nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?

    November 8, 2026

    ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?

    November 8, 2026
    Facebook Twitter Instagram
    ಟ್ರೆಂಡಿಂಗ್
    • ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!
    • ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?
    • ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?
    • ಭವಿಷ್ಯದ ಜಗತ್ತನ್ನೇ ಬದಲಿಸಲಿದೆಯೇ ಎಲಾನ್ ಮಸ್ಕ್‌ ನ ಐದು ಕಂಪನಿಗಳ ಮಹಾ ಯೋಜನೆ?
    • ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!
    • ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಸಂಪ್ರದಾಯ ಶುರುವಾಗಿದ್ದು ಹೇಗೆ?
    • ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು
    • ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!
    ರಾಷ್ಟ್ರೀಯ ಸುದ್ದಿ November 8, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    By Ganesh TumkuruNovember 8, 2026No Comments2 Mins Read
    bank holiday

    ಬ್ಯಾಂಕ್‌ ಗೆ ಸಂಬಂಧಿಸಿದ ಕೆಲಸಗಳಿವೆಯೇ? ಹಾಗಿದ್ದರೆ ಮುಂದಿನ ವಾರದ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿರುವ ರಜಾ ದಿನಗಳ ಪಟ್ಟಿಯ ಪ್ರಕಾರ, ನವೆಂಬರ್ 9ರಿಂದ 15ರವರೆಗೆ ದೇಶದ ವಿವಿಧ ನಗರಗಳಲ್ಲಿ ಒಟ್ಟು ಆರು ದಿನ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ. ಹಬ್ಬಗಳು, ವಿಶೇಷ ಆಚರಣೆಗಳು ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಈ ರಜೆಗಳು ಘೋಷಣೆಯಾಗಿವೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ಶಾಖಾ ಸೇವೆಗಳು ಆಯಾ ಪ್ರದೇಶಗಳ ರಜಾ ದಿನಗಳಂದು ಸ್ಥಗಿತಗೊಳ್ಳಲಿವೆ. ಆದರೆ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.

    ನವೆಂಬರ್ 9, ಸೋಮವಾರ:

    ದೀಪಾವಳಿ, ಲಕ್ಷ್ಮಿ ಪೂಜೆ, ಗೋವರ್ಧನ ಪೂಜೆ ಹಾಗೂ ವಿಶ್ವಕರ್ಮ ದಿನದ ಅಂಗವಾಗಿ ಅಗರ್ತಲಾ, ಭೋಪಾಲ್, ಚಂಡೀಗಢ, ಗ್ಯಾಂಗ್ಟಕ್, ಇಂಫಾಲ, ಜೈಪುರ, ಕಾನ್ಪುರ ಮತ್ತು ಲಕ್ನೋ ನಗರಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

    ನವೆಂಬರ್ 10, ಮಂಗಳವಾರ:

    ಬಲಿಪಾಡ್ಯಮಿ, ವಿಕ್ರಮ ಸಂವತ್ ಹೊಸ ವರ್ಷ ಹಾಗೂ ಗೋವರ್ಧನ ಪೂಜೆಯ ಹಿನ್ನೆಲೆಯಲ್ಲಿ ಬೆಂಗಳೂರು, ಅಹಮದಾಬಾದ್, ಬೇಲಾಪುರ, ಡೆಹ್ರಾಡೂನ್, ಗ್ಯಾಂಗ್ಟಕ್, ಮುಂಬೈ ಮತ್ತು ನಾಗ್ಪುರ ನಗರಗಳ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ.

    ನವೆಂಬರ್ 11, ಬುಧವಾರ:

    ಭಾಯಿ ದೂಜ್, ನಿಂಗೋಲ್ ಚಕ್ಕೌಬಾ ಹಾಗೂ ಚಿತ್ರಗುಪ್ತ ಜಯಂತಿ ಆಚರಣೆಗಳ ಹಿನ್ನೆಲೆಯಲ್ಲಿ ಗ್ಯಾಂಗ್ಟಕ್, ಇಂಫಾಲ, ಕಾನ್ಪುರ, ಕೋಲ್ಕತ್ತಾ, ಲಕ್ನೋ ಮತ್ತು ಶಿಮ್ಲಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ವಿಶೇಷವಾಗಿ ಗ್ಯಾಂಗ್ಟಕ್‌ನಲ್ಲಿ ಸತತ ಮೂರು ದಿನ ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳಲಿವೆ.

