nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಣ ಪಾವತಿಸಿದರೂ ಡ್ರಿಪ್ ಪರಿಕರ ವಿತರಣೆ ಇಲ್ಲ; ರೈತೋದಯ ಹಸಿರು ಸೇನೆ ಅಧ್ಯಕ್ಷ ಕುರಿಮಲ್ಲಪ್ಪ ಆಕ್ರೋಶ

    November 24, 2026

    ಕೊರಟಗೆರೆ TAPCMS ಅಧ್ಯಕ್ಷರಾಗಿ ವಿನಯ್ ಕುಮಾರ್ ಅವಿರೋಧ ಆಯ್ಕೆ

    November 24, 2026

    ಆಡಿಟ್ ಹೆಸರಿನಲ್ಲಿ ಉದ್ಯಮಿಗಳಿಗೆ ಕಿರುಕುಳ? ₹4 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು CGST ಅಧೀಕ್ಷಕರಿಗೆ ಸಿಬಿಐ ಶಾಕ್!

    November 24, 2026
    Facebook Twitter Instagram
    ಟ್ರೆಂಡಿಂಗ್
    • ಹಣ ಪಾವತಿಸಿದರೂ ಡ್ರಿಪ್ ಪರಿಕರ ವಿತರಣೆ ಇಲ್ಲ; ರೈತೋದಯ ಹಸಿರು ಸೇನೆ ಅಧ್ಯಕ್ಷ ಕುರಿಮಲ್ಲಪ್ಪ ಆಕ್ರೋಶ
    • ಕೊರಟಗೆರೆ TAPCMS ಅಧ್ಯಕ್ಷರಾಗಿ ವಿನಯ್ ಕುಮಾರ್ ಅವಿರೋಧ ಆಯ್ಕೆ
    • ಆಡಿಟ್ ಹೆಸರಿನಲ್ಲಿ ಉದ್ಯಮಿಗಳಿಗೆ ಕಿರುಕುಳ? ₹4 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು CGST ಅಧೀಕ್ಷಕರಿಗೆ ಸಿಬಿಐ ಶಾಕ್!
    • ಕೊರಟಗೆರೆ ರಾಜಕೀಯಕ್ಕೆ ಲೆಕ್ಕಾಚಾರದಲ್ಲಿ ಹೊಸ ತಿರುವು! | ಟಿಕೆಟ್ ಲೆಕ್ಕಾಚಾರ ಬದಲು, ಮೀಸಲಾತಿ ಲೆಕ್ಕಾಚಾರದಲ್ಲಿ ತಿರುವು
    • ಔರಾದ್: ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಿ: ವಿನೋದ ಅಪ್ಪೆ
    • 1.83 ಲಕ್ಷ ರೈತರಿಗೆ ₹45.77 ಕೋಟಿ ಬೆಳೆ ಪರಿಹಾರ ವಿತರಣೆ |  ತುಮಕೂರು ಜಿಲ್ಲೆಯ 10 ತಾಲೂಕುಗಳೂ ಬರಪೀಡಿತ ಘೋಷಣೆ
    • ನ.28ರಂದು ರಂಗಾಪುರದ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಕಾರ್ತೀಕ ದೀಪೋತ್ಸವ | ಕೇಂದ್ರ ಸಚಿವ ವಿ. ಸೋಮಣ್ಣ ವಿಶೇಷ ಅತಿಥಿ
    • ಕೆಸಿಆರ್‌ ಗೆ ರಾಜಕೀಯ ಶಕ್ತಿ ತುಂಬಲು ಕುಂಚಶ್ರೀಗಳು ದಾರಿ ತೋರಲಿ:  ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ರಾಜಕೀಯಕ್ಕೆ ಲೆಕ್ಕಾಚಾರದಲ್ಲಿ ಹೊಸ ತಿರುವು! | ಟಿಕೆಟ್ ಲೆಕ್ಕಾಚಾರ ಬದಲು, ಮೀಸಲಾತಿ ಲೆಕ್ಕಾಚಾರದಲ್ಲಿ ತಿರುವು
    ಕೊರಟಗೆರೆ November 24, 2026

    ಕೊರಟಗೆರೆ ರಾಜಕೀಯಕ್ಕೆ ಲೆಕ್ಕಾಚಾರದಲ್ಲಿ ಹೊಸ ತಿರುವು! | ಟಿಕೆಟ್ ಲೆಕ್ಕಾಚಾರ ಬದಲು, ಮೀಸಲಾತಿ ಲೆಕ್ಕಾಚಾರದಲ್ಲಿ ತಿರುವು

