಕಾರ್ಡ್ ಮತ್ತು ಪಾವತಿಯ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

    ಎಕ್ಸ್‌’ಟೆಂಡೆಡ್ ವಾರಂಟಿ ಪಡೆಯುವುದು ಲಾಭದಾಯಕವೇ?

    ಕೆಲವು ಕಂಪನಿಗಳು ಹೆಚ್ಚುವರಿ ಹಣ ಪಾವತಿಸಿ ಎಕ್ಸ್‌ಟೆಂಡೆಡ್ ವಾರಂಟಿ (Extended Warranty) ಪಡೆಯುವ ಅವಕಾಶ ನೀಡುತ್ತವೆ. ಇದು ಮೂಲ ವಾರಂಟಿ ಮುಗಿದ ನಂತರವೂ ನಿರ್ದಿಷ್ಟ ಅವಧಿಗೆ ರಿಪೇರಿ ಅಥವಾ ಇತರ ಸೇವೆಗಳ ರಕ್ಷಣೆ ನೀಡಬಹುದು.ಆದರೆ ಅದನ್ನು ಪಡೆಯುವ ಮೊದಲು ಹೆಚ್ಚುವರಿ ವೆಚ್ಚ ಎಷ್ಟು, ಯಾವ ದೋಷಗಳಿಗೆ ರಕ್ಷಣೆ ಸಿಗುತ್ತದೆ, ಯಾವ ಭಾಗಗಳು ಒಳಗೊಂಡಿವೆ ಮತ್ತು ಯಾವ ಷರತ್ತುಗಳು ಅನ್ವಯಿಸುತ್ತವೆ ಎಂಬುದನ್ನು ಪರಿಶೀಲಿಸಿ. ಅಗತ್ಯವಿಲ್ಲದ ಸೇವೆಗೆ ಹೆಚ್ಚುವರಿ ಹಣ ಖರ್ಚು ಮಾಡುವುದನ್ನು ತಪ್ಪಿಸಿ.

    ದೂರು ನೀಡುವುದು ಹೇಗೆ?

    ಖರೀದಿಸಿದ ವಸ್ತುವಿನಲ್ಲಿ ದೋಷ ಕಂಡುಬಂದರೆ ಮೊದಲು ತಯಾರಕರು ಅಥವಾ ಅಧಿಕೃತ ಸರ್ವೀಸ್ ಸೆಂಟರ್ ಅನ್ನು ಸಂಪರ್ಕಿಸಿ. ದೂರು ದಾಖಲಿಸಿದ ಸಂಖ್ಯೆ, ಬಿಲ್, ವಾರಂಟಿ ದಾಖಲೆ ಮತ್ತು ರಿಪೇರಿ ವಿವರಗಳನ್ನು ಉಳಿಸಿಕೊಳ್ಳಿ.

    ಸಮಸ್ಯೆಗೆ ಪರಿಹಾರ ಸಿಗದಿದ್ದರೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline) 1915ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಆನ್‌ ಲೈನ್ ಮೂಲಕವೂ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಅಧಿಕೃತ ಪೋರ್ಟಲ್‌ನಲ್ಲಿ ದೂರು ಸಲ್ಲಿಸುವ ಅವಕಾಶವಿದೆ.

    ಒಟ್ಟಿನಲ್ಲಿ, ವಸ್ತು ಖರೀದಿಸುವಾಗ ವಾರಂಟಿ ಇದೆಯೇ ಅಥವಾ ಗ್ಯಾರಂಟಿ ಇದೆಯೇ ಎಂಬುದನ್ನು ನೋಡುವುದಷ್ಟೇ ಸಾಕಾಗುವುದಿಲ್ಲ. ಆ ಭರವಸೆಯಡಿ ಯಾವ ಸೇವೆ ಸಿಗುತ್ತದೆ, ಯಾವ ಷರತ್ತುಗಳು ಅನ್ವಯಿಸುತ್ತವೆ ಮತ್ತು ಸಮಸ್ಯೆ ಎದುರಾದಾಗ ಪರಿಹಾರ ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಂಡೇ ಖರೀದಿ ನಿರ್ಧಾರ ಕೈಗೊಳ್ಳಿ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Guarantee Warranty
    Ganesh Tumkuru
    • Website

    Related Posts

    ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಆದಾಯ ತೆರಿಗೆ ಇಲಾಖೆ ನಿಯಮಗಳೇನು ?

    October 21, 2026

    ಆಕಾಶ ನೀಲಿಯಾಗಿ ಕಾಣುವುದೇಕೆ? ಆಕಾಶ ಕೆಂಪಾಗುವುದೇಕೆ?

    October 18, 2026

    ‘ಗ್ರಂಥ’ ಚಿತ್ರಕ್ಕೆ ಮುಹೂರ್ತ, ಭೂಗತಲೋಕದ ಕುರಿತಾದ 90ರ ಕಾಲಘಟ್ಟದ ಚಿತ್ರ

    October 17, 2026

    Leave A Reply Cancel Reply

    Our Picks

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!

    October 20, 2026

    ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?

    October 20, 2026

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

     ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ಶಾಕ್‌! ದರ ಹೆಚ್ಚಳ ಸಾಧ್ಯತೆ? ಯಾರಿಗೆ ಬೀಳಲಿದೆ ಹೆಚ್ಚುವರಿ ಹೊರೆ?

    October 21, 2026

    ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಮುಂಬರುವ ಅಕ್ಟೋಬರ್‌–ನವೆಂಬರ್‌ ಬಿಲ್ಲಿಂಗ್ ಅವಧಿಯಲ್ಲಿ ಪ್ರತಿ ಯೂನಿಟ್…

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ವಾರಂಟಿ ಬೇರೆ, ಗ್ಯಾರಂಟಿ ಬೇರೆ! ಹೊಸ ವಸ್ತು ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ

    October 21, 2026

    ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಆದಾಯ ತೆರಿಗೆ ಇಲಾಖೆ ನಿಯಮಗಳೇನು ?

    October 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.