    ನವೆಂಬರ್ 13, ಶುಕ್ರವಾರ:

    ವಂಗಾಲ ಉತ್ಸವದ ಹಿನ್ನೆಲೆಯಲ್ಲಿ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.

    ನವೆಂಬರ್ 14, ಶನಿವಾರ:

    ತಿಂಗಳ ಎರಡನೇ ಶನಿವಾರವಾಗಿರುವುದರಿಂದ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

    ನವೆಂಬರ್ 15, ಭಾನುವಾರ:

    ವಾರದ ಸಾರ್ವತ್ರಿಕ ರಜೆಯಾದ ಭಾನುವಾರದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ.

    ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ರಜೆ ಇಲ್ಲ!

    ಬ್ಯಾಂಕ್ ಶಾಖೆಗಳಿಗೆ ರಜೆ ಇದ್ದರೂ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಯುಪಿಐ (UPI), ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.ಇದಲ್ಲದೆ, ಎಟಿಎಂ ಮೂಲಕ ಹಣ ಪಡೆಯುವುದು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಹಾಗೂ ಆನ್‌ಲೈನ್ ಹಣ ವರ್ಗಾವಣೆ ಸೇವೆಗಳನ್ನು ಗ್ರಾಹಕರು ಬಳಸಿಕೊಳ್ಳಬಹುದು. ಎನ್‌ಇಎಫ್‌ಟಿ (NEFT), ಆರ್‌ಟಿಜಿಎಸ್ (RTGS) ಸೇವೆಗಳೂ ಲಭ್ಯವಿರುತ್ತವೆ.

    ಆದರೆ ಬ್ಯಾಂಕ್ ಶಾಖೆಗಳಲ್ಲಿ ನೇರವಾಗಿ ಮಾಡಿಸಬೇಕಾದ ಹಣಕಾಸಿನ ವ್ಯವಹಾರಗಳು, ಚೆಕ್ ಕ್ಲಿಯರೆನ್ಸ್ ಹಾಗೂ ಇತರ ದಾಖಲೆ ಸಂಬಂಧಿತ ಕೆಲಸಗಳಿದ್ದರೆ ಆಯಾ ನಗರದ ರಜಾ ಪಟ್ಟಿಯನ್ನು ಪರಿಶೀಲಿಸಿ ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವುದು ಉತ್ತಮ.

    ಸೂಚನೆ: ಬ್ಯಾಂಕ್ ರಜೆಗಳು ರಾಜ್ಯ ಮತ್ತು ನಗರಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಎಲ್ಲ ನಗರಗಳಲ್ಲೂ ಆರು ದಿನ ಬ್ಯಾಂಕ್‌ ಗಳು ಮುಚ್ಚಿರುವುದಿಲ್ಲ. ನಿಮ್ಮ ಬ್ಯಾಂಕ್ ಶಾಖೆಯ ಸ್ಥಳೀಯ ರಜಾ ಪಟ್ಟಿಯನ್ನು ಪರಿಶೀಲಿಸಿ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026

    Leave A Reply Cancel Reply

    Our Picks

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ಬ್ಯಾಂಕ್‌ ಗೆ ಸಂಬಂಧಿಸಿದ ಕೆಲಸಗಳಿವೆಯೇ? ಹಾಗಿದ್ದರೆ ಮುಂದಿನ ವಾರದ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಭಾರತೀಯ ರಿಸರ್ವ್ ಬ್ಯಾಂಕ್…

    ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?

    November 8, 2026

    ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?

    November 8, 2026

    ಭವಿಷ್ಯದ ಜಗತ್ತನ್ನೇ ಬದಲಿಸಲಿದೆಯೇ ಎಲಾನ್ ಮಸ್ಕ್‌ ನ ಐದು ಕಂಪನಿಗಳ ಮಹಾ ಯೋಜನೆ?

    November 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.