    By Ganesh TumkuruNovember 24, 2026No Comments3 Mins Read
    District Panchayat
    • ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ : ಸುಮಾರು ಹತ್ತು ವರ್ಷಗಳ ಸುದೀರ್ಘ ವಿರಾಮದ ಬಳಿಕ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆ, ಜನಸಂಪರ್ಕ ಹಾಗೂ ಅಭ್ಯರ್ಥಿಗಳ ಆಯ್ಕೆಯ ಕುರಿತು ರಾಜಕೀಯ ಪಕ್ಷಗಳ ಮುಖಂಡರು ಚರ್ಚೆ ನಡೆಸುತ್ತಿರುವ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಹಂಚಿಕೆ ಸ್ಥಳೀಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

    ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ್ ಅವರ ತವರು ಕ್ಷೇತ್ರದಲ್ಲಿ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿರುವುದು ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚೆಯಾಗಿದೆ. ಹಲವು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ಶ್ರಮಿಸಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದ ಪುರುಷ ಆಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರ ಇದೀಗ ಬದಲಾಗುವಂತಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

    ಆರು ಕ್ಷೇತ್ರಗಳ ಮೀಸಲಾತಿ ವಿವರ

    • ಹೊಳವನಹಳ್ಳಿ : ಹಿಂದುಳಿದ ವರ್ಗ ‘ಅ’ ಮಹಿಳೆ.
    • ಕಸಬಾ : ಅನುಸೂಚಿತ ಜಾತಿ ಮಹಿಳೆ.
    • ಕೋಳಾಲ : ಹಿಂದುಳಿದ ವರ್ಗ ‘ಬ’ ಮಹಿಳೆ.
    • ತೋವಿನಕೆರೆ : ಸಾಮಾನ್ಯ ಕ್ಷೇತ್ರ.
    • ಚಿಕ್ಕತೊಟ್ಟಿಲುಕೆರೆ : ಅನುಸೂಚಿತ ಜಾತಿ ಮಹಿಳೆ.
    • ಪುರವಾರ : ಸಾಮಾನ್ಯ ಮಹಿಳೆ.

    ಒಂದೇ ಸಾಮಾನ್ಯ ಕ್ಷೇತ್ರದತ್ತ ಪುರುಷ ಆಕಾಂಕ್ಷಿಗಳ ಚಿತ್ತ!

    ಆರು ಕ್ಷೇತ್ರಗಳಲ್ಲಿ ಐದು ಮಹಿಳಾ ಮೀಸಲಾತಿಗೆ ಒಳಪಟ್ಟಿರುವುದರಿಂದ ಪುರುಷ ಆಕಾಂಕ್ಷಿಗಳಿಗೆ ಸ್ಪರ್ಧೆಯ ಅವಕಾಶ ಸೀಮಿತವಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ತೋವಿನಕೆರೆ ಕ್ಷೇತ್ರದತ್ತ ವಿವಿಧ ಪಕ್ಷಗಳ ಪುರುಷ ಮುಖಂಡರ ಗಮನ ಕೇಂದ್ರೀಕೃತವಾಗುವ ಸಾಧ್ಯತೆ ಇದೆ.

    ಇದರಿಂದ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಪಕ್ಷದ ನಿಷ್ಠೆ, ಸಂಘಟನಾ ಸಾಮರ್ಥ್ಯ, ಸ್ಥಳೀಯ ಜನಬೆಂಬಲ, ಆರ್ಥಿಕ ಮತ್ತು ಸಾಮಾಜಿಕ ಪ್ರಭಾವ ಸೇರಿದಂತೆ ಹಲವು ಅಂಶಗಳು ಚರ್ಚೆಗೆ ಬರುವ ಸಾಧ್ಯತೆಯಿದೆ. ಒಂದೇ ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳು ಅವಕಾಶ ನಿರೀಕ್ಷಿಸುತ್ತಿರುವುದರಿಂದ ಪಕ್ಷಗಳ ಒಳಗಿನ ಟಿಕೆಟ್ ಲೆಕ್ಕಾಚಾರವೂ ಕುತೂಹಲ ಮೂಡಿಸಿದೆ.

    ಬಿಜೆಪಿ–ಜೆಡಿಎಸ್‌ ನಲ್ಲಿ ಟಿಕೆಟ್ ಲೆಕ್ಕಾಚಾರಕ್ಕೆ ಹೊಸ ತಿರುವು

    ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಗ್ರಾಮೀಣ ಮಟ್ಟದಲ್ಲಿ ತಮ್ಮ ಸಂಘಟನೆಯನ್ನು ಬಲಪಡಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿವೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದಿರುವ ಅನೇಕ ಮುಖಂಡರು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ರಾಜಕೀಯವಾಗಿ ಮುನ್ನಡೆಯುವ ಪ್ರಮುಖ ಅವಕಾಶವೆಂದು ನಿರೀಕ್ಷಿಸಿದ್ದರು.

