nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೃಷಿ ಹೊಂಡಕ್ಕೆ ಬಿದ್ದು ದಂಪತಿ ಸಾವು: ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ಸಾವು!

    October 29, 2026

    ವಿಧಾನಪರಿಷತ್ ಚುನಾವಣೆ ಸೋಲಿಗೆ ನಮ್ಮವರೇ ಕಾರಣ: ಕೆ.ಎನ್. ರಾಜಣ್ಣ ಆಕ್ರೋಶ

    October 29, 2026

    ಉಪವಿಭಾಗ ಕಚೇರಿ ಸಮೀಪ ಹೊಸ ಬಾರ್‌ ಗೆ ಅನುಮತಿ ನೀಡಲು ಸಿದ್ಧತೆ?

    October 29, 2026
    Facebook Twitter Instagram
    ಟ್ರೆಂಡಿಂಗ್
    • ಕೃಷಿ ಹೊಂಡಕ್ಕೆ ಬಿದ್ದು ದಂಪತಿ ಸಾವು: ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ಸಾವು!
    • ವಿಧಾನಪರಿಷತ್ ಚುನಾವಣೆ ಸೋಲಿಗೆ ನಮ್ಮವರೇ ಕಾರಣ: ಕೆ.ಎನ್. ರಾಜಣ್ಣ ಆಕ್ರೋಶ
    • ಉಪವಿಭಾಗ ಕಚೇರಿ ಸಮೀಪ ಹೊಸ ಬಾರ್‌ ಗೆ ಅನುಮತಿ ನೀಡಲು ಸಿದ್ಧತೆ?
    • ದೊಡ್ಡೇರಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ: ಶಾಸಕ ಕೆ.ಎನ್.ರಾಜಣ್ಣಗೆ ಜನರಿಂದ ಗೌರವ
    • ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಗುತ್ತಿಗೆ ಕಾರ್ಮಿಕ ಸಾವು:  ವಸಂತನರಸಾಪುರದ ವಿಸಾಕ ಸಿಮೆಂಟ್ ಶೀಟ್ ಕಾರ್ಖಾನೆಯಲ್ಲಿ ದುರ್ಘಟನೆ; ಕಾರ್ಖಾನೆ ಮುಂದೆ ಪ್ರತಿಭಟನೆ
    • ಕೊರಟಗೆರೆ ಕ್ಷೇತ್ರದ ಎಸ್‌ ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ:  ಕ್ಷೇತ್ರದಲ್ಲಿ 1,95,244 ಮತದಾರರು; ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು
    • ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಎನ್‌ ಡಿಎ ಅಭ್ಯರ್ಥಿಗಳ ಜಯಭೇರಿ! | 2028ರ ವಿಧಾನಸಭಾ ಚುನಾವಣೆಯಲ್ಲೂ ಗೆಲುವಿನ ವಿಶ್ವಾಸ: ಪಿ.ಎನ್. ಕೃಷ್ಣಮೂರ್ತಿ
    • ಪತ್ರಕರ್ತನಿಗೆ ಪೊಲೀಸ್ ನೋಟಿಸ್: ಹಿಂಪಡೆಯಲು ಎಸ್ಪಿಗೆ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ಕ್ಷೇತ್ರದ ಎಸ್‌ ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ:  ಕ್ಷೇತ್ರದಲ್ಲಿ 1,95,244 ಮತದಾರರು; ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು
    ಕೊರಟಗೆರೆ October 29, 2026

    ಕೊರಟಗೆರೆ ಕ್ಷೇತ್ರದ ಎಸ್‌ ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ:  ಕ್ಷೇತ್ರದಲ್ಲಿ 1,95,244 ಮತದಾರರು; ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು

    By Ganesh TumkuruOctober 29, 2026No Comments2 Mins Read
    koratagere

    ಕೊರಟಗೆರೆ : ಕೊರಟಗೆರೆ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 1,95,244 ಮತದಾರರು ನೋಂದಣಿಯಾಗಿದ್ದಾರೆ ಎಂದು ಮತದಾರರ ನೋಂದಣಾಧಿಕಾರಿ ಸೋಮಪ್ಪ ಕಡುಕೋಳ ತಿಳಿಸಿದರು.

    ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾ ಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

    ಎಸ್‌ ಐಆರ್ ಪ್ರಕ್ರಿಯೆಗೂ ಮುನ್ನ ಕ್ಷೇತ್ರದಲ್ಲಿ 2,09,495 ಮತದಾರರಿದ್ದರು. ಕರಡು ಮತದಾರರ ಪಟ್ಟಿಯಲ್ಲಿ ಈ ಸಂಖ್ಯೆ 1,92,748ಕ್ಕೆ ಇಳಿಕೆಯಾಗಿತ್ತು. ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಪಟ್ಟಿಯಲ್ಲಿ 1,95,244 ಮತದಾರರು ದಾಖಲಾಗಿದ್ದಾರೆ ಎಂದು ವಿವರಿಸಿದರು.

