nammatumakuru

    Subscribe to Updates

    Get the latest creative news from FooBar about art, design and business.

    What's Hot

    ಆಶ್ರಯ ನೀಡಿದ ವೈದ್ಯ ದಂಪತಿಗೆ ನಂಬಿಕೆ ದ್ರೋಹ: 800 ಗ್ರಾಂ ಚಿನ್ನಾಭರಣ ಕದ್ದ ಮಹಿಳೆ ಬಂಧನ, ಕೊಲೆ ಸಂಚೂ ಬಯಲು!

    November 21, 2026

    ಮಕ್ಕಳ ಭವಿಷ್ಯ ರೂಪಿಸಲು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ: ಡಿಸಿಎಂ ಡಾ.ಜಿ.ಪರಮೇಶ್ವರ್

    November 20, 2026

    ಹೋನಕಲ್ಲು ಮಲ್ಲೇಶ್ವರ ಕ್ಷೇತ್ರಕ್ಕೆ KSRTC ಬಸ್ ಸೌಲಭ್ಯ |  ಭಕ್ತರು, ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದನೆ ; ಜನ ಪ್ರತಿನಿಧಿಗಳಿಗೆ ಬಸವ ರಮಾನಂದ ಶ್ರೀಗಳ ಕೃತಜ್ಞತೆ

    November 20, 2026
    Facebook Twitter Instagram
    ಟ್ರೆಂಡಿಂಗ್
    • ಆಶ್ರಯ ನೀಡಿದ ವೈದ್ಯ ದಂಪತಿಗೆ ನಂಬಿಕೆ ದ್ರೋಹ: 800 ಗ್ರಾಂ ಚಿನ್ನಾಭರಣ ಕದ್ದ ಮಹಿಳೆ ಬಂಧನ, ಕೊಲೆ ಸಂಚೂ ಬಯಲು!
    • ಮಕ್ಕಳ ಭವಿಷ್ಯ ರೂಪಿಸಲು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ: ಡಿಸಿಎಂ ಡಾ.ಜಿ.ಪರಮೇಶ್ವರ್
    • ಹೋನಕಲ್ಲು ಮಲ್ಲೇಶ್ವರ ಕ್ಷೇತ್ರಕ್ಕೆ KSRTC ಬಸ್ ಸೌಲಭ್ಯ |  ಭಕ್ತರು, ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದನೆ ; ಜನ ಪ್ರತಿನಿಧಿಗಳಿಗೆ ಬಸವ ರಮಾನಂದ ಶ್ರೀಗಳ ಕೃತಜ್ಞತೆ
    • ಸ್ವಾರ್ಥ ಬಿಟ್ಟರೆ ಮೋಕ್ಷ ಪ್ರಾಪ್ತಿ: ಕುಂಚಶ್ರೀ |  ನಿಸ್ವಾರ್ಥ ಸೇವೆಯಿಂದ ಮಾತ್ರ ಸಮಾಜದಲ್ಲಿ ಶಾಶ್ವತ ಹೆಸರು ಗಳಿಸಲು ಸಾಧ್ಯ: ಶ್ರೀ ಹನುಮಂತನಾಥ ಸ್ವಾಮೀಜಿ
    • ಪತ್ನಿ ಪತಿಯ ಮಡಿಲಲ್ಲಿ ಕುಳಿತುಕೊಳ್ಳುವುದು ಭಾರತೀಯ ಸಂಸ್ಕೃತಿಯಲ್ಲಿ ತಪ್ಪೇ? ಶಿಲ್ಪಕಲೆ, ಪುರಾಣಗಳಲ್ಲಿದೆ ಉಲ್ಲೇಖ!
    • ಕರಿ ಬಸವೇಶ್ವರ ಸ್ವಾಮಿ ಮಠ ಪ್ರವೇಶಕ್ಕೆ ಮುಂದಾದ ಮುನಿರಾಬಾದ್ ಸ್ವಾಮೀಜಿ | ಪೀಠಾಧಿಪತಿ ನೇಮಕ ವಿವಾದ ಮತ್ತಷ್ಟು ತೀವ್ರ
    • ನೇಗಲಾಲದ ಶ್ರೀ ಕಾವಲಮ್ಮ ದೇವಾಲಯಕ್ಕೆ 80 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ | ನ.21ರಂದು ಪ್ರಜಾ ಸೇವಾ ಆಂದೋಲನದಲ್ಲಿ ಡಾ.ಜಿ. ಪರಮೇಶ್ವರ್ ಅವರಿಂದ ರಸ್ತೆ ಲೋಕಾರ್ಪಣೆ
    • ಮದ್ಯ ಸೇವನೆಯಿಂದ ಕ್ಯಾನ್ಸರ್ ಚಿಕಿತ್ಸೆಯ ಪರಿಣಾಮ ಶೇ.50ರಷ್ಟು ಕುಸಿತ? ಹೊಸ ಅಧ್ಯಯನದಲ್ಲಿ ಆತಂಕಕಾರಿ ಸಂಗತಿ ಬಹಿರಂಗ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಆಶ್ರಯ ನೀಡಿದ ವೈದ್ಯ ದಂಪತಿಗೆ ನಂಬಿಕೆ ದ್ರೋಹ: 800 ಗ್ರಾಂ ಚಿನ್ನಾಭರಣ ಕದ್ದ ಮಹಿಳೆ ಬಂಧನ, ಕೊಲೆ ಸಂಚೂ ಬಯಲು!
    ತುಮಕೂರು November 21, 2026