    ಆದರೆ ಮೀಸಲಾತಿ ಹಂಚಿಕೆಯ ಹಿನ್ನೆಲೆಯಲ್ಲಿ ಹಲವು ಪುರುಷ ಆಕಾಂಕ್ಷಿಗಳು ತಮ್ಮ ಮುಂದಿನ ರಾಜಕೀಯ ನಡೆ ಬದಲಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಮಹಿಳಾ ಮೀಸಲಾತಿ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸುವುದು ಪಕ್ಷಗಳಿಗೂ ಸವಾಲಾಗಿದೆ.

    ಮತ್ತೊಂದೆಡೆ, ಪಕ್ಷಕ್ಕಾಗಿ ನಿರಂತರವಾಗಿ ದುಡಿದಿರುವ ಮಹಿಳಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ನಾಯಕಿಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಕುರಿತು ಪಕ್ಷಗಳೊಳಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

    ಯುವ ನಾಯಕತ್ವಕ್ಕೆ ರಾಜಕೀಯ ಅವಕಾಶ ಎಲ್ಲಿ?

    ಮೀಸಲಾತಿ ಹಂಚಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾ ಕಾರ್ಯದರ್ಶಿ ಡಾ. ದರ್ಶನ್ ಕೆ.ಎಲ್., ಹಲವು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿರುವ ಮೊದಲ ಸಾಲಿನ ನಾಯಕರು ಹಾಗೂ ಸ್ಥಳೀಯ ಆಕಾಂಕ್ಷಿಗಳಿಗೆ ಈ ಮೀಸಲಾತಿ ಹಂಚಿಕೆಯಿಂದ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಯುವ ನಾಯಕತ್ವಕ್ಕೆ ಸೂಕ್ತ ಮನ್ನಣೆ ಹಾಗೂ ರಾಜಕೀಯ ಅವಕಾಶ ದೊರೆಯದಿರುವುದು ಬೇಸರದ ಸಂಗತಿ. ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿಯುವ ಯುವಕರಿಗೆ ಚುನಾವಣಾ ರಾಜಕಾರಣದಲ್ಲಿ ಅವಕಾಶ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಯುವ ನಾಯಕತ್ವವನ್ನು ಬೆಳೆಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

    ವರಿಷ್ಠರ ನಿರ್ಧಾರದತ್ತ ಆಕಾಂಕ್ಷಿಗಳ ಚಿತ್ತ

    ಮೀಸಲಾತಿ ಪ್ರಕಟಣೆಯ ನಂತರ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಸ್ಥಳೀಯ ಮುಖಂಡರು ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ ಆರಂಭಿಸಿದ್ದಾರೆ. ಪಕ್ಷದ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಸ್ಥಳೀಯವಾಗಿ ಪಕ್ಷಕ್ಕಾಗಿ ದುಡಿದಿರುವ ಮುಖಂಡರು, ಯುವಕರು ಹಾಗೂ ಮಹಿಳಾ ಕಾರ್ಯಕರ್ತೆಯರಿಗೆ ಯಾವ ರೀತಿಯ ಪ್ರಾತಿನಿಧ್ಯ ನೀಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

    ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಅದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದಿರುವ ಯುವಕರು ಮತ್ತು ಅನುಭವಿ ಮುಖಂಡರ ರಾಜಕೀಯ ಅವಕಾಶಗಳ ಕುರಿತ ಚರ್ಚೆಯೂ ಮುನ್ನೆಲೆಗೆ ಬಂದಿದೆ.

    ಒಟ್ಟಾರೆ, ಕೊರಟಗೆರೆ ಕ್ಷೇತ್ರದ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಹಂಚಿಕೆ ಮುಂಬರುವ ಚುನಾವಣೆಯ ರಾಜಕೀಯ ಸಮೀಕರಣಗಳಿಗೆ ಹೊಸ ಆಯಾಮ ನೀಡಿದೆ. ಮಹಿಳಾ ಅಭ್ಯರ್ಥಿಗಳ ಆಯ್ಕೆ, ಪುರುಷ ಆಕಾಂಕ್ಷಿಗಳ ಮುಂದಿನ ನಡೆ, ಯುವ ನಾಯಕರಿಗೆ ಪಕ್ಷಗಳು ನೀಡುವ ಅವಕಾಶ ಹಾಗೂ ರಾಜಕೀಯ ಪಕ್ಷಗಳ ಆಂತರಿಕ ತಂತ್ರಗಾರಿಕೆ ಮುಂಬರುವ ದಿನಗಳಲ್ಲಿ ಕ್ಷೇತ್ರದ ರಾಜಕೀಯ ಚರ್ಚೆಯ ಪ್ರಮುಖ ವಿಷಯಗಳಾಗಲಿವೆ.