    ಅಂತಿಮ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ 96,715 ಪುರುಷ ಮತದಾರರು, 98,523 ಮಹಿಳಾ ಮತದಾರರು ಹಾಗೂ ಆರು ತೃತೀಯ ಲಿಂಗದ ಮತದಾರರಿದ್ದಾರೆ. ಕ್ಷೇತ್ರದ ಲಿಂಗಾನುಪಾತ 1,019 ಇದೆ. ಒಟ್ಟು 256 ಮತಗಟ್ಟೆಗಳಿದ್ದು, ಹೊಸದಾಗಿ 2,786 ಮತದಾರರನ್ನು ಸೇರ್ಪಡೆ ಮಾಡಲಾಗಿದೆ. 290 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ನಿವ್ವಳ 2,496 ಮತದಾರರ ಹೆಚ್ಚಳವಾಗಿದೆ ಎಂದು ತಿಳಿಸಿದರು.

    ಕ್ಷೇತ್ರದಲ್ಲಿ 18ರಿಂದ 19 ವರ್ಷ ವಯಸ್ಸಿನ 2,637 ಯುವ ಮತದಾರರು ಹಾಗೂ 2,552 ವಿಕಲಚೇತನ ಮತದಾರರಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯಡಿ 10,557 ನೋಟಿಸ್‌ಗಳನ್ನು ಜಾರಿಗೊಳಿಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.

    ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಸೂಚಿಸಲಾದ ಕಾರಣಗಳ ವಿವರ ನೀಡಿದ ಅವರು, ಮೃತಪಟ್ಟಿರುವ 6,112 ಮಂದಿ, ಶಾಶ್ವತವಾಗಿ ಸ್ಥಳಾಂತರಗೊಂಡಿರುವ 7,705 ಮಂದಿ, ಪತ್ತೆಯಾಗದ 516 ಮಂದಿ ಹಾಗೂ ಈಗಾಗಲೇ ನೋಂದಣಿಯಾಗಿರುವ 2,414 ಮಂದಿ ಸೇರಿದಂತೆ ಒಟ್ಟು 16,747 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ತಹಶೀಲ್ದಾರ್ ಶರತ್ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಬಿಜೆಪಿ ಅಧ್ಯಕ್ಷ ರುದ್ರೇಶ್, ಲಕ್ಷ್ಮಣ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಕಾಂಗ್ರೆಸ್ ಮುಖಂಡರಾದ ರಘುವೀರ್, ಹನುಮಂತರಾಜು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಎನ್‌ ಡಿಎ ಅಭ್ಯರ್ಥಿಗಳ ಜಯಭೇರಿ! | 2028ರ ವಿಧಾನಸಭಾ ಚುನಾವಣೆಯಲ್ಲೂ ಗೆಲುವಿನ ವಿಶ್ವಾಸ: ಪಿ.ಎನ್. ಕೃಷ್ಣಮೂರ್ತಿ

    October 29, 2026

    ಮರೇನಾಯಕನಹಳ್ಳಿಯಲ್ಲಿ ವೈಭವದ ವಾಲ್ಮೀಕಿ ಜಯಂತೋತ್ಸವ:   ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್ ಉದ್ಘಾಟನೆ; ಕುಂಭ-ಕಳಶ ಮೆರವಣಿಗೆ

    October 28, 2026

    ಕೊರಟಗೆರೆ: ತುಂಡಾದ ವಿದ್ಯುತ್ ತಂತಿಗೆ 6 ಕುರಿ ಬಲಿ: ಜೀವನಾಧಾರ ಕಳೆದುಕೊಂಡ ರೈತ ಮಹಿಳೆಯಿಂದ ಕಣ್ಣೀರು, ಪರಿಹಾರಕ್ಕೆ ಆಗ್ರಹ

    October 27, 2026

    Leave A Reply Cancel Reply

    Our Picks

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಕೃಷಿ ಹೊಂಡಕ್ಕೆ ಬಿದ್ದು ದಂಪತಿ ಸಾವು: ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ಸಾವು!

    October 29, 2026

    ಮಧುಗಿರಿ: ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಪತ್ನಿಯನ್ನು ರಕ್ಷಿಸಲು ಮುಂದಾದ ಪತಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ…

    ವಿಧಾನಪರಿಷತ್ ಚುನಾವಣೆ ಸೋಲಿಗೆ ನಮ್ಮವರೇ ಕಾರಣ: ಕೆ.ಎನ್. ರಾಜಣ್ಣ ಆಕ್ರೋಶ

    October 29, 2026

    ಉಪವಿಭಾಗ ಕಚೇರಿ ಸಮೀಪ ಹೊಸ ಬಾರ್‌ ಗೆ ಅನುಮತಿ ನೀಡಲು ಸಿದ್ಧತೆ?

    October 29, 2026

    ದೊಡ್ಡೇರಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ: ಶಾಸಕ ಕೆ.ಎನ್.ರಾಜಣ್ಣಗೆ ಜನರಿಂದ ಗೌರವ

    October 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.