    ಆಶ್ರಯ ನೀಡಿದ ವೈದ್ಯ ದಂಪತಿಗೆ ನಂಬಿಕೆ ದ್ರೋಹ: 800 ಗ್ರಾಂ ಚಿನ್ನಾಭರಣ ಕದ್ದ ಮಹಿಳೆ ಬಂಧನ, ಕೊಲೆ ಸಂಚೂ ಬಯಲು!

    By Ganesh TumkuruNovember 21, 2026No Comments2 Mins Read
    sneha sowmya
    ಆರೋಪಿಗಳಾದ ಸ್ನೇಹ ಮತ್ತು ಸೌಮ್ಯ

    ನಮ್ಮತುಮಕೂರು: ಮನೆ ಕೆಲಸಕ್ಕೆಂದು ಬಂದು ವೈದ್ಯ ಕುಟುಂಬದ ನಂಬಿಕೆ ಗಳಿಸಿದ್ದ ಮಹಿಳೆಯೊಬ್ಬಳು, ಬರೋಬ್ಬರಿ 800 ಗ್ರಾಂಗೂ ಅಧಿಕ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಿದ ಘಟನೆ ತುಮಕೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕಳ್ಳತನದ ವಿಚಾರ ಬಯಲಾಗುವ ಭೀತಿಯಲ್ಲಿ ಕುಟುಂಬದ ಇಬ್ಬರನ್ನು ಕೊಲೆ ಮಾಡಲು ಆರೋಪಿತೆ ಸಂಚು ರೂಪಿಸಿದ್ದ ಆಘಾತಕಾರಿ ಅಂಶವೂ ತನಿಖೆಯಲ್ಲಿ ಹೊರಬಿದ್ದಿದೆ. ಪ್ರಕರಣ ಸಂಬಂಧ ಸ್ನೇಹಾ (24) ಮತ್ತು ಸೌಮ್ಯ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಜಯನಗರ ನಿವಾಸಿಗಳಾದ ವೈದ್ಯ ದಂಪತಿ ಯಶವಂತ್ ಮತ್ತು ನಳಿನಿ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸುಮಾರು ಎರಡು ವರ್ಷಗಳ ಹಿಂದೆ ವೈಯಕ್ತಿಕ ಸಮಸ್ಯೆಯಿದೆ ಎಂದು ಬಂದಿದ್ದ ಸ್ನೇಹಾಗೆ ವೈದ್ಯ ದಂಪತಿ ಮಾನವೀಯತೆಯಿಂದ ಆಶ್ರಯ ನೀಡಿದ್ದರು. ಗರ್ಭಿಣಿಯಾಗಿದ್ದ ಆಕೆಗೆ ಹೆರಿಗೆ ಮಾಡಿಸಿ, ಮಗುವಿನೊಂದಿಗೆ ಮನೆಯಲ್ಲಿರಲು ಅವಕಾಶ ಕಲ್ಪಿಸಿದ್ದರು. ಅಲ್ಲದೆ, ಆಕೆಯೊಂದಿಗೆ ಬಂದಿದ್ದ ಅತ್ತೆ, ದೊಡ್ಡಮ್ಮ ಹಾಗೂ ಪತಿ ರಾಕೇಶ್‌ಗೂ ಆಶ್ರಯ ನೀಡಿ, ಸ್ನೇಹಾಳಿಗೆ ಮನೆ ಕೆಲಸ ಹಾಗೂ ದೊಡ್ಡಮ್ಮನಿಗೆ ಆಸ್ಪತ್ರೆಯಲ್ಲಿ ಸಂಬಳ ಸಹಿತ ಕೆಲಸ ನೀಡಿದ್ದರು. ಊಟ, ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಿದ್ದರೂ, ಸ್ನೇಹಾ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದಳು.