    ಹತ್ತು ವರ್ಷಗಳ ಬಳಿಕ ಎದುರಾಗುತ್ತಿರುವ ಚುನಾವಣೆಯಲ್ಲಿ ಕೊರಟಗೆರೆಯ ರಾಜಕೀಯ ಅಖಾಡಕ್ಕೆ ಹೊಸ ಮುಖಗಳು ಪ್ರವೇಶಿಸಲಿವೆಯೇ? ಮಹಿಳಾ ಮೀಸಲಾತಿ ಕ್ಷೇತ್ರಗಳಲ್ಲಿ ಪಕ್ಷಗಳು ಯಾರಿಗೆ ಮಣೆ ಹಾಕಲಿವೆ? ಒಂದೇ ಸಾಮಾನ್ಯ ಕ್ಷೇತ್ರದಲ್ಲಿ ಪುರುಷ ಆಕಾಂಕ್ಷಿಗಳ ರಾಜಕೀಯ ಪೈಪೋಟಿ ಹೇಗಿರಲಿದೆ? ಪಕ್ಷಕ್ಕಾಗಿ ದುಡಿದ ಯುವ ನಾಯಕರಿಗೆ ವರಿಷ್ಠರು ಯಾವ ರೀತಿಯ ಜವಾಬ್ದಾರಿ ನೀಡಲಿದ್ದಾರೆ? ಎಂಬ ಪ್ರಶ್ನೆಗಳು ಇದೀಗ ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಕೊರಟಗೆರೆ TAPCMS ಅಧ್ಯಕ್ಷರಾಗಿ ವಿನಯ್ ಕುಮಾರ್ ಅವಿರೋಧ ಆಯ್ಕೆ

    November 24, 2026

    ಒಕ್ಕಲಿಗರ ಭವನಕ್ಕೆ ಶಂಕುಸ್ಥಾಪನೆ | ಒಕ್ಕಲಿಗ ನಾಯಕರ ಆಡಳಿತದಲ್ಲಿ ಸರ್ವಜನರ ಅಭಿವೃದ್ಧಿಗೆ ಆದ್ಯತೆ: ನಂಜಾವಧೂತ ಸ್ವಾಮೀಜಿ

    November 24, 2026

    ತೊರೆಯ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ!

    November 24, 2026

    Leave A Reply Cancel Reply

    Our Picks

    ಆಡಿಟ್ ಹೆಸರಿನಲ್ಲಿ ಉದ್ಯಮಿಗಳಿಗೆ ಕಿರುಕುಳ? ₹4 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು CGST ಅಧೀಕ್ಷಕರಿಗೆ ಸಿಬಿಐ ಶಾಕ್!

    November 24, 2026

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 

    November 23, 2026

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಹಣ ಪಾವತಿಸಿದರೂ ಡ್ರಿಪ್ ಪರಿಕರ ವಿತರಣೆ ಇಲ್ಲ; ರೈತೋದಯ ಹಸಿರು ಸೇನೆ ಅಧ್ಯಕ್ಷ ಕುರಿಮಲ್ಲಪ್ಪ ಆಕ್ರೋಶ

    November 24, 2026

    ಪಾವಗಡ: ತೋಟಗಾರಿಕೆ ಇಲಾಖೆಯ ನೀರಾವರಿ ಯೋಜನೆಯಡಿ ಹನಿ ನೀರಾವರಿ (ಡ್ರಿಪ್) ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿ, ನಿಗದಿತ ವಂತಿಕೆ ಪಾವತಿಸಿದ್ದರೂ…

    ಕೊರಟಗೆರೆ TAPCMS ಅಧ್ಯಕ್ಷರಾಗಿ ವಿನಯ್ ಕುಮಾರ್ ಅವಿರೋಧ ಆಯ್ಕೆ

    November 24, 2026

    ಆಡಿಟ್ ಹೆಸರಿನಲ್ಲಿ ಉದ್ಯಮಿಗಳಿಗೆ ಕಿರುಕುಳ? ₹4 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು CGST ಅಧೀಕ್ಷಕರಿಗೆ ಸಿಬಿಐ ಶಾಕ್!

    November 24, 2026

    ಕೊರಟಗೆರೆ ರಾಜಕೀಯಕ್ಕೆ ಲೆಕ್ಕಾಚಾರದಲ್ಲಿ ಹೊಸ ತಿರುವು! | ಟಿಕೆಟ್ ಲೆಕ್ಕಾಚಾರ ಬದಲು, ಮೀಸಲಾತಿ ಲೆಕ್ಕಾಚಾರದಲ್ಲಿ ತಿರುವು

    November 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.