ತುಮಕೂರು: ತಾಲೂಕಿನ ದೊಡ್ಡನಾರವಂಗಲ ಗ್ರಾಮದ ಅಮಾನಿಕೆರೆ ಸರ್ವೆ ನಂಬರ್ 40/2ರ ಜಮೀನಿನ ಪಕ್ಕದಲ್ಲಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೃತನು ಸುಮಾರು 135 ಸೆಂ.ಮೀ ಎತ್ತರ, ಸಾಧಾರಣ ಮೈಕಟ್ಟು ಹಾಗೂ ಕಪ್ಪು ಮೈಬಣ್ಣ ಹೊಂದಿದ್ದಾನೆ. ಎರಡೂ ಮೊಣಕೈಗಳಲ್ಲಿ ಸುಟ್ಟ ಹಳೆಯ ಗಾಯದ ಗುರುತುಗಳಿವೆ.
ಮೃತನ ಮೈ ಮೇಲೆ ಬಿಳಿ ಮತ್ತು ಕಪ್ಪು ಬಣ್ಣದ ಗೆರೆಗಳುಳ್ಳ ತುಂಬು ತೋಳಿನ ಅಂಗಿ ಹಾಗೂ ಕಾಫಿ ಬಣ್ಣದ ಪ್ಯಾಂಟ್ ಇದ್ದು. ಮೃತ ವ್ಯಕ್ತಿಯ ಗುರುತು ಅಥವಾ ವಾರಸುದಾರರ ಬಗ್ಗೆ ಮಾಹಿತಿ ತಿಳಿದಿರುವವರು ಕೂಡಲೇ 0816–2278000 ಅಥವಾ ಮೊಬೈಲ್ ಸಂಖ್ಯೆ 9480802950 ಸಂಪರ್ಕಿಸುವಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