    ಕಳೆದ ಆರೇಳು ತಿಂಗಳಲ್ಲಿ ಮನೆಯ ವಿವಿಧ ಕೊಠಡಿಗಳಲ್ಲಿದ್ದ ಲಾಕರ್‌ಗಳ ಕೀಗಳನ್ನು ಕದ್ದು, ಪೂರ್ವಜರ ಆಭರಣಗಳು, ಮದುವೆ ಚಿನ್ನ, ಪತಿ ನೀಡಿದ್ದ ಉಡುಗೊರೆ ಆಭರಣಗಳು, ವಜ್ರ ಹಾಗೂ ಬೆಳ್ಳಿ ಆಭರಣ ಸೇರಿದಂತೆ 800 ಗ್ರಾಂಗೂ ಅಧಿಕ ಆಭರಣಗಳನ್ನು ಕಳವು ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದ ಸ್ವಂತ ಆಸ್ಪತ್ರೆಯ ಕಾರ್ಯಕ್ರಮಕ್ಕೂ ಮುನ್ನ, ವರಮಹಾಲಕ್ಷ್ಮಿ ಹಬ್ಬದ ವೇಳೆ ಲಾಕರ್ ತೆರೆಯಲು ಹೋದಾಗ ಕೀ ಸಿಗದೆ ಬೇರೊಬ್ಬರಿಂದ ಲಾಕರ್ ತೆರೆಸಿದಾಗ ಆಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ.

    ವೈದ್ಯ ದಂಪತಿ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸರು ತನಿಖೆ ಕೈಗೊಂಡಾಗ ಸ್ನೇಹಾಳ ಕೃತ್ಯ ಬಯಲಾಗಿದೆ. ಕದ್ದ ಆಭರಣಗಳನ್ನು ಸೌಮ್ಯ ಮೂಲಕ ಮಾರಾಟ ಮಾಡಿ, ಆ ಹಣದಲ್ಲಿ ಕಾರು, ಬೈಕ್, ಆಟೋ, ಫ್ರಿಡ್ಜ್, ವಾಷಿಂಗ್ ಮಷಿನ್ ಹಾಗೂ ಟಿವಿ ಖರೀದಿಸಿದ್ದಳು ಎನ್ನಲಾಗಿದೆ. ಕಳ್ಳತನ ಬಯಲಾಗುವ ಆತಂಕದಲ್ಲಿ ವೈದ್ಯರ ತಾಯಿ ಮತ್ತು ಮಗುವಿಗೆ ವಿಷವಿಟ್ಟು ಕೊಲೆ ಮಾಡಿ, ಅದನ್ನು ಅಪರಿಚಿತ ಕಳ್ಳರ ಕೃತ್ಯ ಎಂದು ಬಿಂಬಿಸಲು ಸ್ನೇಹಾ ಸಂಚು ರೂಪಿಸಿದ್ದಳು ಎಂಬ ಮಾಹಿತಿಯನ್ನೂ ವೈದ್ಯ ದಂಪತಿ ತಿಳಿಸಿದ್ದಾರೆ.

