ಕುಂದಗೋಳ (ಧಾರವಾಡ ಜಿಲ್ಲೆ): ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಕುಂದಗೋಳ ಪಟ್ಟಣದ ಮರಾಠ ಭವನದಲ್ಲಿ ಚುನಾವಣಾ ಜಾಗೃತಿಯ ಕುರಿತು ‘ನಮ್ಮ ವೋಟು ನಮ್ಮ ಹಕ್ಕು, ನಮ್ಮ ಸಂವಿಧಾನ ನಮ್ಮ ಹಕ್ಕು’ ಸಂವಿಧಾನ ಜಾಗೃತ ಚಿಂತನ ಮಂಥನ ಪೂರ್ವಭಾವಿ ಸಭೆಯು ಯಶಸ್ವಿಯಾಗಿ ನಡೆಯಿತು.
ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಎಸ್. ಶಿವಳ್ಳಿ ಅವರ ಅಧ್ಯಕ್ಷತೆಯಲ್ಲಿ ಈ ಮಹತ್ವದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಕ್ಷೇತ್ರದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರು ಭಾಗವಹಿಸಿ ಸಂವಿಧಾನ ಮತ್ತು ಮತದಾನದ ಹಕ್ಕಿನ ಮಹತ್ವದ ಕುರಿತು ಚಿಂತನ-ಮಂಥನ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಫಕ್ಕೀರೇಶ್ ರೆಡ್ಡೇರ, ಬಸವರಾಜ್ ಶಿರಸಂಗಿ, ಗಂಗಾಧರ್ ಪಾನಿಗಟ್ಟಿ, ಗಂಗಾಧರ್ ಕಂಟೆಗೌಡರ, ಹೋರಾಟ ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ಸಂಜು ಬೆಳಗೇರಿ, ಮಾಂತೇಶ್ ಕುಸುಗಲ್, ರಾಜು ಮಾದರ್, ಫಕ್ಕೀರೇಶ್ ಗಾಂಜಿ, ರೈತ ಹೋರಾಟಗಾರರಾದ ಅಖಿಲ ತಿವಾರಿ, ಪ್ರೇಮ ಮೇಟಿ, ರತ್ನವ್ವ ಗಿಡ್ಡವೀರಣ್ಣನವರ, ರತ್ನವ್ವ ಕಾಮನಹಳ್ಳಿ, ಸಂಗೀತಾ, ಬಿಬಿ ಜಾನ್, ಬಾಬಾ ಜಾನ್ ಸುಲ್ತಾನವರ, ಹಜರತಲಿ, ಕಾಂತು ದೊಡ್ಡಮನಿ, ಖಾದರ್ ಸಾಬ್ ಚನ್ನಾಪುರ, ಗದಿಗೆಪ್ಪ ಪುಟ್ಟನವರ, ಮಲ್ಲಯ್ಯಜ್ಜ, ಉಪೇಂದ್ರ ದೇಶಪಾಂಡೆ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