    ಸದ್ಯ ಆರೋಪಿಗಳಿಂದ ಒಂದು ಕಾರು, ಎರಡು ಬೈಕ್‌ ಗಳು, ಒಂದು ಆಟೋ, ಗೃಹೋಪಯೋಗಿ ವಸ್ತುಗಳು ಹಾಗೂ 220 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಮಕ್ಕಳ ಭವಿಷ್ಯ ರೂಪಿಸಲು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ: ಡಿಸಿಎಂ ಡಾ.ಜಿ.ಪರಮೇಶ್ವರ್

    November 20, 2026

    ಕರಿ ಬಸವೇಶ್ವರ ಸ್ವಾಮಿ ಮಠ ಪ್ರವೇಶಕ್ಕೆ ಮುಂದಾದ ಮುನಿರಾಬಾದ್ ಸ್ವಾಮೀಜಿ | ಪೀಠಾಧಿಪತಿ ನೇಮಕ ವಿವಾದ ಮತ್ತಷ್ಟು ತೀವ್ರ

    November 20, 2026

    ದೊಡ್ಡನಾರವಂಗಲ ಅಮಾನಿಕೆರೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

    November 19, 2026

    Leave A Reply Cancel Reply

    Our Picks

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಆಶ್ರಯ ನೀಡಿದ ವೈದ್ಯ ದಂಪತಿಗೆ ನಂಬಿಕೆ ದ್ರೋಹ: 800 ಗ್ರಾಂ ಚಿನ್ನಾಭರಣ ಕದ್ದ ಮಹಿಳೆ ಬಂಧನ, ಕೊಲೆ ಸಂಚೂ ಬಯಲು!

    November 21, 2026

    ನಮ್ಮತುಮಕೂರು: ಮನೆ ಕೆಲಸಕ್ಕೆಂದು ಬಂದು ವೈದ್ಯ ಕುಟುಂಬದ ನಂಬಿಕೆ ಗಳಿಸಿದ್ದ ಮಹಿಳೆಯೊಬ್ಬಳು, ಬರೋಬ್ಬರಿ 800 ಗ್ರಾಂಗೂ ಅಧಿಕ ಚಿನ್ನ ಮತ್ತು…

    ಮಕ್ಕಳ ಭವಿಷ್ಯ ರೂಪಿಸಲು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ: ಡಿಸಿಎಂ ಡಾ.ಜಿ.ಪರಮೇಶ್ವರ್

    November 20, 2026

    ಹೋನಕಲ್ಲು ಮಲ್ಲೇಶ್ವರ ಕ್ಷೇತ್ರಕ್ಕೆ KSRTC ಬಸ್ ಸೌಲಭ್ಯ |  ಭಕ್ತರು, ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದನೆ ; ಜನ ಪ್ರತಿನಿಧಿಗಳಿಗೆ ಬಸವ ರಮಾನಂದ ಶ್ರೀಗಳ ಕೃತಜ್ಞತೆ

    November 20, 2026

    ಸ್ವಾರ್ಥ ಬಿಟ್ಟರೆ ಮೋಕ್ಷ ಪ್ರಾಪ್ತಿ: ಕುಂಚಶ್ರೀ |  ನಿಸ್ವಾರ್ಥ ಸೇವೆಯಿಂದ ಮಾತ್ರ ಸಮಾಜದಲ್ಲಿ ಶಾಶ್ವತ ಹೆಸರು ಗಳಿಸಲು ಸಾಧ್ಯ: ಶ್ರೀ ಹನುಮಂತನಾಥ ಸ್ವಾಮೀಜಿ

    November 20, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.